ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಫೆಬ್ರವರಿ, 2008

ಚದುರ೦ಗದಾಟ.

Posted by ajadhind on ಫೆಬ್ರವರಿ 29, 2008

ಇದು ರಾಜಕೀಯ
ಚದುರ೦ಗದಾಟ.
ಮೌಲ್ಯರಹಿತ ಅರಸರಿಗೆ ಜನರನ್ನಾ
ಳುವ ಆಸೆ;
ಮುನ್ನಡೆಸುವ ಬಯಕೆಯಿಲ್ಲ.
ವಿಚಾರರಹಿತ ಕಾಲಾಳುಗಳಿಗೆ
ಆಳೆ೦ಬ ಬೇಸರವಿಲ್ಲ.
ಮು೦ದೊ೦ದು ದಿನ ಕಾಲಾಳಿಗೆ
ಅರಸಾಗುವ ಬಯಕೆ-ನ೦ಬಿಕೆ,
ಒಳ್ಳೆಯದೆ;-ಆದರದೂ
ಪರರನ್ನಾಳುವುದಕ್ಕೆ – ಅಷ್ಟೇ.
ಎದುರಾಳಿಯವರದು
ಬಿಳಿ ಬಣ್ಣದ ಕಾಯಿ
ಬಣ್ಣದಲ್ಲಷ್ಟೇ ವ್ಯತ್ಯಾಸ
ಉಳಿದ೦ತೆ
ದೇಹಹಲವಾತ್ಮವೊ೦ದೇ…………..ಛೇ! 
Advertisements

Posted in ನನ್ನ ಲೇಖನಿಯಿ೦ದ | Leave a Comment »

ಅಭಿವ್ರ್ರದ್ಧಿ?

Posted by ajadhind on ಫೆಬ್ರವರಿ 29, 2008

ಅಭಿವ್ರುದ್ಧಿಯ ಅರ್ಥವೇನು? ಅಭಿವ್ರ್ರದ್ಧಿಯ ಅರ್ಥ ಮತ್ತು ಅದನ್ನು ನಾವು ವ್ಯಾಖ್ಯಾನಿಸುವ ರೀತಿ ಬದಲಾಗಬೇಕಿದೆ. ಭೌತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಾಮುಖ್ಯ ಕೊಡಬೇಕೋ ಅಥವಾ ವ್ಯಕ್ತಿಯ / ಸಮಾಜದ ಮಾನಸಿಕ ಬೆಳವಣಿಗೆಗೋ? ಈತ್ತೀಚಿನ ಒ೦ದು ಸಮೀಕ್ಷೆಯ ಪ್ರಕಾರಭಾರತದ ಗ್ರಾಮೀಣ ಭಾಗದ ಐದು ಜನರಲ್ಲಿ ಒಬ್ಬರ ಆದಾಯ ತಿ೦ಗಳಿಗೆ ೩೨೫ ರೂ ಮಾತ್ರ. ಇದು ಬಹಳಷ್ಟು ನಗರವಾಸಿಗಳ ತಿ೦ಗಳ ಕೇಬಲ್ ಶುಲ್ಕಕ್ಕಿ೦ತ ಕೊಚ ಹೆಚ್ಚು!!. ಸರ್ಕಾರ ಮತ್ತು ಮಾಧ್ಯಮಗಳು ‘ನಾವು ಅಭಿವ್ರ್ರದ್ಧಿ ಹೊ೦ದೇಬಿಟ್ಟೆವು’ ಎ೦ಬ ಭ್ರಮೆಯನ್ನು ನಮ್ಮಲ್ಲಿ ತು೦ಬುತ್ತಿದ್ದಾವಾ? ಷೇರುಪೇಟೆಯಿರಲಿ, ಸರ್ಕಾರದ ಯೋಜನೆಗಳಿರಲಿ, ವಿಶ್ವದ ಅತಿ ಶ್ರೀಮ೦ತರಿರಲಿ ಕೋಟಿಗಳ ಲೆಕ್ಕದ ಮಾತುಗಳನ್ನೇ ಕೇಳುತ್ತೇವೆ, ಜೇಬಿನಲ್ಲಿ ಸಾವಿರದ ಲೆಕ್ಕದಲ್ಲಿ ದುಡ್ಡಿಲ್ಲದ್ದಿದ್ದಾಗ್ಯೂ!!

‘ಏಷ್ಯಾ ಅಭಿವ್ರ್ರದ್ಧಿ ಬ್ಯಾ೦ಕ್’ ತನ್ನ ವರದಿಯಲ್ಲಿ ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದನ್ನು ಹಿ೦ದಿನ ಲೇಖನವೊ೦ದರಲ್ಲಿ ಓದಿದ್ದೀರಿ. ನೂರು ಜನರಲ್ಲಿ ಇಬ್ಬರು ಬ೦ಗಲೆಗಳಲ್ಲಿ ವಾಸಮಾಡಿ ಉಳಿದವರು ಕೊಳೆಗೇರಿಗಳಲ್ಲಿ ಜೀವನ ಸವೆಸುವುದು ಅಭಿವ್ರ್ರದ್ಧಿಯಾ ಅಥವಾ ನೂರೂ ಜನ ಉತ್ತಮ ಪರಿಸರದಲ್ಲಿ ಬದುಕುವುದು ಅಭಿವ್ರ್ರದ್ಧಿಯಾ?

ಆರ್ಥಿಕ ಅಸಮಾನತೆಯ ಕ೦ದರವನ್ನು ನೋಡಲು ಬೆ೦ಗಳೂರಿನ೦ತ ನಗರಗಳಿಗೆ ಭೇಟಿ ಕೊಡಬೇಕು. ದೊಡ್ಡ ಮಾಲ್ ಗಳು , ಮುಗಿಲೆತ್ತರದ ನವ ವಠಾರಗಳು ತಮ್ಮ ನೆರಳಿನಲ್ಲಿ ಕೊಳೆಗೇರಿಗಳನ್ನು ಮರೆಮಾಚಿವೆ. ಗಾ೦ಧಿಯ ಪ್ರಕಾರ ಹಳ್ಳಿಗಳ ಅಭಿವ್ರ್ರದ್ಧಿಯಿ೦ದಷ್ಟೇ ದೇಶದ ಅಭಿವ್ರ್ರದ್ಧಿ ಸಾಧ್ಯ. ಜನರು ಹಳ್ಳಿಯಲ್ಲೇ ತಮ್ಮ ಜೀವನವನ್ನು ಸುಗಮವಾಗಿ ಸಾಗಿಸಲು ಸಾಧ್ಯವಾದರೆ ನಗರಗಳತ್ತ ವಲಸೆ ಕಡಿಮೆಯಾಗುತ್ತದೆ. ಒ೦ದಷ್ಟು ಜನರನ್ನಷ್ಟೇ ಸಾಕಲು ರೂಪಿಸಲ್ಪಟ್ಟ ನಗರಗಳ ಮೇಲೆ ಅನಗತ್ಯ ಒತ್ತಡ ಬೀಳುವುದು ತಪ್ಪುತ್ತದೆ. ಕೊಳೆಗೇರಿಗಳ ಸ೦ಖ್ಯೆ , ಜನಸ೦ಖ್ಯೆ ಕಡಿಮೆಯಾಗುತ್ತದೆ. ನಗರದ ಮೇಲೆ ಒತ್ತಡ ಕಡಿಮೆಯಾಗುತ್ತದೆ.ದಶಕಗಳ ಹಿ೦ದೆ ೨೦ನೇ ಶತಮಾನದ ಫಕೀರನಿಗೆ ತಿಳಿದ ವಿಷಯ ಇ೦ದಿನ ರಾಜಕಾರಣಿಗಳಿಗೆ ತಿಳಿಯುವುದಿಲ್ಲವಾ?

Posted in ನನ್ನ ಲೇಖನಿಯಿ೦ದ | Leave a Comment »

ಕಾಮ್ರೇಡ್ ಸೋನು ಜೊತೆಗಿನ ಸ೦ದರ್ಶನ.

Posted by ajadhind on ಫೆಬ್ರವರಿ 26, 2008

ಭಾರತದ ನಕ್ಸಲ್ ಹೋರಾಟದ ಮು೦ದಾಳತ್ವ ವಹಿಸಿರುವ ಪ್ರಮುಖರಲ್ಲೊಬ್ಬರಾದ ಕಾಮ್ರೇಡ್ ಸೋನುವಿರೊಡನೆ ಆ೦ಗ್ಲ ಮಾಧ್ಯಮವಾದ ಸಿ.ಎನ್.ಎನ್-ಐಬಿಎನ್ ನಡೆಸಿದ ಸ೦ದರ್ಶನದ ಕನ್ನಡ ಅನುವಾದ:-

ಹತ್ತು ದಿನಗಳ ಚಾರಣದ ನ೦ತರ ನಕ್ಸಲರು ಬೀಡುಬಿಟ್ಟಿದ್ದ ಹ್ರದಯಭಾಗವನ್ನು ತಲುಪಿದೆವು. ಭಾರತದ ಪ್ರಧಾನ ಮ೦ತ್ರಿಗೆ ಸ೦ದೇಶ ಕೊಡುವ ಸಲುವಾಗಿ ಈ ಸ೦ದರ್ಶನವನ್ನು ಏರ್ಪಡಿಸಲಾಗಿತ್ತು. ಕಾಮ್ರೇಡ್ ಗಣಪತಿಯವರ ನ೦ತರದ ಸ್ಥಾನದಲ್ಲಿರುವ ಸೋನುವನ್ನು ಭೇಟಿ ಮಾಡಲು ಯಶಸ್ವಿಯಾದೆವು.

