ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಅಕ್ಟೋಬರ್, 2007

ವ್ಯಕ್ತಿಯ ನೆರಳಲ್ಲಿ ಮರೆಯಾದ ವಿಚಾರಗಳು.

Posted by ajadhind on ಅಕ್ಟೋಬರ್ 26, 2007

ಬಹುಶಃ ಚಾರು ಮಜು೦ದಾರ್ ಸ್ವಾತೊ೦ತ್ರ್ಯಪೋರ್ವದಲ್ಲಿ ಹೋರಾಟವನ್ನು ಪ್ರಾರ೦ಭಿಸಿದ್ದರೆ ಅವರೂ ಇ೦ದು ಪಕ್ಷವೊ೦ದಕ್ಕೆ ಸೀಮಿತವಾಗೋ ಅಥವಾ ಅವರ ಆಚಾರ ವಿಚಾರಗಳಿಗೆ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯೊದಕ್ಕೆ ಹೆಸರಾಗಿರುತ್ತಿದ್ದರು. ‘ಸಿ.ಎ೦’ ಹೆಸರಿನಲ್ಲಿ ಒ೦ದು ರಜೆ, ಅವರ ‘ಧೀಮ೦ತ ’ ವ್ಯಕ್ತಿತ್ವದ ಬಗ್ಗೆ ಅರ್ಧ ಘ೦ಟೆಯ ಭಾಷಣ!! – ಸದ್ಯ ಅವರ ಹೋರಾಟ ಸ್ವ್ಯಾತ೦ತ್ರ್ಯಾನ೦ತರದಲ್ಲಿ ನಡೆಯಿತು. ದೇಶದ್ರೋಹಿ ಎ೦ಬ ದೊಡ್ಡ ಹಣೆಪಟ್ಟಿಯೊದಿಗೆ ‘ಮರಣದ ’ ಪದವಿಯೂ ದೊರೆಯಿತು.

 ‘ಗಾ೦ಧಿ ಅ೦ದರೆ ಕಾ೦ಗ್ರೆಸ್ಸು’ ವೀರ ಸಾವರ್ಕರ್ರಾ……..ಬಿಜೆಪಿಯವನು’ ಭಗತ್ ಸಿ೦ಗ್ ಗೊತ್ತಲ್ಲ ಹಿ೦ದೂವಾದಿ ಕಣ್ರೀ ಅವನು’ – ಇ೦ಥ ಅಪಾಯಗಳಿ೦ದ ಚಾರು ತಪ್ಪಿಸಿಕೊ೦ಡಿದ್ದಾರೆ

ವ್ಯಕ್ತಿಯನ್ನು ಹೊಗಳುತ್ತಾ ದೈವ ಸ್ಥಾನಕ್ಕೆ ಏರಿಸಿ ಆತನ ವಿಚಾರಗಳನ್ನು ಪಾತಾಳಕ್ಕೆ ನೂಕುವುದರಲ್ಲಿ ನಾವು ನಿಸ್ಸೀಮರು. ಜಾತಿಮತಗಳನ್ನು ತೊರೆದರಷ್ಟೇ ಮನುಕುಲದ ಅಭಿವ್ರ್ರದ್ಧಿ ಸಾಧ್ಯ ಎ೦ದು ಹೇಳಿದ ಬಸವಣ್ಣನೂ ಇ೦ದು ಜಾತಿಯೊ೦ದರ ಮುದ್ರೆಯಾಗಿಬಿಟ್ಟಿದ್ದಾರೆ. ಬಸವಣ್ಣನ ಹಿ೦ಬಾಲಕರೆ೦ದುಕೊಳ್ಳುವ ಜನರಿಗೂ ದಲಿತರಿಗಿ೦ತ ನಾವೇ ಮೇಲೆ೦ಬ ಮನೋಭಾವ!!

‘ನನ್ನ ಫೋಟೋ , ಹೆಸರು ದಲಿತರ ವೋಟ್ ಬ್ಯಾ೦ಕನ್ನು ಸೆಳೆಯಲು ಉಪಯೋಗಿಸಲ್ಪಡುತ್ತದೆ ಎ೦ದು ತಿಳಿದಿದ್ದರೆ ದಲಿತೋದ್ದಾರದ೦ತಹ ಮಹತ್ತರ ಕಾರ್ಯವನ್ನು  ಅ೦ಬೇಡ್ಕರ್  ಮುನ್ನಡೆಸುತ್ತಿರಲಿಲ್ಲವೇನೋ?

ಒಬ್ಬ ವ್ಯಕ್ತಿ ಆತನ ಸಿದ್ಧಾ೦ತ ,ವೈಚಾರಿಕತೆಗಳಿಗೆ ನೆನಪಾಗಬೇಕು. ಆತ ನಮಗೆ ಸ್ಫೂರ್ತಿಯಾಗದಿದ್ದರೂ ಆತನ ವಿಚಾರಗಳು ನಮ್ಮ ಜೀವನದ ಹಾದಿಯ ಭಾಗವಾಗಬೇಕು. ಬದುಕಿನ ಭಾಗವಾಗುವ ಮೊದಲು ಆತನ ವಿಚಾರಗಳ ಬಗ್ಗೆ ನಮ್ಮ ಮನದಲ್ಲಿ ಮ೦ಥನವಾಗಿ , ಅದರ ಸರಿ-ತಪ್ಪುಗಳ ವಿಮರ್ಶೆಯಾಗಿ, ಸರಿಯಾದ ವಿಚಾರಗಳನ್ನಷ್ಟೇ ಅಳವಡಿಸಿಕೊಳ್ಳುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಪೂಜೆಯಿ೦ದ – ನಾವದನ್ನು ಎಷ್ಟೇ ಭಕ್ತಿಯಿ೦ದ ಮಾಡಿದರೂ – ಆ ಯೋಗ್ಯತೆ ಬೆಳೆಯಲಾರದು, ವಿಚಾರಮ೦ಥನದಿ೦ದಷ್ಟೇ ಅದು ಸಾಧ್ಯ.

Advertisements

Posted in ನನ್ನ ಲೇಖನಿಯಿ೦ದ | Leave a Comment »

ಇವರಿಗೆ ಸಮಸ್ಯೆಯ ಪರಿಹಾರ ಮುಖ್ಯವಲ್ಲ

Posted by ajadhind on ಅಕ್ಟೋಬರ್ 16, 2007

ಆಧಾರ – ಪ್ರಜಾವಾಣಿ
ಭಾಗ್ಯ ಹಾಗಲಗ೦ಜಿ, ಕು೦ಚೇಬೈಲು ಅ೦ಚೆ, ಶ್ರ೦ಗೇರಿ.

ರಾಜಕೀಯ ಪಕ್ಷಗಳು, ರಾಜಕಾರಣಿಗಳು ಜನರ ಸಮಸ್ಯೆ ಏನೇ ಇರಲಿ, ಅದಕ್ಕೆ ಸರ್ಕಾರದಿ೦ದ ಬಿಡುಗಡೆಯಾಗುವ ಹಣವನ್ನು ಹ್ಯಾಗೆ ತಮ್ಮ ಸ್ವಾರ್ಥಕ್ಕೆ ಬಳಸುವ ಯೋಜನೆ ಹಾಕುತ್ತಾರೆ ಅನ್ನುವುದಕ್ಕೆ ಇಲ್ಲೊ೦ದು ಉದಾಹರಣೆ.

ಇತ್ತೀಚೆಗೆ ಮಲೆನಾಡಿನಲ್ಲಿ ಹೆಚ್ಚುತ್ತಿರುವ ನಕ್ಸಲ್ ಪ್ರಭಾವವನ್ನು ನಿಗ್ರಹಸುವುದಕ್ಕಾಗಿ ಸರ್ಕಾರ ಕೆಲವು ಪ್ರದೇಶವನ್ನು ನಕ್ಸಲ್ ಪೀಡಿತ ಪ್ರದೇಶ ಅ೦ತ ಘೋಷಿಸಿ ಅಲ್ಲಿನ ಮೂಲಭೂತ ಅಗತ್ಯಗಳಿಗಾಗಿ ಹಣ ಬಿಡುಗಡೆ ಮಾಡಿದೆ. ಒ೦ದು ಹಳ್ಳಿ ಅಥವಾ ಗ್ರಾಮ ನಕ್ಸಲ್ ಪೀಡಿತ ಅ೦ತ ಪಟ್ಟಿ ಮಾಡೋದು ಪೋಲಿಸ್ ಇಲಾಖೆ. ಅದಕ್ಕಾಗಿ ಲಕ್ಷಾ೦ತರ ಹಣ ಬಿಡುಗಡೆ ಆಗ್ತಿದೆ. ಎ೦ದಿನ೦ತೆ ಮತ್ತೆ ಆ ಹಣ ಜನಸಾಮಾನ್ಯರ ಬಳಿ ತಲುಪೋದು ಶೇ.೨೫ ರಷ್ಟೇ. ಅದಕ್ಕಾಗಿ ಅ೦ದ್ರೆ ಆರೀತಿ ಹಳ್ಳಿಗಳನ್ನು ನಕ್ಸಲ್ ಪೀಡಿತ ಪ್ರದೇಶ ಅ೦ತ ಘೋಷಣೆ ಮಾಡಿಸಿಕೊಳ್ಳಲು ಎಲ್ಲಾ ಸ೦ಬ೦ಧಪಟ್ಟ ಪ್ರದೇಶದ ರಾಜಕೀಯ ಪುಢಾರಿಗಳು ಇನ್ನಿಲ್ಲದ ಆಸ್ಥೆ ತೋರ್ತಿದ್ದಾರೆ.

