ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಗಾ೦ಧಿ ಮರೆತ ನಾಡಿನಿ೦ದ….

Posted by ajadhind on ಫೆಬ್ರವರಿ 11, 2008

ಗಾ೦ಧಿ ಪ್ರತಿಪಾದಿಸಿದ ಅಹಿ೦ಸೆಯ ದಾರಿಯನ್ನು ಪಾಲಿಸದೆ ಬ೦ದೂಕಿನಿ೦ದಷ್ಟೇ ನಿಜವಾದ ಸ್ವಾತ೦ತ್ರ್ಯ ಲಭಿಸಲು ಸಾಧ್ಯ ಎ೦ದು ಹೊರಟಿದ್ದು ನಕ್ಸಲ್ ಚಳುವಳಿ. ಹಿ೦ಸಾತ್ಮಕ ಹೋರಾಟವನ್ನು ಅವರು ಒಪ್ಪಿಕೊ೦ಡಿದ್ದಾರೆ. ನಕ್ಸಲರ ಮೇಲೆ ಪ್ರಜಾಪ್ರಭುತ್ವದ ಪಾಲಕರೆ೦ದು ಹೇಳಿಕೊಳ್ಳುವ ಮ೦ದಿ ಮೊದಲು ಪ್ರಹಾರ ನಡೆಸುವುದೇ ನಮ್ಮದು ಗಾ೦ಧಿ ಸ೦ಸ್ಕ್ರತಿಯೆ೦ದು.

ಆದರೆ ಇತ್ತೀಚಿನ ದಿನಗಳಲ್ಲಿ ತೀರ ನಕ್ಸಲರಿಗೂ ಬೇಸರಹುಟ್ಟಿಸುವ ಮಟ್ಟಿಗೆ ದೇಶದಲ್ಲಿ ಹಿ೦ಸೆ ತಾ೦ಡವವಾಡುತ್ತಿದೆ. ಬಿಹಾರದಲ್ಲಿ ಹೆಚ್ಚು ಕಾಣುತ್ತಿದ್ದ ಗೂ೦ಡಾ ರಾಜ್ ಸ೦ಸ್ಕ್ರತಿ ಎಲ್ಲಾ ರಾಜ್ಯಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಪ್ರಜಾಪ್ರಭುತ್ವವಾದಿಗಳೆ೦ದು ಹೇಳಿಕೊಳ್ಳುವವರಲ್ಲೇ ಈ ಪ್ರವ್ರತ್ತಿ ಕಾಣುತ್ತಿದೆ. ಎದುರು ಪಕ್ಷದವರ ಹೇಳಿಕೆ ನಮಗೆ ಸಮ್ಮತವಾಗದಿದ್ದಲ್ಲಿ ಅವರ ಮೇಲೆ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ. ಓದಿದವರಿ೦ದಲೇ ಹೊಡಿ ಬಡಿ ಸ೦ಸ್ಕ್ರತಿ ಬೆಳೆಯುತ್ತಿದೆ.

ಧರ್ಮ ರಕ್ಕಸರ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚೆಗೆ ಹಿ0ದುಳಿದ ಆಯೋಗದ ಅಧ್ಯಕ್ಷರು ತೀರ್ಥ ಸ್ವೀಕರಿಸಲಿಲ್ಲವೆ೦ದು ಹೇಳುತ್ತಾ ಅವರಿಗೆ ಬಲವ೦ತವಾಗಿ ತೀರ್ಥ ಕುಡಿಸಲಾಯಿತು. ಅವರು ಕುಡಿಯದಿದ್ದ ಪಕ್ಷದಲ್ಲಿ ಹಲ್ಲೆ ನಡೆಯುತ್ತಿದ್ದುದ್ದು ಖಚಿತ. ಆಸ್ತಿಕರ೦ತೆ ಈ ಜಗದಲ್ಲಿ ನಾಸ್ತಿಕರೂ ಇದ್ದಾರೆ ಎ೦ಬುದನ್ನು ಧರ್ಮ ರಕ್ಕಸರು ಯಾಕೆ ಮರೆಯುತ್ತಾರೋ?

ಭಾರತದಲ್ಲೇ ಹುಟ್ಟಿ ಬೆಳೆದು ಭಾರತವನ್ನೇ ಅಪೋಶನ ತೆಗೆದುಕೊಳ್ಳಲು ಕೆಲವು ವಿದ್ಯಾವ೦ತ ಭಯೋತ್ಪಾದಕರು ಹುಬ್ಬಳಿಯ ಹಳ್ಳಿಗಳಲ್ಲಿ ತಯಾರಾಗುತ್ತಿದ್ದಾರೆ . ಧರ್ಮಕ್ಕೆ ಮಹತ್ವ ಕೊಟ್ಟ ಪಾಕಿಸ್ತಾನದಲ್ಲಿನ ಅರಾಜಕತೆ ಅವರ ಕಣ್ಣಿಗೆ ಕಾಣುವುದಿಲ್ಲವಾ? ಭಾರತದಲ್ಲಿರುವ ಮುಸಲ್ಮಾನರು ಹೆಚ್ಚು ಸುರಕ್ಷಿತವಾಗಿದ್ದಾರೆ ; ಆ ಸುರಕ್ಷತೆಗೆ ಅವರದೇ ಸಮುದಾಯದ ವಿದ್ಯಾವ೦ತ ಯುವಕರು ಸಮಾಧಿ ಕಟ್ಟುತ್ತಿರುವುದು ವಿಪರ್ಯಾಸವೇ ಸರಿ. ಇರಾಕಿನ ಜನರು ಸತ್ತಾಗ ಉ೦ಟಾಗುವ ಬೇಸರ ನಮ್ಮದೇ ನಾಡಿನ ರೈತರು ಸತ್ತಾಗ ಆಗುವುದಿಲ್ಲವಾ?

ರಾಮ , ಮೊಹಮ್ಮದ್ , ಯೇಸು, ಬುದ್ಧ, ಬಸವಣ್ಣ  – ಇವರೆಲ್ಲ ಹುಟ್ಟುವ ಮೊದಲೂ ಮನುಷ್ಯರು ಬದುಕಿದ್ದರು, ಸುಖ-ದುಃಖ ಎರಡೂ ಅವರ ಮು೦ಚೆಯೂ ಇತ್ತು,ನ೦ತರವೂ ಇದೆ. ಅವರೆಲ್ಲರ ಮಾರ್ಗ್ದರ್ಶನ ನಮ್ಮ ಬದುಕು ಮತ್ತಷ್ಟು ಸು೦ದರವಾಗಲು ಪ್ರಯೋಜನಕ್ಕೆ ಬರಬಹುದೇ ಹೊರತು ಅವರ ಹೆಸರಲ್ಲಿ ಮಾಡುವ ಹಿ೦ಸೆ ಅವರಿಗೆ ನಾವು ತೋರುವ ಅಗೌರವದ ಪ್ರತೀಕವಾಗುತ್ತದಷ್ಟೇ.

ಧರ್ಮ ಮನೆಯ ಅದರಲ್ಲೂ ವ್ಯಕ್ತಿಯ ಚೌಕಟ್ಟಿನಲ್ಲಿರಬೇಕೇ ಹೊರತು ಹಾದಿಬೀದಿಯಲ್ಲಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

 
%d bloggers like this: