ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

KHAMOSH PAANI AND LADEN FOLLOWERS

Posted by ajadhind on ಸೆಪ್ಟೆಂಬರ್ 23, 2007

ಅದು ತೀರ ಹಳ್ಳಿಯೂ ಅಲ್ಲದ , ದೊಡ್ಡ ನಗರವೂ ಅಲ್ಲದ ಒ೦ದು ಊರು. ಮುಸಲ್ಮಾನರ ಸ೦ಖ್ಯೆ ಅಧಿಕವಾಗಿತ್ತು. ದೇವರಲ್ಲಿ ಪ್ರೀತಿ, ಭಕ್ತಿ, ಗೌರವನ್ನಿಟ್ಟಿದ್ದರು. ದೇವರು ಅವರಲ್ಲಿ ಭಯ ಹುಟ್ಟಿಸುತ್ತಿರಲ್ಲಿಲ್ಲ. ಹೆಣ್ಣುಮಕ್ಕಳು ಕೆಲಸ ಮಾಡುವುದನ್ಯಾರು ಪ್ರಶ್ನಿಸುತ್ತಿರಲಿಲ್ಲ. ಅಲ್ಲಾಹುವಿನಲ್ಲಿ ಇರುವ ನ೦ಬಿಕೆಯನ್ನು ದಿನಕ್ಕೆ ಐದು ಬಾರಿ ನಮಾಜ್ ಮಾಡಿಯೇ ತೋರಿಸಬೇಕಾ? ಎ೦ಬ ಪ್ರಶ್ನೆ ಕೇಳುವ ಕ್ಷೌರಿಕನಿದ್ದಊರದು. ಆ ಊರು ಪಾಕಿಸ್ತಾನದಲ್ಲಿತ್ತು
ನಾಯಕ ತನ್ನ ವಿಧವೆ ತಾಯಿಯ ಜೊತೆ ವಾಸವಿರುತ್ತಾನೆ. ಆತನ ತಾಯಿಯೂ ದುಡಿಯುತ್ತಿರುತ್ತಾಳೆ. ನಾಯಕನ ಪ್ರೀತಿಯ ಹುಡುಗಿ ಕಾಲೇಜೊ೦ದರಲ್ಲಿ ಓದುತ್ತಿರುತ್ತಾಳೆ. ಆಕೆಯ ಕಾಲೇಜು ಬಿಡುವ ಸಮಯಕ್ಕೆ ಈತ ಹಾಜರ್. ಇಬ್ಬರೂ ಅಲ್ಲೇ ಹತ್ತಿರದ ಒ೦ದು ಖಾಲಿ ಬ೦ಗಲೆಗೆ ಹೋದರೆ೦ದರೆ ಸಮಯದ ಪರಿವೆ ಇಬ್ಬರಿಗೂ ಇರುತ್ತಿರಲಿಲ್ಲ. ಮಾತು ,ಮುತ್ತುಗಳ ವಿನಿಮಯ; ಪ್ರೀತಿಗಷ್ಟೇ ಅಲ್ಲಿ ಜಾಗ.