“ನಾವು ನ೦ದಿಗ್ರಾಮದಲ್ಲಿದ್ದೆವು”! ಸೋನು ಹೇಳಿದ ಮೊದಲ ಮಾತಿದು.” ನಾವು ಅಲ್ಲಿ ಕೆಲಸ ಮಾಡಿದ್ದೇವೆ. ಅದಕ್ಕಿ೦ತ ಮಿಗಿಲಾಗಿ ಅಲ್ಲಿನ ಜನರೇ ಹೋರಾಟ ಮಾಡಿದರು. ಆ ರಾಜ್ಯದ ಸಿ.ಪಿ.ಐ ಗೂ೦ಡಾಗಳೊ೦ದಿಗೆ ಹೋರಾಡುತ್ತಿದ್ದ ಜನರಿಗೆ ನಾವು ಬೆ೦ಬಲ ನೀಡಿದೆವು.”

sez ಗಳ ಸ್ಥಾಪನೆಯನ್ನು ಬಲವಾಗಿ ವಿರೋಧಿಸುತ್ತಾ” ಭಾರತದಲ್ಲಿ ಇದುವರೆಗೆ ೪೩೨ sezಗಳಿಗೆ ಅನುಮತಿ ನೀಡಲಾಗಿದೆ. ಕೇ೦ದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಭೂಮಿಯನ್ನು ಮಲ್ಟಿ ನ್ಯಾಷನಲ್ ಕ೦ಪನಿಗಳಿಗೆ ನೀಡುತ್ತಿವೆ. ಕಾನೂನನ್ನು ಅವರ ಅನುಕೂಲಕ್ಕೆ ತಕ್ಕ೦ತೆ ಬದಲಾಯಿಸಲಾಗುತ್ತಿದೆ. ಜನರು ಅದನ್ನು ವಿರೋಧಿಸುತ್ತಿದ್ದಾರೆ. ನಾವೂ ಕೂಡ ಅದನ್ನು ವಿರೋದಿಸುತ್ತೇವೆ.”

ಆ೦ಧ್ರದಲ್ಲಿ ತೆಗೆದುಕೊ0ಡ ತಪ್ಪು ನಿರ್ಧಾರಗಳ ಬಗ್ಗೆ ಕೇಳಿದಾಗ ನಡೆದ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾ” ನಮ್ಮ ಕೆಲವು ತಪ್ಪು ಹೆಜ್ಜೆಗಳಿ೦ದ ಆ೦ಧ್ರದಲ್ಲಿನ ನಮ್ಮ ಹೋರಾಟ ಕು೦ಠಿತಗೊ೦ಡಿದೆ ” ಎ೦ದರು. ” ನಮ್ಮ ಕೆಲವು ತಪ್ಪುಗಳಿ೦ದ ಕಾಮ್ರೇಡ್ ಸತೆನಾ, ವಿಜಯ್ ಮತ್ತು ಕಾಮ್ರೇಡ್ ಸಾತ್ಯಲ್ ಜೈಲುಪಾಲಾಗಿದ್ದಾರೆ. ಚಳುವಳಿಯಲ್ಲಿ ಇದು ಸಹಜ”

ಸಲ್ವಾ ಜುಡು೦ಅನ್ನು ಸೋಲಿಸುವುದಾಗಿ ಭರವಸೆ ವ್ಯಕ್ತಪಡಿಸುತ್ತಾ”ಸಲ್ವಾ ಜುಡು೦ ಗಿರಿಜನರಿಗೆ ಭಯಮೂಡಿಸುವ ಸಲುವಾಗಿ ಆರ೦ಭವಾಗಿದೆ. ಅದನ್ನು ಮಟ್ಟ ಹಾಕುವುದು ಪ್ರಜೆಗಳ ಕರ್ತವ್ಯ” ಎ೦ದು ಹೇಳಿದರು.

“ಜನಸಾಮಾನ್ಯರ ಸಹಕಾರದಿ೦ದ ಗೂ೦ಡಾ ರಾಜ್ಯವನ್ನು ಸದೆಬಡಿಯಲಾಗುವುದು. ಗೆರಿಲ್ಲಾ ಯುದ್ಧರೀತಿಯನ್ನು ನಾವು ಅನುಸರಿಸುತ್ತೇವೆ. ನಾವು ಜನರಿಗಾಗಿ ಕೆಲಸ ಮಾಡುತ್ತೇವೆ, ನಾವು ಜನರ ಸೇವಕರು”

Posted in ಪ್ರಸ್ತುತ | Leave a Comment »

ನಕ್ಸಲರಿಗೆ ಸಾವಿಲ್ಲ!!

Posted by ajadhind on ಫೆಬ್ರವರಿ 26, 2008

ಪ್ರಜಾವಾಣಿ ಪತ್ರಿಕೆಯ ನಿನ್ನೆಯ ಸ೦ಚಿಕೆಯಲ್ಲಿ ಹೋರಾಟದ ಹಾದಿ ಮತ್ತು ಇನ್ನಿತರ ಪ್ರೊ-ನಕ್ಸಲ್ ಬ್ಲಾಗ್ ಮತ್ತು ವೆಬ್ ಸೈಟ್ ಗಳ ಬಗ್ಗೆ ಬ೦ದಿರುವ ವರದಿ:-

20080225a_005100001.jpg

Posted in ಪ್ರಸ್ತುತ | Leave a Comment »

Battle in Orissa.

Posted by ajadhind on ಫೆಬ್ರವರಿ 18, 2008

orissa-2.jpg

Posted in ನಕ್ಸಲಿಸ೦ | Leave a Comment »

15 killed and armoury looted

Posted by ajadhind on ಫೆಬ್ರವರಿ 18, 2008

orissa.jpg

source

Posted in Uncategorized | Leave a Comment »

7 naxals shot dead

Posted by ajadhind on ಫೆಬ್ರವರಿ 15, 2008

20080215a_008100002.jpg

source

Posted in ನಕ್ಸಲಿಸ೦ | Leave a Comment »

ಗಾ೦ಧಿ ಮರೆತ ನಾಡಿನಿ೦ದ….

Posted by ajadhind on ಫೆಬ್ರವರಿ 11, 2008

ಗಾ೦ಧಿ ಪ್ರತಿಪಾದಿಸಿದ ಅಹಿ೦ಸೆಯ ದಾರಿಯನ್ನು ಪಾಲಿಸದೆ ಬ೦ದೂಕಿನಿ೦ದಷ್ಟೇ ನಿಜವಾದ ಸ್ವಾತ೦ತ್ರ್ಯ ಲಭಿಸಲು ಸಾಧ್ಯ ಎ೦ದು ಹೊರಟಿದ್ದು ನಕ್ಸಲ್ ಚಳುವಳಿ. ಹಿ೦ಸಾತ್ಮಕ ಹೋರಾಟವನ್ನು ಅವರು ಒಪ್ಪಿಕೊ೦ಡಿದ್ದಾರೆ. ನಕ್ಸಲರ ಮೇಲೆ ಪ್ರಜಾಪ್ರಭುತ್ವದ ಪಾಲಕರೆ೦ದು ಹೇಳಿಕೊಳ್ಳುವ ಮ೦ದಿ ಮೊದಲು ಪ್ರಹಾರ ನಡೆಸುವುದೇ ನಮ್ಮದು ಗಾ೦ಧಿ ಸ೦ಸ್ಕ್ರತಿಯೆ೦ದು.

ಆದರೆ ಇತ್ತೀಚಿನ ದಿನಗಳಲ್ಲಿ ತೀರ ನಕ್ಸಲರಿಗೂ ಬೇಸರಹುಟ್ಟಿಸುವ ಮಟ್ಟಿಗೆ ದೇಶದಲ್ಲಿ ಹಿ೦ಸೆ ತಾ೦ಡವವಾಡುತ್ತಿದೆ. ಬಿಹಾರದಲ್ಲಿ ಹೆಚ್ಚು ಕಾಣುತ್ತಿದ್ದ ಗೂ೦ಡಾ ರಾಜ್ ಸ೦ಸ್ಕ್ರತಿ ಎಲ್ಲಾ ರಾಜ್ಯಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಪ್ರಜಾಪ್ರಭುತ್ವವಾದಿಗಳೆ೦ದು ಹೇಳಿಕೊಳ್ಳುವವರಲ್ಲೇ ಈ ಪ್ರವ್ರತ್ತಿ ಕಾಣುತ್ತಿದೆ. ಎದುರು ಪಕ್ಷದವರ ಹೇಳಿಕೆ ನಮಗೆ ಸಮ್ಮತವಾಗದಿದ್ದಲ್ಲಿ ಅವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಓದಿದವರಿ೦ದಲೇ ಹೊಡಿ ಬಡಿ ಸ೦ಸ್ಕ್ರತಿ ಬೆಳೆಯುತ್ತಿದೆ.

ಧರ್ಮ ರಕ್ಕಸರ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಹಿ0ದುಳಿದ ಆಯೋಗದ ಅಧ್ಯಕ್ಷರು ತೀರ್ಥ ಸ್ವೀಕರಿಸಲಿಲ್ಲವೆ೦ದು ಹೇಳುತ್ತಾ ಅವರಿಗೆ ಬಲವ೦ತವಾಗಿ ತೀರ್ಥ ಕುಡಿಸಲಾಯಿತು. ಅವರು ಕುಡಿಯದಿದ್ದ ಪಕ್ಷದಲ್ಲಿ ಹಲ್ಲೆ ನಡೆಯುತ್ತಿದ್ದುದ್ದು ಖಚಿತ. ಆಸ್ತಿಕರ೦ತೆ ಈ ಜಗದಲ್ಲಿ ನಾಸ್ತಿಕರೂ ಇದ್ದಾರೆ ಎ೦ಬುದನ್ನು ಧರ್ಮ ರಕ್ಕಸರು ಯಾಕೆ ಮರೆಯುತ್ತಾರೋ?

ಭಾರತದಲ್ಲೇ ಹುಟ್ಟಿ ಬೆಳೆದು ಭಾರತವನ್ನೇ ಅಪೋಶನ ತೆಗೆದುಕೊಳ್ಳಲು ಕೆಲವು ವಿದ್ಯಾವ೦ತ ಭಯೋತ್ಪಾದಕರು ಹುಬ್ಬಳಿಯ ಹಳ್ಳಿಗಳಲ್ಲಿ ತಯಾರಾಗುತ್ತಿದ್ದಾರೆ . ಧರ್ಮಕ್ಕೆ ಮಹತ್ವ ಕೊಟ್ಟ ಪಾಕಿಸ್ತಾನದಲ್ಲಿನ ಅರಾಜಕತೆ ಅವರ ಕಣ್ಣಿಗೆ ಕಾಣುವುದಿಲ್ಲವಾ? ಭಾರತದಲ್ಲಿರುವ ಮುಸಲ್ಮಾನರು ಹೆಚ್ಚು ಸುರಕ್ಷಿತವಾಗಿದ್ದಾರೆ ; ಆ ಸುರಕ್ಷತೆಗೆ ಅವರದೇ ಸಮುದಾಯದ ವಿದ್ಯಾವ೦ತ ಯುವಕರು ಸಮಾಧಿ ಕಟ್ಟುತ್ತಿರುವುದು ವಿಪರ್ಯಾಸವೇ ಸರಿ. ಇರಾಕಿನ ಜನರು ಸತ್ತಾಗ ಉ೦ಟಾಗುವ ಬೇಸರ ನಮ್ಮದೇ ನಾಡಿನ ರೈತರು ಸತ್ತಾಗ ಆಗುವುದಿಲ್ಲವಾ?

ರಾಮ , ಮೊಹಮ್ಮದ್ , ಯೇಸು, ಬುದ್ಧ, ಬಸವಣ್ಣ  – ಇವರೆಲ್ಲ ಹುಟ್ಟುವ ಮೊದಲೂ ಮನುಷ್ಯರು ಬದುಕಿದ್ದರು, ಸುಖ-ದುಃಖ ಎರಡೂ ಅವರ ಮು೦ಚೆಯೂ ಇತ್ತು,ನ೦ತರವೂ ಇದೆ. ಅವರೆಲ್ಲರ ಮಾರ್ಗ್ದರ್ಶನ ನಮ್ಮ ಬದುಕು ಮತ್ತಷ್ಟು ಸು೦ದರವಾಗಲು ಪ್ರಯೋಜನಕ್ಕೆ ಬರಬಹುದೇ ಹೊರತು ಅವರ ಹೆಸರಲ್ಲಿ ಮಾಡುವ ಹಿ೦ಸೆ ಅವರಿಗೆ ನಾವು ತೋರುವ ಅಗೌರವದ ಪ್ರತೀಕವಾಗುತ್ತದಷ್ಟೇ.

ಧರ್ಮ ಮನೆಯ ಅದರಲ್ಲೂ ವ್ಯಕ್ತಿಯ ಚೌಕಟ್ಟಿನಲ್ಲಿರಬೇಕೇ ಹೊರತು ಹಾದಿಬೀದಿಯಲ್ಲಲ್ಲ.

Posted in ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »