ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಪೋಲೀಸ್ ‘ಮಹಾನ್’ ನಿರ್ದೇಶಕರಿಗೊಂದು ಪತ್ರ

Posted by ajadhind on September 4, 2010

“ಕೆಲವು ವ್ಯಕ್ತಿಗಳು ಅಮಾಯಕರಿಗೆ ದುರ್ಭೋದನೆ ಮಾಡಿ ಎಡಪಂಥೀಯ ಉಗ್ರವಾದದೆಡೆಗೆ ಸೆಳೆಯುತ್ತಿದ್ದಾರೆ” ಎಂದು ನೀವು ಹೇಳಿರುವುದಾಗಿ ವರದಿಯಾಗಿದೆ. ಬಹಳ ಸತ್ಯವಾದ ನುಡಿಮುತ್ತುದುರಿಸಿದ್ದೀರಿ. ಆಹಾ! ಇಂಥ ಒಬ್ಬ ಪೋಲೀಸ್ ಮಹಾನಿರ್ದೇಶಕ ಇಷ್ಥು ದಿನ ಎಲ್ಲಿ ಹೋಗಿದ್ದರು? ಎಂದೆನಿಸುತ್ತಿದೆ.

ಬರೀ ಸ್ವತಂತ್ರ್ಯದಿಂದ ಪ್ರಯೋಜನವಿಲ್ಲ, ಸಮತಾ ಸಮಾಜ ನಮ್ಮ ಕನಸಾಗಬೇಕು ಎಂದ ಭಗತ್ ಸಿಂಗ್, ಗ್ರಾಮಗಳ ಅಭಿವ್ರದ್ಧಿಯೇ ನಿಜವಾದ ಅಭಿವ್ರದ್ಧಿ ಎಂದ ಗಾಂಧಿ. ಇವರ ಮಾತುಗಳೆಲ್ಲ ದುರ್ಭೋಧನೆ ಎಂದು ನಮಗೆ ತಿಳಿಯದೆ ಹೋಯಿತಲ್ಲ ಎಂದು ದುಃಖವಾಗುತ್ತಿದೆ. ದುರ್ಭೋದಕರ ಸಂತತಿ ಇನ್ನು ನಶಿಸಿಲ್ಲ. ದೇಶದ ಸಂಪತ್ತನ್ನು ಲೂಟಿಗೈಯ್ಯುವವರ ಬಗ್ಗೆ ಪುಂಖಾನುಪುಂಖವಾಗಿ ಬರೆಯುವ ಪತ್ರಕರ್ತರು, ಹನ್ನೆರಡು ವರ್ಷದ ಅವಧಿಯಲ್ಲಿ ಮೃತ್ಯುವಿನ ಕುಣಿಕೆಗೆ ಜೋತುಬಿದ್ದ ಕೇವಲ ಒಂದೂವರೆ ಲಕ್ಷ ರೈತರ ಬಗ್ಗೆ ಬರೆದು ನಮ್ಮ ತಲೆಗೆ ದುರ್ಭೋಧನೆ ಬಿತ್ತುವ ಪಿ.ಸಾಯಿನಾಥ್ ರಂತವರ ವಿರುದ್ಧ ನೀವು ಕ್ರಮ ಕೈಗೊಂಡಲ್ಲಿ ಬಹಳ ಉಪಕಾರವಾಗುತ್ತೆ.

ಮುಸ್ಲಿಮರ ಕೈಕಡಿಯುವೆವೆಂದು ಅಬ್ಬರಿಸುವವರು, ಹಿಂದೂಗಳ ನಾಲಿಗೆ ಸೀಳಿ ಎಂದು ಉಪದೇಶಿಸುವವರು, ಕ್ರೈಸ್ತ ಪ್ರಾಧ್ಯಾಪಕರ ಕೈ ಕತ್ತರಿಸಿದವರು, ಜಾತಿಯ ಹೆಸರಿನಲ್ಲಿ ಮರ್ಯಾದ ಹತ್ಯೆ ನಡೆಸುವವರು, ಬುರ್ಖಾ  ಪರ ವಿರೋಧವಾಗಿ ಚಳುವಳಿ ನಡೆಸುವವರು, ನಗರ ಸ್ವಚ್ಚಗೊಳಿಸಲು ರಸ್ತೆಯಲ್ಲೇ ಹೋಮ ಹವನ ನಡೆಸುವವರು – ಇಂಥವರ ಸಂಖ್ಯೆ ಹೆಚ್ಚಾಗಲಿ. ಈ ಸಂತತಿಯವರ ಸುಭೋದನೆಯಿಂದ ನಾವು ಕೂಡ ಸಮ ಸಮಾಜ, ಭ್ರಷ್ಥಾಚಾರ ಮುಕ್ತ ಸಮಾಜದ ಕನಸು ಮರೆತು ಜಾತಿ ಮತ ಧರ್ಮ ಭಾಷೆ ಪ್ರಾಂತ್ಯದ ಅಮಲಿನಲ್ಲಿ ತೇಲುತ್ತಾ ಚಿಕ್ಕಪುಟ್ಟ ಕೆಲಸಗಳಿಗೂ ಸರ್ವರಿಗೂ ಲಂಚವೆಂಬ ಶ್ರೇಷ್ಠ ಪದಾರ್ಥವನ್ನು ಕೊಡುತ್ತಾ ಪ್ರಜಾಪ್ರಭುತ್ವದ ಚುನಾವಣೆಗಳಲ್ಲಿ ಪ್ರಭುಗಳಿಂದ ಹಣ ಸ್ವೀಕರಿಸಿ, ಹೆಚ್ಚು ಹಣ ಕೊಟ್ಟವರಿಗೆ ವೋಟು ಮಾರಿ ಅವರನ್ನು ಗೆಲ್ಲಿಸಿ ನಂತರ ಆ ಪ್ರಭುಗಳು ಪ್ರಜೆಗಳಿಗೆ ಮಾಡುವ ಅನ್ಯಾಯ, ದೇಶದ ಮೇಲೆ ಮಾಡುವ ಸವಾರಿಯನ್ನು ನೋಡುತ್ತಾ ಆನಂದಿಸುವುದರಲ್ಲಿ ಎಂಥ ಸುಖವಿದೆಯಲ್ಲವೇ? ಮಾನ್ಯ ಪೋಲೀಸ್ ಮಹಾನಿರ್ದೇಶಕರು ಇಂಥ ಸುಭೋದಕರ ಸಂಖ್ಯೆಯನ್ನು ಹೆಚ್ಚಿಸುವುದರ ಕಡೆಗೆ ಗಮನ ಹರಿಸಬೇಕೆಂದು ಈ ಮೂಲಕ ವಿನಂತಿಮಾಡುತ್ತಿದ್ದೇನೆ.

ಎಲ್ಲಕ್ಕಿಂತ ಮೊದಲು ರಾಜ್ಯದ ಪೋಲೀಸರು ಪ್ರತಿ ಕೇಸಿಗೆ average 2,100 ರುಪಾಯಿ ಪಡೆಯುತ್ತಾರೆ ಎಂದು ಅಧ್ಯಯನ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಬೇಕಾಗಿ ನಮ್ಮ ಆಗ್ರಹ.

ಇಂತಿ,

‘ದುರ್ಭೋದಕರ ನಡುವೆ ಸಿಕ್ಕಿಹಾಕಿಕೊಂಡಿರುವ ಅಮಾಯಕ’

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

 
Follow

Get every new post delivered to your Inbox.