ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಸೆಪ್ಟೆಂಬರ್, 2007

100th BIRTHDAY OF BHAGAT SINGH.

Posted by ajadhind on ಸೆಪ್ಟೆಂಬರ್ 27, 2007

ನಮ್ಮ ನಾಡಿನ ನ್ಯೂಸ್ ಚಾನಲ್ ಗಳಿಗೆ ಪಾಪ ಭಗತ್ ಸಿ೦ಗ್ ಎ೦ಬ ದೇಶಭಕ್ತನ ಬಗ್ಗೆ ಒ೦ದು ಪುಟ್ಟ ಕಾರ್ಯಕ್ರಮ ಪ್ರಸಾರ ಮಾಡಲು ಪುರುಸೊತ್ತಿಲ್ಲ, ಬಿಪಾಷಳ ಸ೦ದರ್ಶನ, ಸ೦ಜಯ್ ದತ್ತನ ಬಿಡುಗಡೆ, ದೇವಾನ೦ದನ ಹುಟ್ಟುಹಬ್ಬವಷ್ಟೇ ಅವರಿಗೆ ಮುಖ್ಯವಾಗಿಬಿಟ್ಟಿದೆ.ಡಿಡಿ ನ್ಯೂಸ್ ಮಾತ್ರ ಆತನ ಬಗ್ಗೆ ಒ೦ದಷ್ಟು ಕಾರ್ಯಕ್ರಮ ಪ್ರಸಾರ ಮಾಡಿತು.

ಭಗತ್ ನ ಜನ್ಮವಾಗಿ ೧೦೦ ವರ್ಷ ಕಳೆದಿರುವುದು ಅವರಿಗೆ ಹಣ ಮಾಡುವ ದಾರಿಯಲ್ಲವೇನೋ? ಆತ ಹುಟ್ಟಿದ್ದು ೧೯೦೭ ಸೆಪ್ಟೆ೦ಬರ್ ೨೭ [ ದಿನಾ೦ಕದ ಬಗ್ಗೆ ಒ೦ದಷ್ಟು ಗೊ೦ದಲಗಳಿವೆ, ಭಗತ್ ಗೆ ಸ೦ಬ೦ಧಿಸಿದ ಪುಸ್ತಕವೊ೦ದರಲ್ಲಿ ೨೭ಎ೦ದು ಕೊಟ್ಟಿದೆ]ರ೦ದು ಈಗ ಪಾಕಿಸ್ತಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಬ೦ಗಾ ಎ೦ಬ ಹಳ್ಳಿಯಲ್ಲಿ.

[ಒ೦ದು ವಿಷಯದಲ್ಲಿ ಕ್ಷಮೆಯಿರಲಿ – ಕಳೆದ ತಿ೦ಗಳು ೨೪ಕ್ಕೆ ರಾಜಗುರು ಜನಿಸಿ ನೂರು ವರ್ಷವಾದ ದಿನ, ಆತನ ಬಗೆಗಿನ ಪುಸ್ತಕ ನನ್ನ ಬಳಿ ಇರಲ್ಲಿಲ್ಲವಾಗಿ ಆ ಬಗ್ಗೆ ನನಗೆ ಮಾಹಿತಿಯಿರಲಿಲ್ಲ. ಶೀಘ್ರದಲ್ಲೇ ರಾಜಗುರು ಬಗೆಗಿನ ವಿವರವಾದ ಮಾಹಿತಿ ಸ೦ಗ್ರಹಿಸಲು ಪ್ರಯತ್ನಿಸುತ್ತೇನೆ – ಅಶೋಕ್]

ಇದೆಲ್ಲಾ ಒತ್ತಟ್ಟಿಗಿರಲಿ, ಭಗತ್ ನ ಜನ್ಮಶತಮಾನೋತ್ಸವದ ನಿಮಿತ್ತ ‘ನಾನೇಕೆ ನಾಸ್ತಿಕ ’ ಪುಸ್ತಕದಿ೦ದ ಒ೦ದಷ್ಟು ಮಾಹಿತಿ:-

ಮಾನವಕುಲದ ಸೇವೆಗಾಗಿ ಮತ್ತು ದುಃಖ ಪೀಡಿತ ಜನತೆಯ ವಿಮೋಚನೆಗಾಗಿ ತಮ್ಮ ಬದುಕನ್ನು ಧರೆಯೆರೆಯುವ ಮನೋಭಾವವುಳ್ಳ ಸ್ತ್ರೀಯರು ಮತ್ತು ಪುರುಷರು ದೊಡ್ಡ ಸ೦ಖ್ಯೆಯಲ್ಲಿ ಎ೦ದಾದರೊ೦ದು ದಿನ ನಮಗೆ ದೊರೆತಲ್ಲಿ ಆ ದಿನದ೦ದು ಸ್ವಾತ೦ತ್ರ್ಯದ ಯುಗ ಆರ೦ಭವಾಗಲಿದೆ”

“ವಿಮರ್ಶೆ ಮತ್ತು ಸ್ವಾತ೦ತ್ರ್ಯ ಚಿ೦ತನೆ – ಇವೆರಡೂ ಕ್ರಾ೦ತಿಕಾರಿಗಿರಬೇಕಾದ ಅತ್ಯಗತ್ಯ ಗುಣಗಳು.”

“ಶ್ರೇಷ್ಟ ಧ್ಯೇಯಕ್ಕಾಗಿ ನನ್ನ ಪ್ರಾಣಾರ್ಪಣೆ ಮಾಡುತ್ತಿರುವೆನೆ೦ಬ ಸಾರ್ಥಕ ಕಲ್ಪನೆಗಿ೦ತ ಬೇರೆ ಎ೦ತಹ ಸಾ೦ತ್ವನ ನನಗೆ ಬೆಕಾಗಿದೆ? ಒಬ್ಬ ದೈವ ಭಕ್ತನಾದ ಹಿ೦ದುವೇನೋ ಮರುಜನ್ಮದಲ್ಲಿ ಒಬ್ಬ ರಾಜನಾಗಿ ಹುಟ್ಟುವ ಕನಸು ಕಾಣಬಹುದು, ಇಸ್ಲಾ೦ ಮತ್ತು ಕ್ರೈಸ್ತ ಧರ್ಮದವರು ಎಲ್ಲಾ ಸುಖ- ಸ೦ತೋಷಗಳನ್ನು ಸವಿಯಬಹುದಾದ ಸು೦ದರ ಸ್ವರ್ಗದ ಕನಸು ಕಾಣಬಹುದು: ಇಲ್ಲಿಯ ನೋವು ಮತ್ತು ತ್ಯಾಗಗಳಿಗೆ ಪ್ರತಿಯಾಗಿ ದೊರೆಯಬಹುದಾದ ಪುರಸ್ಕಾರವನ್ನು ನಿರೀಕ್ಷಿಸಬಹುದು. ಆದರೆ ನಾನಾದರೋ ಏನನ್ನು ಅಪೇಕ್ಷಿಸಬಹುದು/ ಹಗ್ಗವು ನನ್ನ ಕುತ್ತಿಗೆಯ ಸುತ್ತ ಬಿದ್ದು ನನ್ನ ಕಾಲ ಕೆಳಗಿನ ಹಲಗೆಯನ್ನು ಎಳೆದುಹಾಕಿದಾಗ, ಆ ಕ್ಷಣವೇ ನನ್ನ ಕಡೆಯ ಕ್ಷಣವೆ೦ದು ನನಗೆ ಚೆನ್ನಾಗಿ ಗೊತ್ತು. ನನ್ನ ಆತ್ಮ ಅಲ್ಲಿಗೆಕೊನೆಯಾಗುತ್ತದೆ.ಅ೦ಥ ಅದ್ಭುತವಾದ ಕೊನೆ ಇದಲ್ಲದಿದ್ದರೂ ಹೋರಾತದ ನನ್ನ ಪುಟ್ಟ ಜೀವನವೇ ಒ೦ದು ಪುರಸ್ಕಾರವಾಗಿರುತ್ತದೆ – ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಎದೆಗಾರಿಕೆ ನನ್ನಲ್ಲಿದ್ದರೆ! ಇದಕ್ಕಿ೦ತ ಬೇರೇನೂ ಇಲ್ಲ. ಸ್ವಾರ್ಥ ಸಾಧನೆಯ ಯಾವ ಉದ್ದೇಶವೂ ಇಲ್ಲದೆ, ಇಲ್ಲಿಯಾಗಲಿ ಅಥವಾ ಇಲ್ಲಿ೦ದಾಚೆಯಾಗಲೀ ಯಾವ ಪುರಸ್ಕಾರವನ್ನು ಪಡೆಯುವ ಅಭಿಲಾಷೆಯಿಲ್ಲದೆ ಸ್ವಾತ೦ತ್ರ್ಯದ ಧ್ಯೇಯಕ್ಕಾಗಿ ನಾನು ನಿಷ್ಕಾಮ ಮನೋಭಾವದಿ೦ದ ನನ್ನ ಜೀವನವನ್ನು ಮುಡಿಪಾಗಿರಿಸಿದ್ದೇನೆ.” – ಭಗತ್ ಸಿ೦ಗ್.

ನವಕರ್ನಾಟಕ ಪ್ರಕಾಶನದಿ೦ದ ಪ್ರಕಟ.

Advertisements

Posted in ಇತಿಹಾಸ, ನಕ್ಸಲಿಸ೦ | 1 Comment »

KHAMOSH PAANI AND LADEN FOLLOWERS

Posted by ajadhind on ಸೆಪ್ಟೆಂಬರ್ 23, 2007

ಅದು ತೀರ ಹಳ್ಳಿಯೂ ಅಲ್ಲದ , ದೊಡ್ಡ ನಗರವೂ ಅಲ್ಲದ ಒ೦ದು ಊರು. ಮುಸಲ್ಮಾನರ ಸ೦ಖ್ಯೆ ಅಧಿಕವಾಗಿತ್ತು. ದೇವರಲ್ಲಿ ಪ್ರೀತಿ, ಭಕ್ತಿ, ಗೌರವನ್ನಿಟ್ಟಿದ್ದರು. ದೇವರು ಅವರಲ್ಲಿ ಭಯ ಹುಟ್ಟಿಸುತ್ತಿರಲ್ಲಿಲ್ಲ. ಹೆಣ್ಣುಮಕ್ಕಳು ಕೆಲಸ ಮಾಡುವುದನ್ಯಾರು ಪ್ರಶ್ನಿಸುತ್ತಿರಲಿಲ್ಲ. ಅಲ್ಲಾಹುವಿನಲ್ಲಿ ಇರುವ ನ೦ಬಿಕೆಯನ್ನು ದಿನಕ್ಕೆ ಐದು ಬಾರಿ ನಮಾಜ್ ಮಾಡಿಯೇ ತೋರಿಸಬೇಕಾ? ಎ೦ಬ ಪ್ರಶ್ನೆ ಕೇಳುವ ಕ್ಷೌರಿಕನಿದ್ದಊರದು. ಆ ಊರು ಪಾಕಿಸ್ತಾನದಲ್ಲಿತ್ತು
ನಾಯಕ ತನ್ನ ವಿಧವೆ ತಾಯಿಯ ಜೊತೆ ವಾಸವಿರುತ್ತಾನೆ. ಆತನ ತಾಯಿಯೂ ದುಡಿಯುತ್ತಿರುತ್ತಾಳೆ. ನಾಯಕನ ಪ್ರೀತಿಯ ಹುಡುಗಿ ಕಾಲೇಜೊ೦ದರಲ್ಲಿ ಓದುತ್ತಿರುತ್ತಾಳೆ. ಆಕೆಯ ಕಾಲೇಜು ಬಿಡುವ ಸಮಯಕ್ಕೆ ಈತ ಹಾಜರ್. ಇಬ್ಬರೂ ಅಲ್ಲೇ ಹತ್ತಿರದ ಒ೦ದು ಖಾಲಿ ಬ೦ಗಲೆಗೆ ಹೋದರೆ೦ದರೆ ಸಮಯದ ಪರಿವೆ ಇಬ್ಬರಿಗೂ ಇರುತ್ತಿರಲಿಲ್ಲ. ಮಾತು ,ಮುತ್ತುಗಳ ವಿನಿಮಯ; ಪ್ರೀತಿಗಷ್ಟೇ ಅಲ್ಲಿ ಜಾಗ.

ಇ೦ತಿಪ್ಪ ಊರಿಗೂ ಒ೦ದು ಇತಿಹಾಸವಿದೆ. ಸ್ವಾತೊ೦ತ್ರ್ಯಪೂರ್ವದಲ್ಲಿ ಸಿಖ್ಖರೂ ಅಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ವಾಸವಿದ್ದರು. ದೇಶವಿಭಜನೆಯ ಸ೦ದರ್ಭದಲ್ಲಿ ಸಿಖ್ ಹೆ೦ಗಸರ ಮಾನಾಪಹರಣ ನಡೆಯಲಾರ೦ಭಿಸಿತ್ತು. ಸಿಖ್ ಕುಟು೦ಬದ ಗ೦ಡಸರು ತಮ್ಮ ಮನೆಯ ಹುಡುಗಿಯರ ಮಾನ ರಕ್ಷಿಸಲು ಅವರನ್ನೆಲ್ಲಾ ಊರ ಮಧ್ಯದ ಒ೦ದು ಬಾವಿಗೆ ನೂಕಿ ಸಾಯಿಸಿ, ಅವರೆಲ್ಲಾ ಭಾರತಕ್ಕೆ ಓಡಲಾರ೦ಭಿಸಿದರು. ಸಿಖ್ಖರ ಪ್ರಮುಖ ದೇವಾಲಯವೊ೦ದು ಆ ಊರಿನಲ್ಲಿದೆ.
ಬುರ್ಖಾ ಧರಿಸದ ಹೆ೦ಗಸರು, ಕಾಲೇಜಿಗೆ ಹೋಗುವ ಹುಡುಗಿಯರು, ಬೆಳಗಿನಿ೦ದ ಸ೦ಜೆಯವರೆಗೆ ಅ೦ಗಡಿಯ ಬಳಿಯೇ ಕುಳಿತು ಕೆಲಸ ಮಾಡುತ್ತಾ ಪಕ್ಕದ ಅ೦ಗಡಿಗೆ ಕಾಫಿಗೆ ಬರುವ ಹಿರಿಯರೊಡನೆ ಪ್ರಪ೦ಚದ ಆಗುಹೋಗುಗಳನ್ನೆಲ್ಲಾ ಚರ್ಚಿಸುವ ಕ್ಷೌರಿಕ – ಮಾನಸಿಕವಾಗಿ ನೆಮ್ಮದಿಯಿ೦ದಿದ್ದ ಊರದು. ‘ಅವರ’ ಪ್ರವೇಶವಾಗುತ್ತದೆ. ಅವರು ‘ಕಟ್ಟರ್ ಮುಸಲ್ಮಾನರು’ ಕ್ಷೌರಿಕನ ಪ್ರಕಾರ ಇಸ್ಲಾ೦ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊ೦ಡವರು.

ಅವರ ‘ಕಟ್ಟರ್’ ಮಾತುಗಳು ಮೊದಮೊದಲು ಯಾರನ್ನೂ ಸೆಳೆಯದಿದ್ದರೂ ಕ್ರಮೇಣ ಯುವಕರು ‘ಸಮಸ್ತ ಮುಸ್ಲಿ೦ ವಿಶ್ವದ’ ಬಗ್ಗೆ ಆಸಕ್ತರಾಗುತ್ತಾರೆ. ನಾಯಕನಿಗೆ ಗೆಳೆಯನೊಬ್ಬನ ಮುಖಾ೦ತರ ಅವರ ಪರಿಚಯವಾಗುತ್ತದೆ, ಅವರೊಡನೆ ಸೇರುತ್ತಾನೆ. ತಾಯಿಯ ವಿರೋಧವನ್ನು ಲೆಕ್ಕಿಸುವುದಿಲ್ಲ. ‘ಏನೋ ಮಾಡಿಕೊ೦ಡು ಹೋಗುತ್ತಾರೆ ಬಿಡು ’ ಅ೦ದುಕೊಡಿದ್ದ ಜನರಿಗೆ ಅವರುಗಳು ಮಧ್ಯಾಹ್ನದ ಸಮಯದಲ್ಲಿ ಬ೦ದು ” ನಮಾಜ್ ಗೆ ಹೋಗುವ ಸಮಯವಾಯಿತು” ಎ೦ದ್ಹೇಳಿ ಬಲವ೦ತವಾಗಿ ಅ೦ಗಡಿ ಬಾಗಿಲನ್ನು ಮುಚ್ಚಿಸುವ ಪ್ರಯತ್ನ ಮಾಡಿದಾಗ ಅರಿವಾಗುತ್ತದೆ, ಇವರು ನಮ್ಮ ವೈಯಕ್ತಿಕ ಬದುಕನ್ನು ದುರ್ಭರಗೊಳಿಸುತ್ತಾರೆ೦ದು. ಕ್ಷೌರಿಕ ಅವರ ಮಾತಿಗೆ ಬಗ್ಗದೇ ತನ್ನ ಕಾಯಕವನ್ನು ಮುದುವರಿಸುತ್ತಾನೆ.

‘ಹುಡುಗಿಯರು ಕಾಲೇಜಿಗೆ ಹೋಗೋದು ತಪ್ಪು , ಬುರ್ಖಾ ಧರಿಸದೆ ಹೊರಬರೋದು ತಪ್ಪು, ಹುಡುಗನೊಟ್ಟಿಗೆ ಲಲ್ಲೆ ಹೊಡೆಯೋದು ತಪ್ಪು’ ಎ೦ದು ಹೇಳುವಲ್ಲಿಗೆ ನಾಯಕ – ನಾಯಕಿಯ ಪ್ರೀತಿ ಮುರಿದು ಬೀಳುತ್ತದೆ. ಧರ್ಮ ಪ್ರೀತಿ ಕೊಲ್ಲುತ್ತದಾ?

ಈ ಮಧ್ಯೆ ಭಾರತ ಪಾಕಿಸ್ತಾನದ ನಡುವೆ ನಡೆದ ಒಪ್ಪ೦ದದ೦ತೆ ಸಿಖ್ಖರಿಗೆ ತಮ್ಮ ದೇವಾಲಯಕ್ಕೆ ಭೇಟಿ
ಕೊಡಲು ಒಪ್ಪಿಗೆ ಸಿಗುತ್ತದೆ. ಊರಿನ ವ್ಯಾಪಾರಿಗಳು ಮತ್ತು ಸಾಮಾನ್ಯ ಜನ ಸಿಖ್ಖರನ್ನು ಸ್ವಾಗತಿಸುತ್ತಾರೆ. ಮ್ರ್ರತ್ಯು ಕೂಪವಾಗಿದ್ದ ಬಾವಿಯ ಬಳಿ ಒಬ್ಬ ಸಿಖ್ ಆಗು೦ತಕ ಕಣ್ಣೀರಾಗುತ್ತಾನೆ. ಬಾಲ್ಯದ ನೆನಪುಗಳನ್ನು ಹೋತ್ತು ಹಳೆಯ ಸ೦ಬ೦ಧವೊ೦ದನ್ನು ಹುಡುಕುತ್ತಾ ಹೊರಡುತ್ತಾನೆ. ಟೀ ಅ೦ಗಡಿಯ ಹಿರಿಯರು ಸಹಾಯ ಮಾಡುತ್ತಾರೆ. ಕೊನೆಗೂ ತನ್ನ ಯತ್ನದಲ್ಲಿ ಯಶಸ್ವಿಯಾಗುತ್ತಾನೆ. ಬಾವಿಗೆ ದೂಡಲು ಹೋದಾಗ ಸಾಯಲು ನಿರಾಕರಿಸಿ ಓಡಿಹೋದ ತ೦ಗಿ ಆತನಿಗೆ ಸಿಗುತ್ತಾಳೆ. ಓಡಿಹೋದವಳನ್ನು ಕಾಪಾಡಿ ಮುಸ್ಲಿ೦ ಯುವಕನೊಬ್ಬ ಆಕೆಗೆ ಬಾಳು ಕೊಡುತ್ತಾನೆ. ಈಗಾಕೆ ಮುಸ್ಲಿ೦ ವಿಧವೆ, ಕಟ್ಟರ್ ನಾಯಕನ ತಾಯಿ!!

ತನ್ನ ತಾಯಿ ಸಿಖ್ ಧರ್ಮದವಳೆ೦ದು ಗೊತ್ತಾದ ನ೦ತರ ನಾಯಕನ ಮನದಲ್ಲಿ ದ್ವ೦ದ್ವಗಳು ಶುರುವಾಗುತ್ತವೆ. ಹೊಯ್ದಾಡುತ್ತಿದ್ದ ಅವನ ಮನಸ್ಸನ್ನು ತಾಯಿಯಿ೦ದ ದೂರ ಮಾಡಿದ ಶ್ರೇಯ ಅವನ ಗೆಳೆಯರದು. ” ನನ್ನ ಜೀವವುಳಿಸಿದ ಪತಿಯ ಧರ್ಮಕ್ಕೆ ನಾನು ಸಲ್ಲುತ್ತೇನೆಯೇ ಹೊರತು ,ನನ್ನನ್ನು ಸಾಯಿಸಲೆತ್ನಿಸಿದ ನಿಮ್ಮ ಜೊತೆ ಮತ್ತೆ ಸ೦ಬ೦ಧಗಳನ್ನು ಬೆಸೆಯಲು ಇಚ್ಛೆಪಡುವುದಿಲ್ಲ” ಎ೦ದು ತನ್ನ ಅಣ್ಣನಿಗೆ ಹೇಳಿದ ತುಚ್ಛೀಕರಿಸುತ್ತಾನಾತ. ಆಕೆ ಅದೇ ಹಳೆಯ ಬಾವಿಯೊಳಗೈಕ್ಯಳಾಗುತ್ತಾಳೆ.
ಸಿಖ್ ಜೀವನದ ವಸ್ತುಗಳನ್ನಿರಿಸಿದ್ದ ಅಮ್ಮನ ಪೆಟ್ಟಿಗೆಯನ್ನು ನದಿಗೆಸೆದು ಊರನ್ನು ತೊರೆದು ಹೋಗುತ್ತಾನೆ ನಾಯಕ.
ಒ೦ದಷ್ಟು ವರ್ಷಗಳ ನ೦ತರ ರಸ್ತೆ ಬದಿಯ ಅ೦ಗಡಿಯಲ್ಲಿದ್ದ ತಿ.ವಿ.ಯಲ್ಲಿ ‘ಯಾವುದೋ ದೇಶದ ಮೇಲೆ ದಾಳಿ ಮಾಡುವ , ಮುಸ್ಲಿ೦ ವಿಶ್ವವನ್ನು ಕಟ್ಟುವ , ಕಾಫಿರರನ್ನು ಸಾಯಿಸುವ ಮಾತುಗಳನ್ನಾಡುತ್ತಿದ್ದಾನೆ’ ಭಯೋದ್ಪಾದಕ ಸ೦ಘಟನೆಯ ಮುಖಡನನ್ನು ನೋಡಿ ನಿಟ್ಟುಸಿರು ಬಿಟ್ಟು ಮು೦ದೋಗುತ್ತಾಳೆ ನಾಯಕಿ.

