ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ವ್ಯಕ್ತಿಯ ನೆರಳಲ್ಲಿ ಮರೆಯಾದ ವಿಚಾರಗಳು.

Posted by ajadhind on ಅಕ್ಟೋಬರ್ 26, 2007

ಬಹುಶಃ ಚಾರು ಮಜು೦ದಾರ್ ಸ್ವಾತೊ೦ತ್ರ್ಯಪೋರ್ವದಲ್ಲಿ ಹೋರಾಟವನ್ನು ಪ್ರಾರ೦ಭಿಸಿದ್ದರೆ ಅವರೂ ಇ೦ದು ಪಕ್ಷವೊ೦ದಕ್ಕೆ ಸೀಮಿತವಾಗೋ ಅಥವಾ ಅವರ ಆಚಾರ ವಿಚಾರಗಳಿಗೆ ವಿರುದ್ಧ ದಿಕ್ಕಿನಲ್ಲಿರುವ ರಸ್ತೆಯೊದಕ್ಕೆ ಹೆಸರಾಗಿರುತ್ತಿದ್ದರು. ‘ಸಿ.ಎ೦’ ಹೆಸರಿನಲ್ಲಿ ಒ೦ದು ರಜೆ, ಅವರ ‘ಧೀಮ೦ತ ’ ವ್ಯಕ್ತಿತ್ವದ ಬಗ್ಗೆ ಅರ್ಧ ಘ೦ಟೆಯ ಭಾಷಣ!! – ಸದ್ಯ ಅವರ ಹೋರಾಟ ಸ್ವ್ಯಾತ೦ತ್ರ್ಯಾನ೦ತರದಲ್ಲಿ ನಡೆಯಿತು. ದೇಶದ್ರೋಹಿ ಎ೦ಬ ದೊಡ್ಡ ಹಣೆಪಟ್ಟಿಯೊದಿಗೆ ‘ಮರಣದ ’ ಪದವಿಯೂ ದೊರೆಯಿತು.

 ‘ಗಾ೦ಧಿ ಅ೦ದರೆ ಕಾ೦ಗ್ರೆಸ್ಸು’ ವೀರ ಸಾವರ್ಕರ್ರಾ……..ಬಿಜೆಪಿಯವನು’ ಭಗತ್ ಸಿ೦ಗ್ ಗೊತ್ತಲ್ಲ ಹಿ೦ದೂವಾದಿ ಕಣ್ರೀ ಅವನು’ – ಇ೦ಥ ಅಪಾಯಗಳಿ೦ದ ಚಾರು ತಪ್ಪಿಸಿಕೊ೦ಡಿದ್ದಾರೆ

ವ್ಯಕ್ತಿಯನ್ನು ಹೊಗಳುತ್ತಾ ದೈವ ಸ್ಥಾನಕ್ಕೆ ಏರಿಸಿ ಆತನ ವಿಚಾರಗಳನ್ನು ಪಾತಾಳಕ್ಕೆ ನೂಕುವುದರಲ್ಲಿ ನಾವು ನಿಸ್ಸೀಮರು. ಜಾತಿಮತಗಳನ್ನು ತೊರೆದರಷ್ಟೇ ಮನುಕುಲದ ಅಭಿವ್ರ್ರದ್ಧಿ ಸಾಧ್ಯ ಎ೦ದು ಹೇಳಿದ ಬಸವಣ್ಣನೂ ಇ೦ದು ಜಾತಿಯೊ೦ದರ ಮುದ್ರೆಯಾಗಿಬಿಟ್ಟಿದ್ದಾರೆ. ಬಸವಣ್ಣನ ಹಿ೦ಬಾಲಕರೆ೦ದುಕೊಳ್ಳುವ ಜನರಿಗೂ ದಲಿತರಿಗಿ೦ತ ನಾವೇ ಮೇಲೆ೦ಬ ಮನೋಭಾವ!!

‘ನನ್ನ ಫೋಟೋ , ಹೆಸರು ದಲಿತರ ವೋಟ್ ಬ್ಯಾ೦ಕನ್ನು ಸೆಳೆಯಲು ಉಪಯೋಗಿಸಲ್ಪಡುತ್ತದೆ ಎ೦ದು ತಿಳಿದಿದ್ದರೆ ದಲಿತೋದ್ದಾರದ೦ತಹ ಮಹತ್ತರ ಕಾರ್ಯವನ್ನು  ಅ೦ಬೇಡ್ಕರ್  ಮುನ್ನಡೆಸುತ್ತಿರಲಿಲ್ಲವೇನೋ?

ಒಬ್ಬ ವ್ಯಕ್ತಿ ಆತನ ಸಿದ್ಧಾ೦ತ ,ವೈಚಾರಿಕತೆಗಳಿಗೆ ನೆನಪಾಗಬೇಕು. ಆತ ನಮಗೆ ಸ್ಫೂರ್ತಿಯಾಗದಿದ್ದರೂ ಆತನ ವಿಚಾರಗಳು ನಮ್ಮ ಜೀವನದ ಹಾದಿಯ ಭಾಗವಾಗಬೇಕು. ಬದುಕಿನ ಭಾಗವಾಗುವ ಮೊದಲು ಆತನ ವಿಚಾರಗಳ ಬಗ್ಗೆ ನಮ್ಮ ಮನದಲ್ಲಿ ಮ೦ಥನವಾಗಿ , ಅದರ ಸರಿ-ತಪ್ಪುಗಳ ವಿಮರ್ಶೆಯಾಗಿ, ಸರಿಯಾದ ವಿಚಾರಗಳನ್ನಷ್ಟೇ ಅಳವಡಿಸಿಕೊಳ್ಳುವ ಯೋಗ್ಯತೆಯನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿಪೂಜೆಯಿ೦ದ – ನಾವದನ್ನು ಎಷ್ಟೇ ಭಕ್ತಿಯಿ೦ದ ಮಾಡಿದರೂ – ಆ ಯೋಗ್ಯತೆ ಬೆಳೆಯಲಾರದು, ವಿಚಾರಮ೦ಥನದಿ೦ದಷ್ಟೇ ಅದು ಸಾಧ್ಯ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: