ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for November 1st, 2007

ಅ೦ಥ ದೇವರಿಗೆ ಧಿಕ್ಕಾರವಿರಲಿ?!

Posted by ajadhind on November 1, 2007

“ಅವರು ಗೋದ್ರಾದಲ್ಲಿ ನಮ್ಮ ಸನ್ಯಾಸಿಗಳನ್ನು ಸುಟ್ಟರು. ಅದಿಕ್ಕೆ ಸಾವಿರಗಳ ಲೆಕ್ಕದಲ್ಲಿ ನಾವವರನ್ನು ಕೊ೦ದೆವು”. “ಮು೦ಬೈ ಸ್ಪೋಟ ನಡೆದಿದ್ದ್ದಕ್ಕೆ ಕಾರಣರ್ಯಾರು? ಅವರು ಬಾಬರಿ ಮಸೀದಿ ಧ್ವ೦ಸ ಮಾಡಿ ದೇಶಾದ್ಯ೦ತ ಮುಸಲ್ಮಾನರನ್ನು ಕೊ೦ದದ್ದೇ ಕಾರಣ”. “ನಾವು ಮಸೀದಿ ಧ್ವ೦ಸ ಮಾಡಿದ್ಯಾಕೆ? ಆ ಜಾಗದಲ್ಲಿದ್ದ ರಾಮಮ೦ದಿರವನ್ನು ಅವರ ಜನ ಒಡೆದು ಹಾಕಿದ್ದಕ್ಕೆ….” ಈ ವಾದ ಸರಣಿಗೆ ಯಾವತ್ತಾದರು ಕೊನೆ ಸಿಕ್ಕೀತಾ?

‘ಮುಸಲ್ಮಾನರು ಹೊರ ದೇಶದಿ೦ದ ಬ೦ದವರೇ ಹೊರತು ನಿಜವಾದ ಭಾರತೀಯರಲ್ಲ’ ಎ೦ದು ಹಿ೦ದೂವಾದಿ[?] ಗಳು. ‘ಇಸ್ಲಾ೦ ವಿಶ್ವದ ಕನಸು ನಮ್ಮದು’ ಎನ್ನುವ ಮುಸ್ಲಿ೦ ಮೂಲಭೂತವಾದಿಗಳು, ಇಬ್ಬರಿ೦ದಲೂ ಸೌಖ್ಯವಿಲ್ಲ. ಹಿ೦ದೂವಾದಿಗಳ ಮಾತಿಗೆ ಬೆಲೆ ಕೊಟ್ಟು ಎಲ್ಲಾ ಮುಸಲ್ಮಾನರನ್ನು ಹೊರಗಟ್ಟಿದರೆ ನಮ್ಮ ದೇಶ ಸುಭಿಕ್ಷವಾಗಿಬಿಡುತ್ತ? ಹಿ೦ದೂ ಧರ್ಮದಲ್ಲಿನ ಜಾತಿ ಪದ್ಧತಿಯಲ್ಲಿನ ಹುಳುಕುಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ವಿಶ್ವದಲ್ಲಿನ ಜನರೆಲ್ಲ ಮುಸಲ್ಮಾನರಾದರೆ ಭೂಮಿ ಸ್ವರ್ಗವಾಗುತ್ತಾ? ಅಲ್ಲೂ ಶಿಯಾ – ಸುನ್ನಿಗಳ ಜಗಳ.ಬೇರೆ ಧರ್ಮಗಳೂ ಈ ಬಲಹೀನತೆಗಳಿ೦ದ ಹೊರತಲ್ಲ.

ಯಾವ ಪ್ರಾಣಿಯೂ ಬೇರೊ೦ದು ಪ್ರಾಣಿಗೆ “ನೀನೂ ನನ್ನ ರೀತಿಯೇ ಬದುಕಬೇಕು” ಎ೦ದ್ಹೇಳುವುದಿಲ್ಲ. ಪ್ರಾಣಿಗಿ೦ತ ಬಹಳ ಬುದ್ಧಿವ೦ತರೆ೦ದುಕೊಳ್ಳುವ ನಾವು ಎಲ್ಲರೂ ಒ೦ದೇ ಧರ್ಮದ ಪ್ರತಿಕ್ರ್ರ್ತಿಗಳ೦ತಿರಬೇಕೆ೦ದು ಯಾಕೆ ಬಯಸಬೇಕು?

ಬಹುಶಃ ಯಾವ ದೇವರೂ ” ಪರಧರ್ಮದ ಗರ್ಭಿಣಿ ಹೆ೦ಗಸಿನ ಹೊಟ್ಟೆ ಸೀಳಿ ಸಾಯಿಸಿ” ಎ೦ದು ಭೋದಿಸುವುದಿಲ್ಲ. ದುರದ್ರ್ರಷ್ಟವಶಾತ್ ಅ೦ಥ ದೇವರಿದ್ದರೆ ಅವನಿಗೆ ನಿಮ್ಮದೂ ಒ೦ದು ಧಿಕ್ಕಾರವಿರಲಿ.

Posted in ನನ್ನ ಲೇಖನಿಯಿ೦ದ | 4 Comments »