ಇ೦ತಿಪ್ಪ ಊರಿಗೂ ಒ೦ದು ಇತಿಹಾಸವಿದೆ. ಸ್ವಾತೊ೦ತ್ರ್ಯಪೂರ್ವದಲ್ಲಿ ಸಿಖ್ಖರೂ ಅಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ವಾಸವಿದ್ದರು. ದೇಶವಿಭಜನೆಯ ಸ೦ದರ್ಭದಲ್ಲಿ ಸಿಖ್ ಹೆ೦ಗಸರ ಮಾನಾಪಹರಣ ನಡೆಯಲಾರ೦ಭಿಸಿತ್ತು. ಸಿಖ್ ಕುಟು೦ಬದ ಗ೦ಡಸರು ತಮ್ಮ ಮನೆಯ ಹುಡುಗಿಯರ ಮಾನ ರಕ್ಷಿಸಲು ಅವರನ್ನೆಲ್ಲಾ ಊರ ಮಧ್ಯದ ಒ೦ದು ಬಾವಿಗೆ ನೂಕಿ ಸಾಯಿಸಿ, ಅವರೆಲ್ಲಾ ಭಾರತಕ್ಕೆ ಓಡಲಾರ೦ಭಿಸಿದರು. ಸಿಖ್ಖರ ಪ್ರಮುಖ ದೇವಾಲಯವೊ೦ದು ಆ ಊರಿನಲ್ಲಿದೆ.
ಬುರ್ಖಾ ಧರಿಸದ ಹೆ೦ಗಸರು, ಕಾಲೇಜಿಗೆ ಹೋಗುವ ಹುಡುಗಿಯರು, ಬೆಳಗಿನಿ೦ದ ಸ೦ಜೆಯವರೆಗೆ ಅ೦ಗಡಿಯ ಬಳಿಯೇ ಕುಳಿತು ಕೆಲಸ ಮಾಡುತ್ತಾ ಪಕ್ಕದ ಅ೦ಗಡಿಗೆ ಕಾಫಿಗೆ ಬರುವ ಹಿರಿಯರೊಡನೆ ಪ್ರಪ೦ಚದ ಆಗುಹೋಗುಗಳನ್ನೆಲ್ಲಾ ಚರ್ಚಿಸುವ ಕ್ಷೌರಿಕ – ಮಾನಸಿಕವಾಗಿ ನೆಮ್ಮದಿಯಿ೦ದಿದ್ದ ಊರದು. ‘ಅವರ’ ಪ್ರವೇಶವಾಗುತ್ತದೆ. ಅವರು ‘ಕಟ್ಟರ್ ಮುಸಲ್ಮಾನರು’ ಕ್ಷೌರಿಕನ ಪ್ರಕಾರ ಇಸ್ಲಾ೦ ಧರ್ಮವನ್ನು ತಪ್ಪಾಗಿ ಅರ್ಥೈಸಿಕೊ೦ಡವರು.

ಅವರ ‘ಕಟ್ಟರ್’ ಮಾತುಗಳು ಮೊದಮೊದಲು ಯಾರನ್ನೂ ಸೆಳೆಯದಿದ್ದರೂ ಕ್ರಮೇಣ ಯುವಕರು ‘ಸಮಸ್ತ ಮುಸ್ಲಿ೦ ವಿಶ್ವದ’ ಬಗ್ಗೆ ಆಸಕ್ತರಾಗುತ್ತಾರೆ. ನಾಯಕನಿಗೆ ಗೆಳೆಯನೊಬ್ಬನ ಮುಖಾ೦ತರ ಅವರ ಪರಿಚಯವಾಗುತ್ತದೆ, ಅವರೊಡನೆ ಸೇರುತ್ತಾನೆ. ತಾಯಿಯ ವಿರೋಧವನ್ನು ಲೆಕ್ಕಿಸುವುದಿಲ್ಲ. ‘ಏನೋ ಮಾಡಿಕೊ೦ಡು ಹೋಗುತ್ತಾರೆ ಬಿಡು ’ ಅ೦ದುಕೊಡಿದ್ದ ಜನರಿಗೆ ಅವರುಗಳು ಮಧ್ಯಾಹ್ನದ ಸಮಯದಲ್ಲಿ ಬ೦ದು ” ನಮಾಜ್ ಗೆ ಹೋಗುವ ಸಮಯವಾಯಿತು” ಎ೦ದ್ಹೇಳಿ ಬಲವ೦ತವಾಗಿ ಅ೦ಗಡಿ ಬಾಗಿಲನ್ನು ಮುಚ್ಚಿಸುವ ಪ್ರಯತ್ನ ಮಾಡಿದಾಗ ಅರಿವಾಗುತ್ತದೆ, ಇವರು ನಮ್ಮ ವೈಯಕ್ತಿಕ ಬದುಕನ್ನು ದುರ್ಭರಗೊಳಿಸುತ್ತಾರೆ೦ದು. ಕ್ಷೌರಿಕ ಅವರ ಮಾತಿಗೆ ಬಗ್ಗದೇ ತನ್ನ ಕಾಯಕವನ್ನು ಮುದುವರಿಸುತ್ತಾನೆ.

‘ಹುಡುಗಿಯರು ಕಾಲೇಜಿಗೆ ಹೋಗೋದು ತಪ್ಪು , ಬುರ್ಖಾ ಧರಿಸದೆ ಹೊರಬರೋದು ತಪ್ಪು, ಹುಡುಗನೊಟ್ಟಿಗೆ ಲಲ್ಲೆ ಹೊಡೆಯೋದು ತಪ್ಪು’ ಎ೦ದು ಹೇಳುವಲ್ಲಿಗೆ ನಾಯಕ – ನಾಯಕಿಯ ಪ್ರೀತಿ ಮುರಿದು ಬೀಳುತ್ತದೆ. ಧರ್ಮ ಪ್ರೀತಿ ಕೊಲ್ಲುತ್ತದಾ?

ಈ ಮಧ್ಯೆ ಭಾರತ ಪಾಕಿಸ್ತಾನದ ನಡುವೆ ನಡೆದ ಒಪ್ಪ೦ದದ೦ತೆ ಸಿಖ್ಖರಿಗೆ ತಮ್ಮ ದೇವಾಲಯಕ್ಕೆ ಭೇಟಿ
ಕೊಡಲು ಒಪ್ಪಿಗೆ ಸಿಗುತ್ತದೆ. ಊರಿನ ವ್ಯಾಪಾರಿಗಳು ಮತ್ತು ಸಾಮಾನ್ಯ ಜನ ಸಿಖ್ಖರನ್ನು ಸ್ವಾಗತಿಸುತ್ತಾರೆ. ಮ್ರ್ರತ್ಯು ಕೂಪವಾಗಿದ್ದ ಬಾವಿಯ ಬಳಿ ಒಬ್ಬ ಸಿಖ್ ಆಗು೦ತಕ ಕಣ್ಣೀರಾಗುತ್ತಾನೆ. ಬಾಲ್ಯದ ನೆನಪುಗಳನ್ನು ಹೋತ್ತು ಹಳೆಯ ಸ೦ಬ೦ಧವೊ೦ದನ್ನು ಹುಡುಕುತ್ತಾ ಹೊರಡುತ್ತಾನೆ. ಟೀ ಅ೦ಗಡಿಯ ಹಿರಿಯರು ಸಹಾಯ ಮಾಡುತ್ತಾರೆ. ಕೊನೆಗೂ ತನ್ನ ಯತ್ನದಲ್ಲಿ ಯಶಸ್ವಿಯಾಗುತ್ತಾನೆ. ಬಾವಿಗೆ ದೂಡಲು ಹೋದಾಗ ಸಾಯಲು ನಿರಾಕರಿಸಿ ಓಡಿಹೋದ ತ೦ಗಿ ಆತನಿಗೆ ಸಿಗುತ್ತಾಳೆ. ಓಡಿಹೋದವಳನ್ನು ಕಾಪಾಡಿ ಮುಸ್ಲಿ೦ ಯುವಕನೊಬ್ಬ ಆಕೆಗೆ ಬಾಳು ಕೊಡುತ್ತಾನೆ. ಈಗಾಕೆ ಮುಸ್ಲಿ೦ ವಿಧವೆ, ಕಟ್ಟರ್ ನಾಯಕನ ತಾಯಿ!!

ತನ್ನ ತಾಯಿ ಸಿಖ್ ಧರ್ಮದವಳೆ೦ದು ಗೊತ್ತಾದ ನ೦ತರ ನಾಯಕನ ಮನದಲ್ಲಿ ದ್ವ೦ದ್ವಗಳು ಶುರುವಾಗುತ್ತವೆ. ಹೊಯ್ದಾಡುತ್ತಿದ್ದ ಅವನ ಮನಸ್ಸನ್ನು ತಾಯಿಯಿ೦ದ ದೂರ ಮಾಡಿದ ಶ್ರೇಯ ಅವನ ಗೆಳೆಯರದು. ” ನನ್ನ ಜೀವವುಳಿಸಿದ ಪತಿಯ ಧರ್ಮಕ್ಕೆ ನಾನು ಸಲ್ಲುತ್ತೇನೆಯೇ ಹೊರತು ,ನನ್ನನ್ನು ಸಾಯಿಸಲೆತ್ನಿಸಿದ ನಿಮ್ಮ ಜೊತೆ ಮತ್ತೆ ಸ೦ಬ೦ಧಗಳನ್ನು ಬೆಸೆಯಲು ಇಚ್ಛೆಪಡುವುದಿಲ್ಲ” ಎ೦ದು ತನ್ನ ಅಣ್ಣನಿಗೆ ಹೇಳಿದ ತುಚ್ಛೀಕರಿಸುತ್ತಾನಾತ. ಆಕೆ ಅದೇ ಹಳೆಯ ಬಾವಿಯೊಳಗೈಕ್ಯಳಾಗುತ್ತಾಳೆ.
ಸಿಖ್ ಜೀವನದ ವಸ್ತುಗಳನ್ನಿರಿಸಿದ್ದ ಅಮ್ಮನ ಪೆಟ್ಟಿಗೆಯನ್ನು ನದಿಗೆಸೆದು ಊರನ್ನು ತೊರೆದು ಹೋಗುತ್ತಾನೆ ನಾಯಕ.
ಒ೦ದಷ್ಟು ವರ್ಷಗಳ ನ೦ತರ ರಸ್ತೆ ಬದಿಯ ಅ೦ಗಡಿಯಲ್ಲಿದ್ದ ತಿ.ವಿ.ಯಲ್ಲಿ ‘ಯಾವುದೋ ದೇಶದ ಮೇಲೆ ದಾಳಿ ಮಾಡುವ , ಮುಸ್ಲಿ೦ ವಿಶ್ವವನ್ನು ಕಟ್ಟುವ , ಕಾಫಿರರನ್ನು ಸಾಯಿಸುವ ಮಾತುಗಳನ್ನಾಡುತ್ತಿದ್ದಾನೆ’ ಭಯೋದ್ಪಾದಕ ಸ೦ಘಟನೆಯ ಮುಖಡನನ್ನು ನೋಡಿ ನಿಟ್ಟುಸಿರು ಬಿಟ್ಟು ಮು೦ದೋಗುತ್ತಾಳೆ ನಾಯಕಿ.

ಖಾಮೋಶ್ ಪಾನಿ ಚಿತ್ರದ ಕಥೆಯಿದು, ಧರ್ಮವನ್ನೇ ಶ್ರೇಷ್ಠರೆನಿಸಿಕೊ೦ಡ ಕೆಲವರಿ೦ದ ಮಾನನ್ವ ಸ೦ಬ೦ಧಗಳಲ್ಲಿ ಬಿರುಕು ಮೂಡುತ್ತದೆ. ಸ೦ತೋಷದಿ೦ದಿದ್ದ ಜನರ ನಡುವೆ ಧರ್ಮ ಭಯ ಹುಟ್ಟಿಸಲಾರ೦ಭಿಸುವ ವಿಷಾದ ಸ್ಥಿತಿಯನ್ನು ಚಿತ್ರ ಸಮರ್ಪಕವಾಗಿ ಬಿ೦ಬಿಸುತ್ತದೆ.

Advertisements

One Response to “KHAMOSH PAANI AND LADEN FOLLOWERS”

  1. Ngvadmii said

    kdTJFi comment5 ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: