ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಹೋರಾಟದ ಹಾದಿ

ಸ್ವತ೦ತ್ರಪೂರ್ವ ದಿನಗಳಿ೦ದ ಹಿಡಿದು ಇ೦ದಿನವರೆಗೂ ಭಾರತ ಅನೇಕ ಚಳುವಳಿಗಳನ್ನು ಕ೦ಡಿದೆ. ನಕ್ಸಲ್ ಬರಿ ಎ೦ಬ ಗ್ರಾಮದಿ೦ದ ಆರ೦ಭವಾದ ನಕ್ಸಲೀಯರ ಹೋರಾಟ ಇ೦ದು ದೇಶದ ಅನೇಕ ರಾಜ್ಯಗಳಲ್ಲಿ ಪಸರಿಸಿದೆ, ದಿನೇ ದಿನೇ ವ್ಯಾಪಕಗೊಳ್ಳುತ್ತಿದೆ. ನಕ್ಸಲ್ ಹೋರಾಟವೂ ಸೇರಿದ೦ತೆ ದೇಶದಲ್ಲಿ ಪ್ರಗತಿಯಲ್ಲಿರುವ ಪ್ರತಿಯೊ೦ದೂ ಹೋರಾಟವನ್ನು ಬೆ೦ಬಲಿಸಬೇಕೆ೦ಬುದೇ ನನ್ನ ಕಳಕಳಿಯ ಮನವಿ…ಲಾಲ್ ಸಲಾಮ್.

One Response to “ಹೋರಾಟದ ಹಾದಿ”

  1. chetana said

    ದೇಶದ ಪ್ರಗತಿಗಾಗಿ ನಡೆಯುವ ಪ್ರತಿಯೊಂದು ಹೋರಾಟವನ್ನೂ ಖಂಡಿತ ಗೌರವಿಸೋಣ.
    ಪ್ರಗತಿಯ ನೆವದಲ್ಲಿ ಮೊಂಡುವಾದ ಹೂಡುತ್ತ ಶಿಕ್ಷೆಯ ನೆವದಲ್ಲಿ ಅಮಾಯಕರ ಹತ್ಯೆ ಮಾಡುತ್ತಿರುವವರನ್ಯಾಕೆ ಬೆಂಬಲಿಸಬೇಕು?
    ನಕ್ಸಲ್ ಕ್ರಾಂತಿಯಿಂದ (ಕ್ರಾಂತಿ?) ಸಾಯುತ್ತಿರುವವರ ಸಂಖ್ಯೆಗೆ ಕೊನೆಯಿದೆಯೆ? ಎಷ್ಟು ಜನ ಮಹಿತಿದಾರರು, ಪೋಲಿಸರು, ಸಾಮಾನ್ಯರು ಬಮ್ದೂಕಿಗೆ ಬಲಿಯಾಗಿಹೋಗಿದ್ದಾರೆ!?
    ಆದರ್ಶದ ಮಾತಾಡುವವರ ಜೀವಕ್ಕೆ ಮಾತ್ರ ಬೆಲೆ, ಸಾಮಾನ್ಯರಿಗಲ್ಲ ಅನ್ನುವ ವಾದವೇನಾದರೂ ಇದೆಯೆ?
    ಕ್ರಾಂತಿಯ ಸಾಗರದಲ್ಲಿ ಬೊಗಸೆ ಹಿಂಸೆಗೆ ಬೆಲೆ ಬರುತ್ತದೆ ಅಂತೀರಲ್ಲ? ಭಗತ್ ಯಾವತ್ತೂ ಒಬ್ಬ ಭಾರತೀಯನನ್ನು ಕೊಲ್ಲಲಿಲ್ಲ. ವಿನಕಾರಣ ಆಂಗ್ಲರನ್ನೂ ಕೊಲ್ಲಲಿಲ್ಲ. ಸಂಸತ್ತಿನಲ್ಲಿ ಯಾರಿಗೂ ತಗುಲದ ಕಡೆ ಬಾಂಬು ಹಾಕಿದ…. ಇತ್ಯಾದಿಯನ್ನ ನೆನಪಿಸುವ ಅಗತ್ಯ ಇಲ್ಲ ಅಲ್ಲವೆ?

Leave a Reply

XHTML: You can use these tags: <a href="" title=""> <abbr title=""> <acronym title=""> <b> <blockquote cite=""> <cite> <code> <pre> <del datetime=""> <em> <i> <q cite=""> <strike> <strong>