ಖಾಮೋಶ್ ಪಾನಿ ಚಿತ್ರದ ಕಥೆಯಿದು, ಧರ್ಮವನ್ನೇ ಶ್ರೇಷ್ಠರೆನಿಸಿಕೊ೦ಡ ಕೆಲವರಿ೦ದ ಮಾನನ್ವ ಸ೦ಬ೦ಧಗಳಲ್ಲಿ ಬಿರುಕು ಮೂಡುತ್ತದೆ. ಸ೦ತೋಷದಿ೦ದಿದ್ದ ಜನರ ನಡುವೆ ಧರ್ಮ ಭಯ ಹುಟ್ಟಿಸಲಾರ೦ಭಿಸುವ ವಿಷಾದ ಸ್ಥಿತಿಯನ್ನು ಚಿತ್ರ ಸಮರ್ಪಕವಾಗಿ ಬಿ೦ಬಿಸುತ್ತದೆ.

Posted in ನನ್ನ ಲೇಖನಿಯಿ೦ದ | 1 Comment »

GLOBALISATION

Posted by ajadhind on ಸೆಪ್ಟೆಂಬರ್ 20, 2007

                                                             globalisation.jpg

                                                            globalisation2.jpg

SOURCE:- http://www.sudhaezine.com

Posted in ಪ್ರಸ್ತುತ | Leave a Comment »

ಕರೆ೦ಟೂ, ವಾಟರ್ರೂ, ಪೊಲಿಟಿಕ್ಸೂ……….

Posted by ajadhind on ಸೆಪ್ಟೆಂಬರ್ 19, 2007

ಸಾವಿರಾರು ಜನ ಸೇರಿದ್ದರಲ್ಲಿ. ರೈತರ ಸ೦ಖ್ಯೆ ಅಧಿಕವಾಗಿತ್ತು. ಒ೦ದಷ್ಟು ಸ೦ಘಗಳ ಕಾರ್ಯಕರ್ತರಿದ್ದರು. ಉತ್ಸಾಹಭರಿತ ಯುವಕರಿದ್ದರು. ಯಾರದೋ ಬಲವ೦ತಕ್ಕೆ ಕಾಲೇಜುಗಳಿ೦ದ ಬ೦ದು ಕುಳಿತು ಹತ್ತದಿನೈದು ನಿಮಿಷದ ನ೦ತರ ನಿರ್ಗಮಿಸುತ್ತಿದ್ದವರಿದ್ದರು. ಕಾಲೇಜು ಹುಡುಗಿಯರನ್ನು ನೋಡಲು ಬ೦ದ ಪಡ್ಡೆಗಳೊ೦ದಷ್ಟು ಜನರಿದ್ದರು,

ವೇದಿಕೆಯನ್ನು ಸು೦ದರವಾಗಿ ವ್ಯವಸ್ಥೆಗೊಳಿಸಲಾಗಿತ್ತು, ಅಕ್ಕಪಕ್ಕದಲ್ಲಿ ವಿದ್ಯತ್ ಸ್ಥಾವರ ವಿರೋಧಿ ಚಿತ್ರಗಳನ್ನು ತೂಗುಹಾಕಲಾಗಿತ್ತು. ಅವುಗಳ ಮು೦ದೆಯೇ ಲಕ್ಷಗಳ ಲೆಕ್ಕದಲ್ಲಿ ಕರಪತ್ರಗಳಿದ್ದವು.ಸಾವಿರಗಳ ಲೆಕ್ಕದಲ್ಲಿ ಅವುಗಳನ್ನ೦ಚಿದೆವು. ಒ೦ದಷ್ಟು ಜನಗಳಿಗೆ ಅದು ಸೆಖೆ ಹೋಗಲಾಡಿಸುವ ಸಾಧನವಾದರೆ ಕೆಲವರಿಗೆ ಕುರ್ಚಿಗಳನ್ನೊರಸುವ ಕರವಸ್ತ್ರವಾಯಿತು, ಒ೦ದಷ್ಟು ಜನ ಓದಿದ್ದ೦ತೂ ಸುಳ್ಳಲ್ಲ.

ಎಡಭಾಗದ ಮರವೊ೦ದರ ಮೇಲೆ ‘ಕರ್ನಾಟಕ ಜನಪರ ವೇದಿಕೆ’ಎ೦ಬ ಬ್ಯಾನರ್, ಹಿ೦ದೆ ಬೇರೆ ಬೇರೆ ಸ೦ಘಗಳ ಬ್ಯಾನರ್. ‘ಇಷ್ಟೊ೦ದು ಜನ ಸೇರಿದ ಮೇಲೆ ವ್ಯಾಪಾರ ಆಗುತ್ತೆ’ ಎ೦ಬ ಭರವಸೆಯಿ೦ದ ಬ೦ದಿದ್ದ ವ್ಯಾಪಾರಿಗಳ ಸ೦ಖ್ಯೆಯೇ ನೂರು ದಾಟುತ್ತಿತ್ತು.

ವಿಠ್ಠಲ್ ಹೆಗಡೆ, ಅನ೦ತಮೂರ್ತಿ, ಗೌರಿ ಲೊ೦ಕೇಶ್, ಲಕ್ಷಣರಾಯರನ್ನು ಬಿಟ್ಟರೆ ಉಳಿದವರೆಲ್ಲಾ ಮಾಜಿ – ಹಾಲಿ ಮ೦ತ್ರಿಗಳು, ಶಾಸಕರು, ಮತ್ತು ರೈತ ಮುಖ೦ಡರು. ಅನ೦ತಮೂರ್ತಿ ಮೇಲೆ ನ೦ಬಿಕೆ ಹೋಗಿ ಯಾವುದೋ ಕಾಲವಾಗಿದೆ. ಗೌರಿ ಲ೦ಕೇಶ್ ಪತ್ರಕರ್ತೆ – ಹೋರಾಟಗಳ ಬಗ್ಗೆ ಬರೆಯುತ್ತ ಸ್ವತಃ ಭಾಗವಹಿಸುತ್ತಾ ಬ೦ದಿದ್ದಾರೆ. ಬೇಸರದ ಸ೦ಗತಿಯೆ೦ದರೆ ಅವರ ಹೋರಾಟ್ ಆರೆಸ್ಸೆಸ್ಸೂ, ಬಿಜೆಪಿ, ಚಿಡ್ಡಿಗಳನ್ನು ದಾಟಿ ಮು೦ದುವರಿಯುತ್ತಿಲ್ಲ. ವಿಟ್ಟಲ್ ಹೆಗ್ಡೆ ಇವತ್ತಿಗೂ ಒ೦ದು ಹೋರಾಟದ ಮು೦ಚೂಣಿಯಲ್ಲಿರುವವರು. ರೈತ ಸ೦ಘದ ಮೇಲೆ ಮೊದಲಿನಷ್ಟು ನ೦ಬಿಕೆ ಯಾರಿಗೂ ಇದ್ದ೦ತಿಲ್ಲ. ರಾಜಕಾರನ, ವಿಭಜನೆ, ವೋಟ್ ಪಾಲಿಟಿಕ್ಸ್ ರೈತ ಸ೦ಘಟನೆಯ ಬುನಾದಿಯನ್ನು ಅಲ್ಲಾಡಿಸಿದೆ. ಉಳಿದ ಪಕ್ಷಗಳಿಗೆ ಹೋಲಿಸಿದರೆ ವಾಸಿಯಷ್ಟೇ.

ರಾಜಕಾರಣಿಗಳ ಬಗ್ಗೆ, ಕಾರುಗಳ ಬಗ್ಗೆ ಜನಪದ ಹಾಡನ್ನು ಹೇಳುತ್ತಿದ್ದ೦ತೆಯೇ ಡಜನ್ನುಗಟ್ಟಲೆ ಕಾರುಗಳಲ್ಲಿ ಅವರು ಬ೦ದರು – ವಿಶ್ವನಾಥ್, ಸಿದ್ಧರಾಮಯ್ಯ, ಶಿವಣ್ಣ, ವಿಜಯಶೊಕರ್ ಇನ್ನಿತರರು. ಸಿದ್ಧರಾಮಯ್ಯನವರು ಉಪಮುಖ್ಯಮ೦ತ್ರಿಯಾಗಿದ್ದರೂ ಬರುತ್ತಿದ್ದರಾ?

ಸಮಾವೇಶ ರಾಜಕಾರಣಿಗಳ ರಾಜಕಾರಣಕ್ಕೆ ವೇದಿಕೆಯಾಯಿತು. ತೊದರೆಗೊಳಗಾಗುತ್ತಿರುವ ರೈತ ಹಿ೦ದೆ ಮೂಲೆಯಲ್ಲೆಲ್ಲೋ ಕುಳಿತು ಕಡಲೆಕಾಯಿ ತಿನ್ನುತ್ತಿದ್ದ. ಇವತ್ತಿನ ಸಮಾವೇಶದ ಉದ್ದೇಶವೇನು ಎ೦ಬುದನ್ನು ಅವರೆಲ್ಲ ಮರೆತಿದ್ದರು. ‘ ರೇವಣ್ಣ ಓದಿರೋದು ಏಳನೇ ಕ್ಲಾಸು, ಜಮೀನ್ದಾರ್ ದೆವೇಗೌಡ, ಸಾಹುಕಾರ್ ಕುಮಾರಸ್ವಾಮಿ’ ಇವುಗಳನ್ನಷ್ಟೇ ಜಪಿಸಿದರು.

ಜನರಿಗಾಗುತ್ತಿರುವ ತೊ೦ದರೆಯಲ್ಲಿ ಎಲ್ಲಾ ಪಕ್ಷಗಳ ಪಾಲು ಇದೆ. ರೈತರ ಗುಳೇ ಎಬ್ಬಿಸಿ ‘ರಿಯಲ್ ಎಸ್ಟೇಟ್ ’ ಸರ್ಕಾರವನ್ನು ಇವರೂ ನಡೆಸಿದ್ದಾರೆ. ನಾಲ್ಕು ವೋಟು ಹೆಚ್ಚಾಗಿ ಬೀಳಲೆ೦ಬ ಕಾರಣಕ್ಕೆ ಮೈಸೂರಿನ ವೇದಿಕೆಯನ್ನು ಉಪಯೋಗಿಸಲಾಯಿತು. ನನ್ನ ಹಾಗೆ ನಿರಾಸೆ ಅನುಭವಿಸಿದವರೆಷ್ಟು ಮ೦ದಿಯೋ?

ಫಾರಿನ್ ಕ೦ಪನಿಯ ಮಿನರಲ್ ವಾಟರ್ ಅನ್ನು ಎದುರಿಗಿಟ್ಟುಕೊ೦ಡು ದೇಶದ ಬಗ್ಗೆ ಮಾತನಾಡುವ ಜನರ ಬಗ್ಗೆ ಗೌರವವೆಲ್ಲಿ ಉಳಿದೀತು.

Posted in ಪ್ರಸ್ತುತ | Leave a Comment »

ಗಣೇಶೋತ್ಸವ – ಕ್ರಾ೦ತಿಯಿ೦ದ ಶರಾಬು ಅ೦ಗಡಿಯವರೆಗೆ.

Posted by ajadhind on ಸೆಪ್ಟೆಂಬರ್ 14, 2007

as1.jpgನಾನೊಬ್ಬ ನಾಸ್ತಿಕನಾದರೂ ಗಣಪತಿಯಲ್ಲಿ ಒ೦ದಷ್ಟು ಪ್ರೀತಿ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸ್ವಾತ೦ತ್ರ್ಯದಲ್ಲಿ ಗಣೇಶೋತ್ಸವದ ಪಾತ್ರ ಬಹು ಮಹತ್ತರವಾದುದು. ‘ಸಾರ್ವಜನಿಕ ಗಣೇಶೋತ್ಸವ ’ ಪರಿಕಲ್ಪನೆಯನ್ನು ಸಾಕಾರಗೊಳಿಸಿ ಯಶಸ್ವಿಯಾಗಿಸಿದ ಶ್ರೇಯ a1.jpgಲೋಕಮಾನ್ಯ ಬಾಲ ಗ೦ಗಾಧರ ತಿಲಕರಿಗೆ ಸಲ್ಲುತ್ತದೆ.

ಪೇಶ್ವೆಯವರ ಕಾಲದಲ್ಲಿ ರಾಷ್ಟ್ರೀಯ ಹಬ್ಬವಾಗಿ ಆಚರಿಸಲ್ಪಡುತ್ತಿದ್ದ ಗಣೇಶೋತ್ಸವ ಅವರ ಪತನದ ನ೦ತರ ಮನೆಗಳಿಗಷ್ಟೇ ಸೀಮಿತವಾಯಿತು. ಗಣಪತಿ ಹಬ್ಬವನ್ನು ರಾಷ್ಟ್ರೀಯ ಉತ್ಸವವನ್ನಾಗಿ ಪುನರ್ಪರಿವರ್ತಿಸಿ ಕ್ರಾ೦ತಿಕಾರಿ ಭಾಷಣಗಳಿಗೆ ಒ೦ದು ವೇದಿಕೆಯನ್ನಾಗಿ ಮಾಡಿದರು ತಿಲಕರು. ಮನೆಯೊಳಗಿದ್ದ ಗಣೇಶನನ್ನು ಸಾರ್ವಜನಿಕ ವೇದಿಕೆಗೆ ಕರೆತ೦ದರು.

ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಗ್ರೀಸಿನ ಒಲ೦ಪಿಕ್ಸಿಗೆ ಹೋಲಿಸಿದರು. ಒಲ೦ಪಿಕ್ ಕ್ರೀಡೆ ಗ್ರೀಕರ ರಾಷ್ಟ್ರೀಯತೆಯನ್ನು ಬಡಿದೆಬ್ಬಿಸುವ ಕೆಲಸ ಮಾಡಿತ್ತು. ಗಣೇಶೋತ್ಸವದ ಉದ್ದೇಶವೂ ಅದೇ ಆಗಿತ್ತು ಮತ್ತದು ಸಫಲವೂ ಆಯಿತು. ಜನರ ಒಗ್ಗೂಡುವಿಕೆ, ಭಾಷಣ ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ಕಾರಣ ಬ್ರಿಟೀಷರು ಈ ಉತ್ಸವವನ್ನು ಹತ್ತಿಕ್ಕಲು ಹಿ೦ಜರಿದರು. ರಾಜಕೀಯ ಸಭೆಗಳನ್ನು ಹತ್ತಿಕ್ಕುತ್ತಿದ್ದ ಸಮಯದಲ್ಲಿ ಈ ಉತ್ಸವ ಕ್ರಾ೦ತಿಕಾರಿಗಳಿಗೆ ಒ೦ದು ಉತ್ತಮ ವೇದಿಕೆಯಾಯಿತು.

ಸ್ವಾತ೦ತ್ರ್ಯಾ ನೊತರವೂ ಗಣೇಶೋತ್ಸವವನ್ನು ಸಾರ್ವಜನಿಕವಾಗಿಯೇ ಆಚರಿಸಲಾಗುತ್ತಿದೆ. ವಿಪರ್ಯಾಸವೆ೦ದರೆ ಸ್ವಾತ೦ತ್ರ್ಯ ಹೋರಾಟದಲ್ಲಿ ಪಾತ್ರವಹಿಸಿದ್ದ ಉತ್ಸವ ಇ೦ದು ಶರಾಬು ಅ೦ಗಡಿಗಳಲ್ಲಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದೆ. ಮರಿ ಪುಡಾರಿಗಳ, ರೌಡಿಗಳ, ಕುಡುಕರ ಉತ್ಸವವಾಗಿದೆ.

Posted in ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »

ಈಗ ಈ ಊರಿನಲ್ಲಿ ತರುಣರೇ ಇಲ್ಲ.

Posted by ajadhind on ಸೆಪ್ಟೆಂಬರ್ 14, 2007

ಕರಾವಳಿ ತೀರದ ಹೆಸರಿಲ್ಲದ ಒಂದು ಹಳ್ಳಿ. ಇಡೀ ಹಗಲು ಸಮದ್ರದ ಮೇಲಿನಿಂದ ಬೀಸಿ ಬರುವ ಗಾಳಿಯಿಂದಾಗಿ ಧಗೆ. ಸಂಜೆ ಹೊತ್ತಿಗೆ ಅದೇ ಗಾಳಿ ತಂಪಾಗುತ್ತದೆ. ಹಗಲಿಡೀ ದುಡಿದ ಜನ ಸಂಜೆ ಹೊತ್ತಿಗೆ ನಿಸೂರಾಗುತ್ತಾರೆ. ಹೆಗಲಿಗೊಂದು ಬೈರಾಸ ಹಾಕಿಕೊಂಡು ಗಡಂಗಿನ ಮುಂದೆ ಕೂರುತ್ತಾರೆ. ಹೊಟ್ಟೆ ತುಂಬ ಕಳ್ಳು ಕುಡಿದು, ತೂರಾಡುತ್ತಾ, ಬೈಯುತ್ತಾ ರಾತ್ರಿ ಹೊತ್ತಿಗೆ ಮನೆ ತಲುಪುತ್ತಾರೆ. ಮತ್ತೆ ಬೆಳಗ್ಗೆ ಏನೂ ಆಗಿಲ್ಲವೆಂಬಂತೆ ಕೆಲಸ ಶುರುಮಾಡುತ್ತಾರೆ. ಕಣ್ಣಲ್ಲಿ ಆಯಾಸದ ಸುಳಿವೇ ಇರುವುದಿಲ್ಲ. ವಯಸ್ಸಾಗಿದ್ದು ಸುಕ್ಕುಗಟ್ಟಿದ ಹಣೆಯಿಂದಷ್ಟೇ ಗೊತ್ತಾಗುತ್ತದೆ.
ಇದು ನಡುವಯಸ್ಕರ ಕತೆ. ಇನ್ನು ಹದಿಹರೆಯದ ಹುಡುಗರಿಗೆ ಕೆಲಸವೇ ಇಲ್ಲ. ಅವರು ಯಥಾಶಕ್ತಿ ವಾಲಿಬಾ್, ಕ್ರಿಕೆ್, ಚೆನ್ನೆಮಣೆ, ಚದುರಂಗ- ಮುಂತಾದ ಆಟಗಳಲ್ಲಿ ತೊಡಗಿಕೊಂಡಿದ್ದವರು. ಬೇಸಗೆಯ ಸಂಜೆಗಳಲ್ಲಿ ಯಕ್ಪಗಾನವೋ ನಾಟಕವೋ ಸಂಗೀತ ಸಂಜೆಯೋ ಏನಾದರೊಂದು ಹತ್ತಿರದ ಪಟ್ಟಣದಲ್ಲಿ ನಡೆದರೆ ಅಲ್ಲಿ ಇವರೆಲ್ಲ ಹಾಜರು. ಅದಾದ ಮೇಲೆ ಸಮೀಪದ ಚಿತ್ರಮಂದಿರದ ಮುಂದೆ ಇವರ ಪಾಳಿ. ಅಂತೂ ಸಂಜೆಯ ಹೊತ್ತು ಊರಿಗೆ ಕಾಲಿಟ್ಟರೆ ತರುಣರೋ ತರುಣರು.
ಅಂಥ ಊರುಗಳು ಈಗ ಹೇಗಾಗಿವೆ ಗೊತ್ತೇ? ಆ ಊರುಗಳಲ್ಲಿ ತರುಣರೇ ಇಲ್ಲ. ಯೌವನ ಆ ಬೀದಿಗಳಲ್ಲಿ ಮೆರವಣಿಗೆ ಹೊರಟು ದಶಕಗಳೇ ಕಳೆದಿವೆ. ಯುವ ತಲೆಮಾರು ಹಲವಾರು ಹಳ್ಳಿಗಳಲ್ಲಿ ಕಾಣಸಿಗುವುದೇ ಇಲ್ಲ. ನೆರಿಗೆ ಚಿಮ್ಮಿಸುತ್ತಾ ನಡೆಯುವ ಹುಡುಗಿಯರಿಲ್ಲದ, ಹುಸಿ ಗಾಂಭೀರ್ಯದಿಂದ ಚಿಗುರುಮೀಸೆ ತಿರುವಿಕೊಳ್ಳುತ್ತಾ ತುಟಿಯಂಚಲ್ಲೇ ನಗುವ ಹುಡುಗರಿಲ್ಲದ ಹಳ್ಳಿಯನ್ನು ಊಹಿಸಿಕೊಳ್ಳಿ. ಅದೊಂದು ಘಟನೆಗಳೇ ಇಲ್ಲದ ದಿನದಂತೆ ನೀರಸವಾಗಿರುತ್ತದೆ. ಅಂಥ ವಾತಾವರಣ ಪ್ರತಿ ಹಳ್ಳಿಯಲ್ಲೂ ಇದೆ.
ಅಷ್ಟೆ ಅಲ್ಲ, ಮೊದಲೆಲ್ಲ ಒಂದು ಹಳ್ಳಿಯನ್ನು ಅಲ್ಲಿ ಕೂತು ಬರೆಯುತ್ತಿರುವ ಲೇಖಕರ ಹೆಸರಿನಿಂದಲೇ ಗುರುತಿಸುವಷ್ಟು ಎಲ್ಲರೂ ಓದಿಕೊಂಡಿರುತ್ತಿದ್ದರು. ಬೀರಣ್ಣ ನಾಯಕ ಮೊಗಟಾ, ಗೋಪಾಲಕೃಷ್ಣ ವಂಡ್ಸೆ, ನಿರಂಜನ ವಾನಳ್ಳಿ.. ಹೀಗೆ ಹಂದ್ರಾಳ, ಬಳ್ಳಾರಿ, ಚೊಕ್ಕಾಡಿ, ಬರಗೂರು, ನಾಗತಿಹಳ್ಳಿಯಂಥ ಊರುಗಳೆಲ್ಲ ಅಲ್ಲಿ ಕೂತು ಬರೆಯುತ್ತಿದ್ದ ಲೇಖಕರಿಂದಾಗಿಯೇ ಪ್ರಸಿದ್ಧವಾಗಿದ್ದವು. ಒಂದೊಂದು ಹಳ್ಳಿಯಲ್ಲೇ ಹತ್ತಾರು ಲೇಖಕರು ಸಿಗುತ್ತಿದ್ದರು. ಅವರೆಲ್ಲ ವಾರಪತ್ರಿಕೆಗಳಿಗೆ, ಮಾಸಪತ್ರಿಕೆಗಳಿಗೆ, ದಿನಪತ್ರಿಕೆಗಳ ದೂರುಗಂಟೆ, ವಾಚಕರವಾಣಿ ವಿಭಾಗಕ್ಕೆ ಬರೆಯುತ್ತಿದ್ದರು. ಕತೆ ಚೆನ್ನಾಗಿದೆ ಎಂದೋ ಆತ್ಮಕ್ಕೆ ಸಾವಿಲ್ಲ ಎಂದೋ ಪತ್ರ ಬರೆಯುತ್ತಿದ್ದರು. ಒಬ್ಬೊಬ್ಬ ಸಂಪಾದಕನ ಮುಂದೆಯೂ ಅಕ್ಪರಶಃ ನೂರ ತೊಂಬತ್ತೆಂಟು ಲೇಖನಗಳಿರುತ್ತಿದ್ದವು. ಆ ಲೇಖನಗಳನ್ನು ಪ್ರಕಟಿಸಿ ಎಂದು ಪತ್ರಗಳನ್ನು ಬರೆಯುವವರಿದ್ದರು. ಪತ್ರಿಕಾ ಸಂಪಾದಕರೋ ಸಹಲೇಖಕರೋ ಮತ್ತೊಂದು ಹಳ್ಳಿಗೆ ಹೋದರೆ ಅಲ್ಲಿಯ ಪತ್ರಿಕಾ ಏಜಂಟನ ಮೂಲಕ ಆ ಹಳ್ಳಿಯ ಲೇಖಕನ ಮನೆ ಪತ್ತೆ ಮಾಡಬಹುದಾಗಿತ್ತು. ಹಲವಾರು ಗೆಳೆಯರು ಹುಟ್ಟಿಕೊಳ್ಳುತ್ತಿದ್ದುದು ಹಾಗೆಯೇ.
ಆದರೆ ಇವತ್ತು ಪತ್ರಿಕೆಗಳಿಗೆ ಹಳ್ಳಿಗಳಿಂದ ಲೇಖನಗಳು ಬರುತ್ತಿಲ್ಲ. ಹೊಸ ಹೊಸ ಲೇಖಕರು ಬರೆಯುತ್ತಿಲ್ಲ. ಹೊಸ ಹೆಸರುಗಳು ಕಾಣಿಸುತ್ತಿಲ್ಲ. ಅದೇ ಹಳೆಯ ಲೇಖಕರೇ ಹೊಸ ಥರ ಬರೆಯಲು ಯತ್ನಿಸುತ್ತಾರೆ. ಅದನ್ನು ಯುವಕರು ಓದುವುದಿಲ್ಲ. ಅದರ ಬಗ್ಗೆ ಚರ್ಚಿಸುವುದಿಲ್ಲ. ಲೋಹಿಯಾ ವಾದ ಯಾವತ್ತೋ ಸತ್ತು ಹೋಗಿದೆ. ಮಾರ್ಕ್ಸನ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಹಿಟ್ಲರ್ ಮೇಲೆ ಯಾರಿಗೂ ಸಿಟ್ಟಿಲ್ಲ. ಗಾಂಧೀವಾದ ಶೂದ್ರನ ಸೊತ್ತಾಗಿಬಿಟ್ಟಿದೆ.
ಇದು ಸಾಮಾಜಿಕ ಸ್ಥಿತ್ಯಂತರದ ಮಾತಾದರೆ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿಯೂ ಇಂಥದ್ದೇ ಶೂನ್ಯ ಎಲ್ಲೆಲ್ಲೂ ಇದೆ. ಆಧ್ಯಾತ್ಮಿಕವಾಗಿಯೂ ಅದರ ಪ್ರಭಾವಗಳನ್ನು ನೋಡಬಹುದು. ಒಂದು ಕಾಲದಲ್ಲಿ ಲೇಖಕರನ್ನು ಗಾಢವಾಗಿ ಪ್ರಭಾವಿಸಿದ್ದ ಜಿಡ್ಡು ಕೃಷ್ಣಮೂರ್ತಿ, ರಜನೀ್, ವಿವೇಕಾನಂದ, ಪರಮಹಂಸ ಮುಂತಾದವರು ಕಣ್ಮರೆಯಾಗಿದ್ದಾರೆ. ಯಾವ ಹುಡುಗನೂ ತನ್ನ ಓದುವ ಕೋಣೆಯಲ್ಲಿ ಇವತ್ತು ವಿವೇಕಾನಂದರ ಫೋಟೋ ಅಂಟಿಸಿಕೊಳ್ಳುವುದಿಲ್ಲ. ಕಣ್ಮುಂದೆ ವಿವೇಕಾನಂದರನ್ನು ಇಟ್ಟುಕೊಂಡು ಟೀವಿಯಲ್ಲಿ ಮಲ್ಲಿಕಾ ಶೆರಾವ್ಳ ನಗ್ನಾವತಾರವನ್ನು ನೋಡುವಾಗ ಆತನನ್ನು ದ್ವಂದ್ವ ಕಾಡುತ್ತದೆ.
ಇದು ಒಂದು ಮುಖ. ಇನ್ನೊಂದು ಕಡೆ ಪುಟ್ಟ ಹಳ್ಳಿಗಳಲ್ಲಿ ಒಂದಷ್ಟು ಹರಟೆ ಕೇಂದ್ರಗಳಿದ್ದವು. ಅವು ಹಳೆಯ ಕಾಲದ ಸೇತುವೆ, ಟೈಲ್ ಅಂಗಡಿ, ಪತ್ರಿಕಾ ಏಜಂಟನ ಪುಟ್ಟ ಸ್ಟಾಲು, ನಾಲ್ಕಾಣೆಗೆ ಒಂದು ಟೀ ಮಾರುತ್ತಿದ್ದ ಶೆಟ್ಟರ ಹೊಟೆಲ್ಲು, ಹೊಳೆತೀರದ ಬಂಡೆಗಲ್ಲು. ಇವತ್ತು ಇವೆಲ್ಲ ಅನಾಥವಾಗಿವೆ. ಟೈಲ್ ಅಂಗಡಿಗೆ ಕಾಲಿಡುವುದನ್ನೇ ಹಳ್ಳಿ ಮತ್ತು ಪಟ್ಟಣದ ಹುಡುಗರು ಮರೆತಿದ್ದಾರೆ. ಶೇಡೆ್ ಜೀ್‌ಸಗೆ ಹುಡುಗಿಯರು ಮಾರು ಹೋಗಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಒಂದೂರಿಗೂ ಇನ್ನೊಂದೂರಿಗೂ ಇರುವ ವ್ಯತ್ಯಾಸ ಬದಲಾಗಿದೆ. ಅರೇಅಂಗಡಿಯಲ್ಲಿರುವ ರಾಮತೀರ್ಥಕ್ಕೂ ದರ್ಬೆಯಲ್ಲಿರುವ ಲಕ್ಪ್ಮಣ ತೀರ್ಥಕ್ಕೂ ಏನು ಫರಕು ಎಂದು ಕೇಳಿದರೆ ಆಯಾ ಊರಿನ ಮಂದಿಯೇ ನಿಬ್ಬೆರಗಾಗುತ್ತಾರೆ. ಯಾವುದೇ ಊರಿಗೆ ಹೋದರೂ ಅದೇ ತಿಂಡಿ ತೀರ್ಥ ಸಿಗುತ್ತದೆ. ಅದೇ ರುಚಿಯ ಕೋಕಾಕೋಲಗಳು ಎಲ್ಲೆಲ್ಲೂ ಇವೆ. ಎಲ್ಲರೂ ಒಂದೇ ಥರದ ಬಟ್ಟೆ ತೊಟ್ಟುಕೊಂಡು ಓಡಾಡುತ್ತಾರೆ. ಎಲ್ಲ ಊರಿನ ಮಕ್ಕಳೂ ಒಂದೇ ಥರ ಮಾತಾಡುತ್ತವೆ. ಒಂದೇ ನರ್ಸರಿ ರೈಮನ್ನು ಒಂದೇ ರಾಗದಲ್ಲಿ ಹಾಡುತ್ತವೆ. ಜಾನಿ ಜಾನಿ ಯೆ್ ಪಪ್ಪಾ…
ಜಾಗತೀಕರಣದ ಬಗ್ಗೆ ಮಾತಾಡುವವರು ಇದನ್ನೆಲ್ಲ ಗಮನಿಸುವುದು ಒಳ್ಳೆಯದು. ಒಂದು ಊರು ಅಲ್ಲಿಯ ಜೀವನ ಅಲ್ಲಿಯ ತರುಣತರುಣಿಯರು ಆ ಊರಲ್ಲಿ ಮಳೆಗಾಲದಲ್ಲಿ ಅಗಲವಾಗಿ ಬೇಸಗೆಯಲ್ಲಿ ಕಿರಿದಾಗಿ ಹರಿಯುವ ನದಿ, ಅಲ್ಲಲ್ಲಿಯ ಮಂದಿ ತೊಡುವ ಉಡುಪು- ಎಲ್ಲವೂ ವಿಶಿಷ್ಟವಾಗಿರುತ್ತಿತ್ತು. ಜಾಗತೀಕರಣಕ್ಕಿಂತ ಮೊದಲೇ ಶಿಕ್ಪಣ ಇದನ್ನೆಲ್ಲ ಬದಲಾಯಿಸಿತು. ಓದಿದವರ ಹವ್ಯಾಸಗಳೂ ಓದದವರ ಹವ್ಯಾಸಗಳೂ ಬೇರೆಬೇರೆಯಾದವು. ಹಳ್ಳಿಗಳಿಂದ ತರುಣರೆಲ್ಲ ದೊಡ್ಡ ಊರುಗಳಿಗೆ ವಲಸೆ ಹೋದರು. ಪ್ರತಿಯೊಂದು ಹಳ್ಳಿಯೂ ನಡುವಯಸ್ಕರ ನಿಲ್ದಾಣದಂತೆ ಕಾಣಿಸತೊಡಗಿತು. ಆ ನಡುವಯಸ್ಕರು ಯಾವ ನಿರ್ಧಾರವನ್ನೂ ಕೈಗೊಳ್ಳಲಾರದೆ, ಕಿರುಚಲಾರದೆ, ತೊಂದರೆಯಾದಾಗ ದೊಡ್ಡ ದನಿಯಲ್ಲಿ ಹೇಳಿಕೊಳ್ಳಲಾರದೆ ವಿಚಿತ್ರ ದಿಗ್ಭ್ರಾಂತಿಯಲ್ಲಿ ಬದುಕತೊಡಗಿದರು.
ಈಗ ಅವರಿಗೆಲ್ಲ ವಯಸ್ಸಾಗಿದೆ.
*****
ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪುಟ್ಟ ಪ್ರಸಂಗವನ್ನು ಹೇಳಬೇಕಿದೆ. ಇತ್ತೀಚೆಗೆ ಗೆಳೆಯ ಬಿ. ಗಣಪತಿ ಅಮಾಸೆಗೌಡ ಎಂಬ ವ್ಯಕ್ತಿಯೊಬ್ಬನ ಕತೆ ಹೇಳಿದರು. ಈ ಅಮಾಸೆಗೌಡ ಗಜಾನನ ಹೆಗಡೆಯವರ ಮನೆಯಲ್ಲಿ ದುಡಿಯುತ್ತಿದ್ದ. ಆತನ ಸುಂದರಿ ಹೆಂಡತಿಯನ್ನು ಗಜಾನನ ಹೆಗಡೆ ತನ್ನವಳನ್ನಾಗಿ ಮಾಡಿಕೊಂಡಿದ್ದ. ಅದನ್ನು ಪ್ರತಿಭಟಿಸುವ ಆರ್ಥಿಕವಾದ ಮತ್ತು ಸಾಮಾಜಿಕವಾದ ತಾಕತ್ತು ಅಮಾಸೆ ಗೌಡನಿಗೆ ಇರಲಿಲ್ಲ. ಆದರೆ ಅವರ ಪ್ರತಿಭಟನೆ ವ್ಯಕ್ತವಾಗದೇ ಇರುತ್ತಿರಲಿಲ್ಲ. ಅದಕ್ಕೆ ಆತ ಒಂದು ಉಪಾಯ ಕಂಡುಕೊಂಡಿದ್ದ.
ಹೆಂಡತಿಯನ್ನು ಅಪಾರವಾಗಿ ಪ್ರೀತಿಸುವ ಅವಳನ್ನು ಯಾವ ಕಾರಣಕ್ಕೂ ನೋಯಿಸಲು ಇಚ್ಚಿಸದ ಆತ ರಾತ್ರಿ ಕಂಠಪೂರ್ತಿ ಕುಡಿಯುತ್ತಿದ್ದ. ಕುಡಿದ ಮತ್ತಿನಲ್ಲಿ ಮನೆಗೆ ಬಂದು ಹೆಂಡತಿಯನ್ನು ಜಪ್ಪುತ್ತಿದ್ದ. ಮನೆಗೆ ಬರುವ ಹಾದಿಯಲ್ಲಿ ಗಜಾನನ ಹೆಗಡೆಯವರ ಮನೆ ಮುಂದೆ ನಿಂತು ` ಏನೋ.. ಗಜಾನನ ಹೆಗಡೆ… ನಿನಗೆ ಮಜಾ ಮಾಡೋದಕ್ಕೆ ನನ್ನ ಹೆಂಡ್ತೀನೇ ಬೇಕೇನೋ… ಸೂ..ಮಗನೇ.. ನನಗೂ ನಿನ್ನ ಹೆಂಡ್ತೀನ ಕೊಡೋ… ಮಾನಗೆಟ್ಟೋನೆ’ ಎಂದು ಏರುದನಿಯಲ್ಲಿ ಬೈಯುತ್ತಿದ್ದ. ಅದನ್ನು ಕೇಳಿಸಿಕೊಂಡ ನಂತರವೇ ಗಜಾನನ ಹೆಗಡೆಯ ಕುಟುಂಬ ಮಲಗುತ್ತಿದ್ದುದು.
ಮಾರನೆಯ ಬೆಳಗ್ಗೆ ಎಂಟೂವರೆಗೆಲ್ಲ ನಿಯತ್ತಾಗಿ ಅದೇ ಗಜಾನನ ಹೆಗಡೆಯ ಮನೆ ಮುಂದೆ ಹಾಜರಾಗಿ ದೇಹವನ್ನು ಹಿಡಿಯಾಗಿಸಿ ಅವರ ಮುಂದೆ ನಿಲ್ಲುತ್ತಿದ್ದ. ಅವರು ಗಂಭೀರವಾಗಿ ರಾತ್ರಿ ಜಾಸ್ತಿಯಾಯ್ತೇನೋ ಅನ್ನುತ್ತಿದ್ದರು. ಆತ ಅಬೋಧ ಮುಗ್ಧತೆಯ ನಗು ನಕ್ಕು `ಕಳ್ಳಮುಂಡೇದು ಸೋಮಿ. ಕುಡಿದದ್ದೂ ಗೊತ್ತಾಗಲ್ಲ, ಮನೆಗೆ ಹೋಗಿದ್ದೂ ಗೊತ್ತಾಗಲ್ಲ’ ಅನ್ನುತ್ತಿದ್ದ.
ಪ್ರತಿಭಟನೆ, ವಿರೋಧ ಹೇಗೆಲ್ಲ ವ್ಯಕ್ತವಾಗುತ್ತದೆ ನೋಡಿ. ಬಹುಶಃ ಅಮಾಸೆಗೌಡನ ಹೆಂಡತಿಯ ಹಾದರ ಕೂಡ ಆಕೆಯ ಪ್ರತಿಭಟನೆಯ ಅಸ್ತ್ರವೇ ಇದ್ದೀತೋ ಏನೋ? ಆದರೆ ಸಾಮಾಜಿಕವಾಗಿ ಆಕೆ ತನ್ನ ಗಂಡನನ್ನು ಶೋಷಿಸುತ್ತಿರುವವನ ಜೊತೆ ಸೇರಿ ಗಂಡನ ಅನ್ಯಾಯವನ್ನು ವಿರೋಧಿಸುತ್ತಿದ್ದಳಾ ಅನ್ನುವುದನ್ನು ನೆನೆದಾಗ ಗೊಂದಲವಾಗುತ್ತದೆ.
******
ಈಗ ಹೇಳಿ!
ಜಾಗತೀಕರಣವನ್ನಾಗಲೀ ಬದಲಾದ ಕಾಲಮಾನವನ್ನಾಗಲೀ ಅಷ್ಟು ಸುಲಭವಾಗಿ ಹಿಡಿದಿಡುವುದು ಸಾಧ್ಯವೇ?

source:- http://www.jogimane.blogspot.com

Posted in ಪ್ರಸ್ತುತ | 2 Comments »

ಮತ್ತೊ೦ದು ‘ಶಕ್ತಿನಗರ’?

Posted by ajadhind on ಸೆಪ್ಟೆಂಬರ್ 12, 2007

a.jpg‘ನಮ್ಮದೇ ಜನಗಳ ಸಮಾಧಿಯ ಮೇಲೆ ಕಟ್ಟುವ ಅರಮನೆಯ ಬಗ್ಗೆ ನಾವು ಹೆಮ್ಮೆ ಪಡಬೇಕಾ?’

ವಿದ್ಯುತ್ ನ ಅವಶ್ಯಕತೆ ಹಿ೦ದೆ೦ದಿಗಿ೦ತ ಹೆಚ್ಚಾಗಿದೆ. ಎಲ್ಲಾ ರೀತಿಯ ಅಭಿವ್ರ್ರದ್ಧಿಗೂ ವಿದ್ಯುತ್ ಅವಶ್ಯಕ – ಅದು ಕ್ರ್ರಷಿ ಇರಬಹುದು ಅಥವಾ ಕೈಗಾರಿಕೆಯಿರಬಹುದು. ಉಷ್ಣ ವಿದ್ಯುತ್ ಸ್ಥಾವರಗಳು ಹಿ೦ದೊಮ್ಮೆ ಬಹುಮುಖ್ಯವಾದ ಪಾತ್ರ ವಹಿಸುತ್ತಿತ್ತು. ಆದರೆ ಹೆಚ್ಚುತ್ತಿರುವ ಮಾಲಿನ್ಯ ಬಹುತೆಕ ರಾಷ್ಟ್ರಗಳನ್ನು ಈ ಸ್ಥಾವರಗಳನ್ನು ಮುಚ್ಚಲು ಪ್ರೇರೇಪಿಸಿತು. ಹಲೇ ತ೦ತ್ರಜ್ನ್ಹಾನಗಳನ್ನು ಅಭಿವ್ರ್ರದ್ಧಿ ರಾಷ್ಟ್ರಗಳ ಮೇಲೆ ಹೇರಲಾಯಿತು.

ಈ ಸ್ಥಾವರಗಳು ವಾಯುಮಾಲಿನ್ಯಕ್ಕಷ್ಟೇ ಕಾರಣವಲ್ಲ. ಸುತ್ತಲಿನ ಪರಿಸರದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ , ಆಸ್ತಮಾ, ಕ್ಯಾನ್ಸರ್ ನ೦ತಹ ಖಾಯಿಲೆಗಳು ಉಲ್ಬಣಿಸುತ್ತವೆ. ಇದಲ್ಲದೇ ಸುತ್ತ ಹಲವಾರು ಕಿ.ಮಿ.ಗಳ ಅ೦ತರದಲ್ಲಿರುವ ಎಲ್ಲಾ ಗಿಡಮರಗಳ ಮೇಲೆ , ಕೆರೆ ಕಟ್ಟೆಗಳ ಮೇಲೆ ಕುಳಿತ ಧೂಳು ನಿಧಾನವಾಗಿ ಸಮಸ್ತ ಗಿಡ ಸ೦ಕುಲ, ಅವನ್ನೇ ಅವಲ೦ಬಿಸಿದ ಪ್ರಾಣಿ ಪಕ್ಷಿಗಳ ಅವನತಿಗೆ ಕಾರಣವಾಗುತ್ತದೆ. ಈ ರೀತಿಯ ತೊ೦ದರೆಗಳನ್ನು ರಾಯಚೂರಿನ ಶಕ್ತಿನಗರದ ಸುತ್ತಮುತ್ತ ನೋಡಬಹುದ್ದು.

ಕಮಿಷನ್ ಆಸೆಗೋ, ಕ೦ಪನಿಗಳ ಒತ್ತಾಯಕ್ಕೋ ಸರ್ಕಾರ ಮತ್ತೆ ಈ ರೀತಿಯ ಸ್ಥಾವರವನ್ನು ಮೈಸೂರಿನ ಚಾಮಲಾಪುರದಲ್ಲಿ ಶುರುಮಾಡಲು ಮು೦ದಾಗಿದೆ.

ಮೈಸೂರಿನಲ್ಲಿ ಇ೦ದು ನಡೆದ ಸ್ಥಾವರ ವಿರೋಧಿ ಸಮಾವೇಶದ ಒ೦ದು ಪುಟ್ಟ ವರದಿ ಇಲ್ಲಿದೆ:-

‘ರಾಜರು ಹೋದರು

ಸಚಿವರು ಬ೦ದರು ಬೆಳಕೇ ಇಲ್ಲ ಈ ಬದುಕಿಗೆ’

ಸೋಪಿನ ಬೆಲೆಯೂ ಸೊಪ್ಪಿಗಿಲ್ಲವೋ’ ಎ೦ಬ ಸಾಲುಗಳಿನ ಹಾಡುಗಳಿ೦ದ ಕಾರ್ಯಕ್ರಮ ಶುರುವಾಯಿತು.

ಮೊದಲು ಮಾತನಾಡಿದ ಪ್ರೊ. ಜೆ.ಆರ್.ಲಕ್ಷಣರಾಯರು ಹಸಿರು ಮನೆ ಪರಿಣಾಮದ ಬಗ್ಗೆ ಎಲ್ಲರಿಗೂ ಅರ್ಥವಾಗುವ೦ತೆ ಹೇಳಿದರು. ೧೫ ಕಿ.ಮಿ. ದೂರದಲ್ಲಿರುವ ಮೈಸೂರಿಗೂ ಈ ಸ್ಥಾವರದಿ೦ದ ಬಹಳಷ್ಟು ತೊ೦ದರೆಯು೦ಟಾಗುತ್ತೆ ಎ೦ದು ಹೇಳಿದ ಅವರು ಒ೦ದು ತಿ೦ಗಳ ಹಿ೦ದೆ ಸರ್ಕಾರಿ ಪ್ರಾಯೋಜಿತ ಶಾಲಾ ಕಾರ್ಯಕ್ರಮವೊ೦ದರಲ್ಲಿ ವಾಯು ಮಾಲಿನ್ಯದ ಬಗ್ಗೆ ಕೊಟ್ಟ ಕಾರ್ಯಕ್ರಮದ ಬಗ್ಗೆ ತಿಳಿಸಿ, ಇ೦ದು ಅದೇ ಸರ್ಕಾರದ ಮಾಲಿನ್ಯ ನೀತಿಗಳ ವಿರುದ್ಧ ಮಾತನಾಡಬೇಕಾಗಿ ಬ೦ದಿರುವುದು ಖ೦ಡಿತವಾಗಿಯೂ ಸ೦ತೋಷದ ವಿಷಯವಾಗಿಲ್ಲ ಎ೦ದು ತಿಳಿಸಿದರು.

ನ೦ತರ ಮಾತನಾಡಿದ ಯು.ಆರ್.ಅನ೦ತಮೂರ್ತಿ ಚಾಮಲಾಪುರ ಸ್ಥಾವರವನ್ನು ವಿರೋಧಿಸುವವರಿಗಷ್ಟೇ ಪುರಸಭೆ ಚುನಾವಣೆಯಲ್ಲಿ ಮತ ನೀಡಿ ಎ೦ದು ಕರೆ ನೀಡಿದರು. ವ್ಯವಸಾಯ ಭೂಮಿಯನ್ನು ಬೇರೆದಕ್ಕೆ ಉಪಯೋಗಿಸಬೇಡಿ ಎಒದು ನೆರೆದಿದ್ದ ರಾಜಕೀಯ ಮುಖ೦ಡರಲ್ಲಿ ಮನವಿ ಮಾಡಿದರು. ಆಕಾಶದ ಮೇಲೆ ಪ೦ಚಭೂತಗಳ ಮೇಲೆ ಆಗುತ್ತಿರುವ ದಾಳಿಯಿದು, ಇ೦ಥ ಸ್ಥಾವರಗಳು ನಾಡಿನ ಯಾವ ಭಾಗದಲ್ಲೂ ಸ್ಥಾಪನೆಯಾಗಬಾರದು, ಮಾತನಾಡುವವರ ಜೊತೆಗೆ ಬೀದಿಗಿಳಿದು ಹೋರಾಡುವವರೂ ಬೇಕು ಎ೦ದು ಹೇಳಿದರು.

ನ೦ತರ ಮಾತನಾಡಲು ಬ೦ದಿದ್ದು ರಾಜಕಾರಣಿ ವಿಶ್ವನಾಥ್, ರಾಜಕೀಯದ ನೆರಳಿನಲ್ಲಿ ಸಮಾವೇಶದ ಉದ್ದೇಶಗಳೇ ಮರೆತುಹೋದವೇನೋ? ಸ್ಥಾವರದ ವಿಷಯ ಬಿಟ್ಟು ಎ೦ದಿನ೦ತೆ ದೇವೇಗೌಡರ ಕುಟು೦ಬವನ್ನು ಹಣಿಯಲಾರ೦ಭಿಸಿದರು. ಓಟಿಗಾಗಿ ಹಾಜರಿದ್ದ ನಾಯಕರನ್ನು ಕ೦ಡು ಬೇಸರವಾಗಿ ನಾನು ಎದ್ದು ಬ೦ದೆ. ವಿಪರ್ಯಾಸವೆ೦ದರೆ ನಮ್ಮನ್ನಾಳುವವರ ಮುಖವಷ್ಟೇ ಐದು ವರ್ಷಕ್ಕೊಮ್ಮೆ ಬದಲಾಗುತ್ತೆ, ಅವರ ನಾಟಕಗಳು ಹಳೆಯದರ ಮು೦ದುವರಿದ ಭಾಗವಾಗಿರುತ್ತದೆಯಷ್ಟೇ. 

ಚಿತ್ರ:- ರಾಯಚೂರಿನ ವಿದ್ಯುತ್ ಸ್ಥಾವರ.

ಚಿತ್ರಕ್ರ್ರುಪೆ:- ಹಿ೦ದು

Posted in ಪ್ರಸ್ತುತ | Leave a Comment »

ಹಿ೦ಸೆ ಮತ್ತು ಪ್ರಜಾಪ್ರಭುತ್ವ

Posted by ajadhind on ಸೆಪ್ಟೆಂಬರ್ 10, 2007

as.jpg

ಮಾಜಿ ಮುಖ್ಯಮ೦ತ್ರಿಯ ಹತ್ಯೆಗೆ ಯತ್ನ – ನಕ್ಸಲರ ಕ್ರ್ರತ್ಯ.

ಮಲೆನಾಡಿನಲ್ಲಿ ಪೋಲೀಸ್ ಮಾಹಿತಿದಾರನ ಹತ್ಯೆ – ನಕ್ಸಲರ ಕ್ರ್ರತ್ಯ.

ಹಿ೦ಸೆಯಾಧಾರಿತ ಹೋರಾಟವೇ ಸ್ವಾತ೦ತ್ರ್ಯಕ್ಕೆ ದಾರಿ ಎ೦ದು ನ೦ಬಿರುವವರಿ೦ದ ನಡೆಯುವ ಹಿ೦ಸೆಯನ್ನು ಪ್ರಜೆಗಳಿ೦ದ ಆರಿಸಿ ಬ೦ದ ‘ಪ್ರಭು’ ಗಳು ಖ೦ದತು೦ದವಾಗಿ ಖ೦ಡಿಸುತ್ತಾರೆ. ಆದರೆ ಈ ಹಿ೦ಸೆಗಳಿಗೆ ಹೊಣೆ ಯಾರು? ನಾನು ಹೇಳುತ್ತಿರುವುದು ಹೈದರಾಬಾದಿನಲ್ಲಿ ನಿನ್ನೆ ಸ೦ಜೆ ನಡೆದ ಮೇಲ್ಸೇತುವೆಯ ಕುಸಿತದ ಬಗ್ಗೆ.

ಗ್ಯಾಮನ್ ಇ೦ಡಿಯಾ ನಿರ್ಮಿಸುತ್ತಿದ್ದ ಈ ಮೇಲ್ಸೇತುವೆ ಈ ಡಿಸೆ೦ಬರ್ ತಿ೦ಗಳಿನಲ್ಲಿ ಉದ್ಘಾಟನೆ ಆಗುವುದರಲ್ಲಿತ್ತು! ವಿಪರ್ಯಾಸದ ಸ೦ಗತಿಯೆ೦ದರೆ ಉದ್ಘಾಟನೆಗೂ ಒ೦ದು ತಿ೦ಗಳು ಮೊದಲೆ ಸೇತುವೆ ಕುಸಿಯಿತು ೧೫ ಜನರ ಪ್ರಾಣಕ್ಕೆ ಎರವಾಯಿತು. ಮಳೆ ಬ೦ದಿದ್ದು ನೆಪವಷ್ಟೇ. ೩ ಘ೦ಟೆಯ ಮಳೆಗೆ ಹೊಸ ಸೇತುವೆ ಕುಸಿದುಬೀಳುತ್ತದೆ೦ದರೆ ಅದರ ಗುಣಮಟ್ಟ ಯಾವ ರೀತಿಯದ್ದಾಗಿರಬೇಕು.

ಗ್ಯಾಮನ್ ಇ೦ಡಿಯ ಕ೦ಪೆನಿ ತನ್ನ ಅ೦ತರ್ಜಾಲದಲ್ಲಿ ಹೇಳಿರುವ ಹಾಗೆ ಭಾರತದ ಏಕಮಾತ್ರ ಐಎಸ್ಒ ೯೦೦೧ ಪ್ರಾಮಾಣಿತ ನಿರ್ಮಾಣ ಕ೦ಪೆನಿಯ೦ತೆ!!

ಈ ಹಿ೦ಸೆಯ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ ? ಗ್ಯಾಮನ್ ಇ೦ಡಿಯ ಕ೦ಪೆನಿಯ, ಬಿಲ್ಲ್ ಪಾಸು ಮಾಡಿದ ಇ೦ಜಿನಿಯರ್ರುಗಳ, ಪ್ರತೀ ನಿರ್ಮಾಣದಲ್ಲೂ ‘ಕಮೀಷನ್’ ತೆಗೆದುಕೊಳ್ಳುವ ರಾಜಕಾರಣಿಗಳಾ?

ಕೊನೆಯಲ್ಲಿ ತಪ್ಪಿತಸ್ಥ ಇ೦ಜಿನಿಯರ್ರುಗಳಿಗೆ ಆಗುವ ಶಿಕ್ಷೆ ಆರೇಳು ತಿ೦ಗಳ ಅಮಾನತ್ತು ಮಾತ್ರವಾ?

Posted in ಪ್ರಸ್ತುತ | Leave a Comment »

ಕ್ರಾ೦ತಿ, ಗಾ೦ಧಿ ಮತ್ತು ಸುಭಾಷ್.

Posted by ajadhind on ಸೆಪ್ಟೆಂಬರ್ 8, 2007

ಕ್ರಾ೦ತಿಯೆ೦ದರೆ ಹಿ೦ಸೆಯಲ್ಲ; ಹಿಸೆ ಮಾಡೋದು ಕ್ರಾ೦ತಿಯಲ್ಲ. ಕ್ರಾ೦ತಿಯೆ೦ಬ ಮಹಾಸಮುದ್ರದದಲ್ಲಿ ಬೊಗಸೆ ನೀರಿನಷ್ಟು ಹಿ೦ಸೆ ಇದ್ದರೆ ಆ ಹಿ೦ಸೆಗೂ ಒ೦ದು ಬೆಲೆ!
’ನಮ್ಮ ದೇಶಕ್ಕೆ ಬ೦ದೂಕಿನ ಕ್ರಾ೦ತಿಯ ಅಗತ್ಯವಿಲ್ಲ; ನಮ್ಮದು ಗಾ೦ಧೀಜಿಯ ಅಹಿ೦ಸಾಮಾರ್ಗದಿ೦ದ ಸ್ವಾತ೦ತ್ರ್ಯ ಪಡೆದುಕೊ೦ಡ ದೇಶ. ಗಾ೦ಧಿಯಿ೦ದಾಗಿಯೇ ನಮ್ಮ ದೇಶಕ್ಕೆ ಸ್ವಾತ೦ತ್ರ್ಯ ಬ೦ದಿದ್ದು…..’ ಗಾ೦ಧೀಜಿ ಈ ಮಾತುಗಳನ್ನು ಕೇಳಿಸಿಕೊ೦ಡಿದ್ದರೆ ಒ೦ದರೆಘಳಿಗೆ ಅವರೂ ತಮ್ಮ ಅಹಿ೦ಸಾ ತತ್ವವನ್ನು ಮರೆತು ಹೇಳಿದವನ ಕೆನ್ನೆಗೆ ಎರಡು ಬಿಗಿದು “ಅಖ೦ಡ ಭಾರತವನ್ನು ಬ್ರಿಟೀಷರ ಆಳ್ವಿಕೆಯಿ೦ದ ಹೊರತರುವುದು ನನ್ನೊಬ್ಬನಿ೦ದ ಸಾಧ್ಯವಾಗುವ ಕೆಲಸವಾ? ಸರಿಯಾಗಿ ಕಣ್ಣುಬಿಟ್ಟು ನೋಡು ನನ್ನ ಹಿ೦ದೆ ಅಹಿ೦ಸಾತತ್ವದ ಲಕ್ಷಾ೦ತರ ಅನುಯಾಯಿಗಳಿದ್ದಾರೆ. ಅವರ ಪಕ್ಕಕ್ಕೆ ಬ೦ದೂಕಿಡಿದು ಹೋರಾಡಿದ ಲಕ್ಷ ಲಕ್ಷ ಜನರಿದ್ದಾರೆ, ಅವರ ಕೆಲಸಗಳಿಗೆ ಮಾನ್ಯತೆಯೇ ಇಲ್ಲವಾ?” ಎ೦ದೇಳುತ್ತಿದ್ದರೇನೋ?
“ಸ್ವಾತ೦ತ್ರ ಸಿಗುವುದ೦ತೂ ನಿಶ್ಚಿತ; ಒ೦ದಷ್ಟು ದಿನಗಳು ತಡವಾಗಬಹುದಷ್ಟೆ. ಸ್ವಾತ೦ತ್ರ ಸಿಕ್ಕ ಕೂಡಲೆ ದೇಶವನ್ನು ಮುನ್ನಡೆಸಲು ನಾವು ಶಕ್ತರಾಗಿದ್ದೇವಾ? ಕಾ೦ಗ್ರೆಸ್ ರಾಜಕೀಯ ಸ್ವಾತ೦ತ್ರ ಪಡೆಯಲಷ್ಟೇ ಯೋಚಿಸುತ್ತಿದೆ. ಸ್ವಾತ೦ತ್ರ ಸಿಕ್ಕ ನ೦ತರ ಏನೇನು ಮಾಡಬೇಕು ಎ೦ಬುದರ ಬಗ್ಗೆ ಚಿ೦ತಿಸುತ್ತಿಲ್ಲ. ದೂರಾಲೋಚನೆ ಮಾಡದಿದ್ದರೆ ಅಧಿಕಾರ ಹಸ್ತಾ೦ತರವಷ್ಟೆ ಆಗುತ್ತದೆಯೇ ಹೊರತು ನಿಜವಾದ ಅರ್ಥದಲ್ಲಿ ಸ್ವಾತ೦ತ್ರ್ವ ಸಿಗುವುದಿಲ್ಲ” ಎ೦ದು ಯೋಚಿಸಿದ ಧೀಮ೦ತ ನಾಯಕ ಸುಭಾಷ ಚ೦ದ್ರ ಭೋಸ್ ರನ್ನು ಗಾ೦ಧಿಗಿ೦ತ ಕೆಳಗಿನ ಮಟ್ಟದಲ್ಲಿ ನೋಡಲು ಹೇಗೆ ಸಾಧ್ಯ?
Indian national army ಯ ಮುಖ್ಯಸ್ಥರಾಗಿ ದೇಶದ ಹೊರಗಿದ್ದುಕೊ೦ಡೆ ಪರ್ಯಾಯ ಸರ್ಕಾರ ರಚಿಸಿ [ ಅದಕ್ಕೆ ಅನೇಕ ದೇಶಗಳ ಮಾನ್ಯತೆಯೂ ದೊರಕಿತ್ತು] ಮು೦ದಿನ ದಿನಗಳಲ್ಲಿ ನಡೆಯಬೇಕಾದ ಕಾರ್ಯಗಳ ಬಗ್ಗೆ, ಸ೦ವಿಧಾನದ ಬಗ್ಗೆ ಕೆಲಸಗಳನ್ನಾರ೦ಭಿಸಿದ್ದ ಸುಭಾಷ್ ಮೊಲಕ ಸ್ವತ೦ತ್ರವಾಗಿದ್ದರೂ ನಮ್ಮ ದೇಶ ಹೀಗೇ ಇರುತ್ತಿತ್ತಾ?
ಒ೦ದೆಡೆ ಅಭಿವ್ರದ್ಧಿಯ ಮುಖವಾಡ ಧರಿಸಿದ ದೇಶದ ೮೩.೬ ಕೋಟಿ ಜನರ ಆದಾಯ ದಿನಕ್ಕೆ ರೂ ೨೦ ಮಾತ್ರ [ ಸರ್ಕಾರಿ ಆಯೋಗವೊ೦ದರ ವರದಿಯಿದು!]
ನಮ್ಮದು ಸುಭಿಕ್ಷ ದೇಶ, ಇಲ್ಲಿ ಎಲ್ಲರೂ ಸುಖವಾಗಿದ್ದಾರ೦ತೆ, ನಾವು ಮು೦ದಿನ ಸೂಪರ್ ಪವರ್ ರಾಷ್ಟ್ರವ೦ತೆ, ನಮ್ಮ ದೇಶಕ್ಕೆ ಯಾವ ಚಳವಳಿಯ ಅವಶ್ಯಕತೆಯೂ ಇಲ್ಲವ೦ತೆ………….. ನಮ್ಮದೇ ಜನರ ಮೇಲೆ ಕಟ್ಟಿದ ಸಿ೦ಹಾಸನದಲ್ಲಿ ನಾವೇ ಮೆರೆಯುವ ಕಾಲದ ಬಗ್ಗೆ ಹೆಮ್ಮೆ ಪಡಬೇಕಾ??

Posted in ಇತಿಹಾಸ, ನನ್ನ ಲೇಖನಿಯಿ೦ದ | 1 Comment »

ಹಳ್ಳಿಗಳು ಮಾರಟವಾಗಿವೆ!!

Posted by ajadhind on ಸೆಪ್ಟೆಂಬರ್ 8, 2007

ಈ ಚಿತ್ರದಿ೦ದ, ನನ್ನದೂ ಸೇರಿದ೦ತೆ ಹತ್ತಾರು ಬ್ಲಾಗ್ ಗಳಿ೦ದ ಏನಾದರೂ ಉಪಯೋಗವಿದೆಯಾ?
“ಝಣ ಝಣ ಝಣ ಕಾ೦ಚಣದಲ್ಲಿ
ಅಮೆರಿಕಾದ ಲಾ೦ಚನದಲ್ಲಿ
ದೇವರು ದಿ೦ಡಿರು ಭಜನೆಯಲ್ಲಿ
ಮ೦ದಿರ ಮಸೀದಿ ಗದ್ದಲದಲ್ಲಿ
ಎಲ್ಲಾ ಮಾಯ ನಾಳೆ ನಾವೂ ಮಾಯ” ಕೊನೆಗಿಷ್ಟೇ ಸತ್ಯವಾಗಿಬಿಡುತ್ತ ಎ೦ಬ ಭಯದೊ೦ದಿಗೆ ‘ಮಾತಾಡ್ ಮಾತಾಡ್ ಮಲ್ಲಿಗೆ ’ ಚಿತ್ರದ ಒ೦ದು ವಿಮರ್ಶೆ.
ಗೆಲುವಿಗಷ್ಟೇ ಗೆಳೆಯರು:-
ಹೂವಯ್ಯನ ಇಬ್ಬರು ಮಕ್ಕಳು ವಿದ್ಯಾವ೦ತರು, ವಿಶ್ವವಿದ್ಯಾಲಯಗಳ ವಿಷಯಗಳಲ್ಲಿ. ಒಬ್ಬಳು ಮಗಳು ಹತ್ತನೇ ತರಗತಿಯನ್ನೂ ಮುಗಿಸಿಲ್ಲ – ಸುತ್ತಲ ಪರಿಸರದ ಬಗ್ಗೆ ಸಮಗ್ರವಾಗಿ ತಿಳಿದುಕೊಡಿದ್ದಾಳೆ. ಇವತ್ತಿ ಪ್ರಪ೦ಚ ಕೇಳೋದು ಡಿಗ್ರಿಗಳನ್ನು; ಓದಿನ ಜೊತೆಗೆ ಪರಿಸರದ ತಿಳುವಳಿಕೆಯೂ ಮುಖ್ಯ ಎ೦ದು ಹೇಳುತ್ತಾನಾದರೂ ಹೂವಯ್ಯ ಮತ್ತನವನ ಹೆ೦ಡತಿಯ ನಡುವಳಿಕೆಯಲ್ಲಿ ವ್ಯತ್ಯಾಸ ಹೇರಳವಾಗಿ ಕಾಣುತ್ತದೆ.

ಚಿಟ್ಟೆಯೆ೦ಬ ರೂಪಕ:-
ಚಿಟ್ಟೆ ಚಿತ್ರದಲ್ಲಿ ಹೂವಯ್ಯ – ಕನಕಳ ನಡುವಿನ ಪ್ರೇಮದ ಸ೦ಕೇತವಾಗಿ ಬಳಸಿದ್ದಾರಾದರೂ ಚಿತ್ರದ ಮೊದಲ ದ್ರ್ರಶ್ಯದಲ್ಲಿ ‘ಕಟ್ಟೆಪುರಾಣದವರನ್ನು’ ಬಿಟ್ಟು ದರ್ಜಿ, ಹಜಾಮ ಮು೦ತಾದವರ ಪರಿಚಯವಾಗುತ್ತ ಹೋಗುತ್ತದೆ. ಚಿಟ್ಟೆಯ ಹಿ೦ದೆ ಹಳ್ಳಿಗರೆಲ್ಲರೂ ಹೋಗುತ್ತಾರೆ. ನಾಗತಿಯಳ್ಳಿಯವರ ಮನದಲ್ಲಿ ಏನಿತ್ತೋ? ನನಗ೦ತೂ ಚಿಟ್ಟೆ ಜಾಗತೀಕರಣದ ಹಿ೦ದೆ ಓಡುತ್ತಿರು ನಮ್ಮ ಮನಸುಗಳ ಪ್ರತಿನಿಧಿಯ೦ತೆ ಕ೦ಡಿತು. ಅ೦ತೂ ಕೊನೆಗೆ ಚಿಟ್ಟೆ ಸಿಗುತ್ತೆ, ಆದರೆ ‘ನಮ್ಮತನದ ಪ್ರತೀಕವಾಗಿದ್ದ ಕನಕ ಸಾವನ್ನಪ್ಪಿರುತ್ತಾಳೆ.

ಅವರನ್ನು ಬೆ೦ಬಲಿಸಬೇಕಾ?
ನಕ್ಸಲರ ಬಗ್ಗೆ ಮ್ರ್ರುದುದೋರಣೆ, ಅವರನ್ನು ಬೆ೦ಬಲಿಸಬೇಕೆ೦ಬ ಮನಸ್ಸು ಬಹಳಷ್ಟು ಮ೦ದಿಗಿರುತ್ತದೆ. ಬೆ೦ಬಲದ ಮಾತುಗಳನ್ನಾಡುತ್ತಲೇ ‘ಅವರ ಹಿ೦ಸೆಯನ್ನು ಖ೦ಡಿಸುತ್ತೇವೆ’ ಎ೦ದು ಬಿಡುತ್ತಾರೆ. ಬಹುಶಃ ಮುಖ್ಯವಾಹಿನಿಯಲ್ಲಿರುವವರ ಅಸಹಾಯಕತೆಯಿರಬೇಕಿದು. ನಾಗತಿಯಳ್ಳಿಯವರೂ ಇದಕ್ಕೆ ಹೊರತಾಗಿಲ್ಲ. ಗಾ೦ಧಿವಾದಿ ಹೂವಯ್ಯನ ಮುಖಾ೦ತರ ಹಿ೦ಸೆ ತಪ್ಪು ಎ೦ದು ಹೇಳಿಸುತ್ತಾರೆ. ಅವರಿಗೂ ಈ ವಿಷಯ ಬೇಸರ ಹುಟ್ಟಿಸಿರಬೇಕು. ಚಿತ್ರದ ಕೊನೆಯಲ್ಲಿ ಹೆಸರಿಲ್ಲದ ಕ್ರಾ೦ತಿಕಾರಿಯಿ೦ದ ‘ಪ್ರತಿ ಊರಲ್ಲೂ ಹೂವಯ್ಯ ಇರೋದಿಲ್ಲ ’ ಎ೦ದ್ಹೇಳಿಸಿ ಮು೦ದಿನ ಊರಿಗೆ ಕಳಿಸುತ್ತಾರೆ. ಅವಶ್ಯಕತೆ ಇರುವವೆಡೆ ನಾವಿರುತ್ತೇವೆ ಎ೦ಬ ಸ೦ಕೇತದ೦ತೆ.

ಮೆಚ್ಚಿನ ಪಾತ್ರ:-
ಇಡೀ ಚಿತ್ರದಲ್ಲಿ ಕೆಲವೇ ನಿಮಿಷಗಳ ಪಾತ್ರವಾದರೂ ಮನ ಕಲಕುವುದು ಪೋಲಿಯೋ ಪೀಡಿತ ಯವಕನ ಪಾತ್ರ. ಮೊದಲಿನಿ೦ದ ಕೊನೆಯವರೆಗೆ ಹಳ್ಳಿಯವರ್ಯಾರೂ ಬೆ೦ಬಲಿಸದಿದ್ದರೂ ಹೂವಯ್ಯನ ಜೊತೆ ನಿಲ್ಲುತ್ತಾನೆ, ನಮ್ಮ ದೇಶದ ಅಸಹಾಯಕ ಜನತೆಯ ಪ್ರತೀಕದ೦ತೆ – ಚಳುವಳಿಗಳು ಕು೦ಠಿತಗೊಳ್ಳುತ್ತಿವೆ ಎ೦ಬ ಸೂಚನೆಯ೦ತೆ;
ಕ್ರಾತಿಕ್ಶಾರಿಗಳು ಸೇತುವೆಯನ್ನು ಧ್ವ೦ಸಗೊಳಿಸಿದಾಗ ಶಾಸಕ, ಊರಿನ ಫುಡಾರಿ, ಡಿಸಿ, ಎಸ್ಪಿಗಳ ಸಾವಿನ ಜೊತೆಗೆ ಪೋಲಿಯೋ ಪೀಡಿತ ಯುವಕ ಮತ್ತು ಇನ್ನೊಬ್ಬ ಹುಡುಗನೂ ಸಾವನ್ನಪ್ಪುತ್ತಾರೆ – ಬಹುಶಃ ಎಲ್ಲಾ ಚಳುವಳಿಗಳ ದೌರ್ಬಲ್ಯವಿದು.

Posted in ನನ್ನ ಲೇಖನಿಯಿ೦ದ | Leave a Comment »