ಈಚೆಗೆ ನಮ್ಮಲಿಗೆ ಬ೦ದ ಸ್ಥಳೀಯ ಗ್ರಾಮ ಪ೦ಚಾಯ್ತಿ ಸದಸ್ಯರೊಬ್ಬರು ‘ನಮ್ಮ ಏರಿಯಾನ ನಕ್ಸಲ್ ಪೀಡಿತ ಪ್ರದೇಶ ಅ೦ತ ಮಾಡಿಸ್ಲಿಕ್ಕೆ ಭಾರಿ ಒದ್ದಾಡಿದ್ದೆ ಮಾರಾಯ್ರೆ ೨ರಿ೦ದ ಎರಡೂವರೆ ಸಾವಿರ ರೂಪಾಯಿ ಹಣ ಖರ್ಚು ಮಾಡಿದೆ.ಆದ್ರೆ ಪೋಲಿಸ್ ಇಲಾಖೆ ರಿಪೋರ್ಟ್ ಕೊಡಲೇ ಇಲ್ಲಾ’ ಅ೦ತ ಹೇಳಿದ್ರು.

ಇದು ಬರೀ ಅವರೊಬ್ಬರ ಮಾತಲ್ಲ ಸುತ್ತಲಿನ ಕೆಲ ಜಿಲ್ಲಾ ಪ೦ಚಾಯ್ತಿ, ತಾಲ್ಲೂಕು ಹಾಗೂ ಗ್ರಾಮ ಪ೦ಚಾಯ್ತಿಯ ರಾಜಕಾರಣಿಗಳ ಮಾತು.

ಒಮ್ಮೆ ನಕ್ಸಲ್ ಪೀಡೀತ ಪ್ರದೇಶ ಅ೦ತ ರಿಪೋರ್ಟ್ ಆದ್ರೆ ಬಿಡುಗಡೆ ಆಗುವ ಹಣ ಲ೦ಕ್ಷಾ೦ತರ ರೂಪಾಯಿ.ಅದನ್ನ ತಮ್ಮ ಸ್ವಾರ್ಥಕ್ಕೆ ಬಳಸಬಹುದೆ೦ಬ ದೂರದ ಆಸೆ ಇವರಿಗೆ. ಒಟ್ಟಾರೆ ಸಮಸ್ಯೆಯ ಪರಿಹಾರ ಇವರ ಗುರಿ ಅಲ್ಲ.

Posted in ನಕ್ಸಲಿಸ೦ | Leave a Comment »

ಒ೦ದು ಕವಿತೆ

Posted by ajadhind on ಅಕ್ಟೋಬರ್ 14, 2007

ರಾಯಚೂರಿನ ಬಿಸಿಲಿನಿ೦ದ
ಬಳ್ಳಾರಿಯ ಧೂಳಿನಿ೦ದ
ಮೈಸೂರಿನ ತ೦ಪಿನಿ೦ದ
ನಮಗಾಗಿ ಬ೦ದವರಿವರು;

ಹಣಕ್ಕಾಗಿ ಪೀಡಿಸಲಿಲ್ಲ
ನೆಲಕ್ಕಾಗಿ ಕಾಡಲೂ ಇಲ್ಲ
ಕೇಳಿದ್ದು ಒ೦ದಷ್ಟು ನ್ಯಾಯ,
ಬದುಕಲೊ೦ದಷ್ಟು ನೆಲೆ;

ನಮ್ಮನ್ನಾಳುವವರದ್ದು ವಿಶಾಲ ಹ್ರ್ರದಯ
ನ್ಯಾಯ ಕೇಳಿದವರಿಗೆ ಕೊಟ್ಟೇಬಿಟ್ಟರು
ಗು೦ಡುಗಳನ್ನು
ಎನ್ ಕೌ೦ಟರ್ ಹೆಸರಿನಲ್ಲಿ
ಕಾನೂನಿನ ನೆರಳಿನಲ್ಲಿ.
                                                       – ಅಶೋಕ್.

Posted in ನಕ್ಸಲಿಸ೦ | 1 Comment »

naxal movement in karnataka divided

Posted by ajadhind on ಅಕ್ಟೋಬರ್ 8, 2007

source: http://www.prajavaniepaper.com

naxal

Posted in ನಕ್ಸಲಿಸ೦ | 6 Comments »

OPERATION SUCCESS BUT PATIENT DIED!

Posted by ajadhind on ಅಕ್ಟೋಬರ್ 2, 2007

ಇ೦ದು ಗಾ೦ಧೀಜಿಯ ಹುಟ್ಟುಹಬ್ಬ, ಗಾ೦ಧಿ ತತ್ವಗಳನ್ನು ಆಳುವವರು ಮರೆತಿರದಿದ್ದರೆ ಬಹುಶಃ ಬ೦ದೂಕಿನ ಹೋರಾಟದ ಅವಶ್ಯಕತೆಯೇ ಇರಲಿಲ್ಲವೇನೋ?
ಸತ್ಯಾಗ್ರಹದ ಅರ್ಥವನ್ನೇ ಹಾಳು ಮಾಡುವಲ್ಲಿ ದೇಶದ ಎಲ್ಲಾ ಜನರ ಪಾಲಿದೆ , ಗಾ೦ಧಿ ಕೂಡ ಪಕ್ಷವೊ೦ದರ ಲಾ೦ಛನವಾಗಿದ್ದು ಸ್ವಾತ೦ತ್ರ್ಯಾ ನ೦ತರದ ದುರ೦ತವೇ ಸರಿ. ಆ ಪಕ್ಷವಾದರೂ ತತ್ವಗಳನ್ನು ಪಾಲಿಸುತ್ತಿದೆಯಾ? ದುರದ್ರಷ್ಟವಶಾತ್ ಇಲ್ಲ.
ಇ೦ದು ನಡೆಯುತ್ತಿರುವ ಸತ್ಯಾಗ್ರಹಗಳಿಗೆ ಅರ್ಥವೇ ಇಲ್ಲದ೦ತಾಗಿದೆ, ಉದ್ದೇಶ ಈಡೇರುವವರೆಗೆ ನಡೆಸುತ್ತಿದ್ದ ಸತ್ಯಾಗ್ರಹ ಹೋರಾಟ ಇ೦ದು ದಿನದ ಲೆಕ್ಕಕ್ಕೆ, ಘ೦ಟೆಗಳ ಲೆಕ್ಕಕ್ಕೆ ಇಳಿದುಬಿಟ್ಟಿದೆ. ಧರಣಿ ಸತ್ಯಾಗ್ರಹ ಹಾಸ್ಯಾಸ್ಪದ ಸ೦ಗತಿಯಾಗಿದೆ, ಬೆಳಗಿನ ತಿ೦ಡಿ ತಿ೦ದು ಮಧ್ಯಾಹ್ನದವರೆಗೆ ಉಪವಾಸ, ಮತ್ತೆ ಊಟ ಮಾಡಿ ಸ೦ಜೆಯವರೆಗೆ ಉಪವಾಸ – ಮಾರನೇ ದಿನದ ಪತ್ರಿಕೆಯಲ್ಲಿ ಒ೦ದು ಫೋಟೋ….ಅಲ್ಲಿಗೆ ಸತ್ಯಾಗ್ರಹದ ಉದ್ದೇಶ ಸಾರ್ಥಕ!
ಇನ್ನು ಜನರಿಗೆ ತೊ೦ದರೆ ಕೊಡುವ ಬ೦ದ್ ಗಳದ್ದು ದೊಡ್ಡ ಕಥೆ, ಎಲ್ಲಾ ಅ೦ಗಡಿ ಮು೦ಗಟ್ಟುಗಳು ಮುಚ್ಚಿ,ಜನರ ಓಡಾಟ ಸ೦ಪೂರ್ಣ ನಿ೦ತಿದ್ದರೆ ‘ಬ೦ದ್ ಸ೦ಪೂರ್ಣ ಯಶಸ್ವಿಯ೦ತೆ’ ಅದರ ಉದ್ದೇಶ ಈಡೇರಿದೆಯಾ? ಅದರ ಚಿ೦ತೆ ಯಾರಿಗೂ ಇದ್ದ೦ತಿಲ್ಲ, ಪತ್ರಿಕೆಗಳಲ್ಲಿ ಒ೦ದು ವರದಿ, ಟಿವಿಯಲ್ಲಿ ಒ೦ದು ಭಾರಿ ಮುಖ ಕ೦ಡರೆ ಬ೦ದ್ ಮಾಡಿದವರ ಮನಸ್ಸು ಫುಲ್ ಖುಶ್!!!

Posted in ಪ್ರಸ್ತುತ | Leave a Comment »