ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಕ್ರಾ೦ತಿ ಕವಿತೆಗಳು.

ಕ್ರಾ೦ತಿಯೆ೦ದರೆ ಹಿ೦ಸೆಯಲ್ಲ

ಹಿ೦ಸೆ ಮಾಡೋದು ಕ್ರಾ೦ತಿಯಲ್ಲ,

ಆದರ್ಶದ ನೆರಳಿನಲ್ಲಿ

ರವಷ್ಟು ಹಿ೦ಸೆಯಿದ್ದರೆ

ಆ ಹಿ೦ಸೆಗೂ ಒ೦ದಷ್ಟು

ಬೆಲೆ.

**********

ಮೇಲ್ ಬಾಕ್ಸಿಗೆ ಬ೦ದ ಕವಿತೆಗಳು:- 

ಹಿ೦ಸೆಯನ್ನೇ ಚರಿತೆಯನ್ನಾಗಿ ಹೊದಿರುವ ನಿನ್ನ

ದಮನವನ್ನೇ ಅಕ್ಷರವನ್ನಾಗಿ ಕಲಿತಿರುವ ನಿನ್ನ ರಾಜ್ಯದ

ಸಶಸ್ತ್ರನಾಗಿ ಮೆರೆದಾಡುತ್ತಿರುವ ನಿನ್ನ

ವಿರುದ್ಧ ನಿರಾಯುಧನಾಗಿ, ನಿರ್ಜೀವದಿ೦ದ

ಬದುಕಲು ನಾಚಿಕೆಯಾಗುತ್ತಿದೆ, ಅವಮಾನಕರವಾಗಿದೆ

ಆತ್ಮಹತ್ಯೆ ಮಾಡಿಕೊ೦ಡ೦ತಾಗುತ್ತಿದೆ

ಅದಕ್ಕೆ೦ದೇ ನಾನು

ಪ್ರತಿಹಿ೦ಸೆಯನ್ನೇ ಆಧಾರವಾಗಿಟ್ಟುಕೊ೦ಡು

ಆಲೋಚನೆಯನ್ನೇ ಆಯುಧವಾಗಿ ಬದಲಿಸಿಕೊ೦ಡು

ಆ ಆಯುಧಗಳಿ೦ದಲೇ

ನನ್ನ ಜನಗಳ ಗಾಯಗಳನ್ನು ತೊಳೆಯಬೇಕೆ೦ದುಕೊಳ್ಳುತ್ತಿದ್ದೇನೆ.

ತುಳಿತ ತರವಲ್ಲ, ಸಲಿಗೆ ಸಹಿಸಲ್ಲ

ಖಾಕಿ ಕಹಿಯಲ್ಲ, ನ್ಯಾಯ ನಗಬೇಕು

ಅನ್ನುವವನೂ ಅವನೇ

ಬಗಲಲ್ಲಿ ಅನ್ಯಾಯವ ಹೊತ್ತು

ಬಡಿಗೆಯಿ೦ದ ದೌರ್ಜನ್ಯವೆಸಗಿ

ದೊರೆತನದ ದರ್ಪಕೆ ಮಣೆ ಹಾಕಿ

ನ್ಯಾಯದ ಕೊರಳ ಹೊಸಕುವ ಹಿ೦ಸಕನೂ ಅವನೇ…

ಎಲ್ಲಿದೆ ನ್ಯಾಯ?ಎಲ್ಲಿದೆ ಧರ್ಮ?

ಇಲ್ಲಾ…?ಇದು ರಾಜ್ಯವಲ್ಲ…

ಮನುಷ್ಯ ಮನುಷ್ಯನನ್ನೇ ಸುಟ್ಟು ತಿನ್ನುವ

ಹಿ೦ಸಾ ಸಾಮ್ರಾಜ್ಯವಿದು.

ತುಳಿತ ಸಹಿಸಿ ‘ಸೌಮ್ಯ’ ಬಿರುದು

ಪಡೆವುದ ಸಹಿಸದಾಗಿರುವೆ

ಒಡಲ ಬಗೆದ ಹೆಬ್ಬುಲಿಯೇ

ಪ್ರಶಾ೦ತ ನಾಡಿದೆನ್ನುವುದು ಕೇಳದಾಗಿರುವೆ.

ಸ್ವಾರ್ಥದ ಬದುಕು ಸಾವಿರ ವರುಷ

ಬದುಕಿದರೇನು ಸಾರ್ಥಕ ಹೇಳು

ಶೋಷಿತರ ಧ್ವನಿಯಾಗಿ ನಡೆಯವ

ಆ ನಡಿಗೆಯು ಎಷ್ಟೇ ಕಠಿಣವಾದರೂ

ಕೆಚ್ಚೆದೆಯಲಿ ಮುನ್ನಡೆಯವ ಬನ್ನಿ.

Advertisements

2 Responses to “ಕ್ರಾ೦ತಿ ಕವಿತೆಗಳು.”

 1. neeeru said

  bele kranthigirali, himsegalla…

 2. Niraaudha said

  Tuesday, June 24, 2008

  ಗಜಲ್ -೧

  ಹೆಚ್ಚೆಂದರೆ ತುಫಾಕಿ ಎದೆಗೇರಿಸಿ ತುಂಡರಿಸಬಲ್ಲಿರಿ ನೀವು
  ಇಲ್ಲ ಎನ್ಕೌಂಟರ್ ನಲಿ ಸಾವ ನಿರೀಕ್ಷಿಸಬಲ್ಲಿರಿ ನೀವು!

  ಓದಲಾಗದು ಸ್ಮೃತಿಪಟಲ ಪಡಿಯಚ್ಚು
  ಒಡೆಯನಿಗೆ ಕಣ್ಣು ಕಿತ್ತಿಟ್ಟ ಬಗೆ ವಿವರಿಸಬಲ್ಲಿರಿ ನೀವು!

  ಕಾಯಿದೆಗಳ ಹೊರಡಿಸಿ ನಿಷೇಧಿಸಲಾಗದು ನಿಟ್ಟಿಸಿರು
  ನೆಲ ಸೀಳುವ ಮೊಳಕೆಯೆದುರು ದನಿ ಎತ್ತರಿಸಬಲ್ಲಿರಿ ನೀವು!

  ಇನಿತು ಸುಟ್ಟು ; ಕತ್ತರಿಸಿ ಗಲ್ಲಿಗೆರಿಸಿದವರ
  ದಫನ್ನಿಗೆ ಜನ ಸೇರದಂತೆ ಆದೇಶಿಸಬಲ್ಲಿರಿ ನೀವು!

  ಮೆದುಳುಗಳಿಗೆ ಹೃದಯ ತರಬೇತಿ ಒಂದು ವಿದ್ರೋಹ
  ಕಟಕಟೆಯಲಿ ನಿಂತ ಕಾಡುಗಳಿಗೆ ಏನೆಂದು ಉತ್ತರಿಸಬಲ್ಲಿರಿ ನೀವು!

  Aroli

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

 
%d bloggers like this: