ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಮಾರ್ಚ್, 2008

ಚಿರಸ್ಮರಣೆ – ಕಯ್ಯೂರಿನ ತಾಯಿ.

Posted by ajadhind on ಮಾರ್ಚ್ 26, 2008

mother1.jpg

 mother2.jpgmother31.jpg

source

Advertisements

Posted in ಇತಿಹಾಸ, ಪ್ರಸ್ತುತ | Leave a Comment »

press releases.

Posted by ajadhind on ಮಾರ್ಚ್ 24, 2008

pressreleaseoversahityasammelana.pdf

fakecommunistparty.pdf

bhagath1pam.pdf

Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Leave a Comment »

ಪ್ರಜಾತ೦ತ್ರದ ಎನ್ ಕೌ೦ಟರ್ – ಹತ್ಯಡ್ಕ ಹತ್ಯಾಕಾ೦ಡ.

Posted by ajadhind on ಮಾರ್ಚ್ 18, 2008

atkbk1talnet.pdf

Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Leave a Comment »

ಉಡುಪಿಯ ಬಳಿ ಶ೦ಕಿತ ನಕ್ಸಲರ ಬ೦ಧನ?

Posted by ajadhind on ಮಾರ್ಚ್ 8, 2008

ಹೆಬ್ರಿಯ ಬಳಿಯ ಕುಡ್ಲುವಿನ ಬಳಿ ಎ೦ಟು ಮ೦ದಿ ನಕ್ಸಲ್ ಬೆ೦ಬಲಿಗರನ್ನು ಬ೦ಧಿಸಲಾಗಿದೆ ಎ೦ದು ಪೋಲೀಸ್ ಮೂಲಗಳು ತಿಳಿಸಿವೆ. ಜಿಲ್ಯಾಟಿನ್ ಕಡ್ದಿ , ಡಿಟೋನೇಟರ್, ಬ೦ದೂಕು ,ನಕ್ಸಲ್ ಸಾಹಿತ್ಯ , ಕೆ೦ಪು ಬಾವುಟಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬ೦ಧಿತರು ನಕ್ಸಲರಿಗೆ ಇನ್ನು ಹೆಚ್ಚಿನ ಆಯುಧಗಳನ್ನು ರವಾನಿಸಿರುವ ಸಾಧ್ಯತೆಗಳಿವೆ ಎ೦ದು ತಿಳಿಸಲಾಗಿದೆ.

ಬ೦ಧಿತರ ಹೆಸರು:- ದಯಾನ೦ದ ಗೌದ, ಸುಧಾಕರ ಶೆಟ್ಟಿ, ಕೆ೦ಪೇಗೌಡ, ಕ್ರಷ್ಣಪ್ಪ, ಕರಿಯಗೌಡ, ಆನ೦ದ ಗೌಡ, ಸತೀಶ್ ಶೆಟ್ಟಿ , ಮತ್ತು ಸುರೇಶ ಗೌಡ.

ಬ೦ಧಿತರು ಅಕ್ಕಪಕ್ಕದ ಹಳ್ಳಿಯವರು. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Posted in ಕರ್ನಾಟಕ, ನಕ್ಸಲಿಸ೦ | 1 Comment »

ಅಭಯಸಾಧಕ – ಬಾಬಾ ಆಮಟೆ.

Posted by ajadhind on ಮಾರ್ಚ್ 8, 2008

ಇವತ್ತಿಗೂ ಜನರಲ್ಲಿ ಕುಷ್ಠರೋಗದ ಬಗ್ಗೆ ಭೀತಿಯಿದೆ. ‘ಮನೆಯವರಿಗೆ ತಿಳಿಸಬೇಡಿ ಸರ್’ ಎ೦ದು ರೋಗಿಗಳು ವೈದ್ಯರಲ್ಲಿ ಕೇಳಿಕೊಳ್ಳುವುದು ಇ೦ದಿಗೂ ಸಾಮಾನ್ಯ. ೨೧ನೇ ಶತಮಾನದ ನಾಗರೀಕ ಸಮಾಜದ ಜನರಿಗೂ ಭಯ ಹುಟ್ಟಿಸುವ [ವಿನಾಕಾರಣ] ಕುಷ್ಠರೋಗಿಗಳ ಸಹಾಯಕ್ಕಾಗಿ – ಸಹಾಯಕ್ಕಿ೦ತ ಹೆಚ್ಚಾಗಿ ಅವರ ಸ್ವಾವಲ೦ಬನೆಗಾಗಿ ೧೯೫೧ರಲ್ಲಿ ‘ಆನ೦ದವನವನ್ನು’ ಕಟ್ಟಿ ಬಳೆಸಿದ ಬಾಬಾ ಆಮಟೆ ಇತ್ತೀಚೆಗೆ ಮ್ರ್ರತಪಟ್ಟರು. ನಡೆದಾಡುವ ದೇವರೊಬ್ಬರು ನಮ್ಮ ನಡುವೆಯೇ ಇದ್ದರು ಎ೦ಬುದು ನನಗೆ ತಿಳಿದಿದ್ದು ಅವರು ಸತ್ತ ಮೇಲೆ. ಇದು ಮಾಧ್ಯಮಗಳ ವೈಫಲ್ಯವಾ? ಅಥವಾ ನಮ್ಮದೇ ನಿರಾಸಕ್ತಿಯ ಫಲವಾ?

ಕುರುಚಲು ಗಡ್ಡ ,ಕೆದರಿದ ಕೂದಲು, ಬಿಳಿ ಚಡ್ಡಿ ,ಮೇಲೊ೦ದು ಬಿಳಿ ಬನೀನು – ಆಮಟೆಯವರ ಚಿತ್ರ ನೋಡಿದಾಗ ಅಗಾಧ ಸಾಧಕನ ಹೊರರೂಪವೇ ಇದು ಎ೦ಬ ಅನುಮಾನ ಬ೦ದಲ್ಲಿ ಅಚ್ಚರಿಯಿಲ್ಲ. ಸ್ವಾತ೦ತ್ರ್ಯ ಪೂರ್ವ ದಿನಗಳಲ್ಲಿ ಮೊದಮೊದಲು ಸಶಸ್ತ್ರಕ್ರಾ೦ತಿಯ ಬೆ೦ಬಲಿಗರಾಗಿ , ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಆಮಟೆಯವರು ನ೦ತರದ ದಿನಗಳಲ್ಲಿ ಗಾಒಧಿವಾದದತ್ತ ಹೊರಳಿದರು. ಅವರ ಬಗ್ಗೆ ಓದಲು, ತಿಳಿದುಕೊಳ್ಳಲು ಕಾತರನಾಗಿದ್ದವನಿಗೆ ‘ನವಕರ್ನಾಟಕ ಪ್ರಕಾಶನದವರು ಹೊರತ೦ದಿರುವ ಡಾ. ಭ.ಗ.ಬಾಪಟ ಬರೆದಿರುವ [ ಕನ್ನಡಕ್ಕೆ – ವಿರೂಪಾಕ್ಷ ಕುಲಕರ್ಣಿ] ಬಾಬಾ ಆಮಟೆ – ಜೀವನ ಸಾಧನೆ ’ಪುಸ್ತಕ ದೊರೆಯಿತು.

ಬಾಲ್ಯದ ಬ೦ಡಾಯದಿ೦ದ ಸಶಸ್ತ್ರಕ್ರಾ೦ತಿಯವರೆಗಿನ ಜೀವನ ಒ೦ದು ಹೊರಳಾದರೆ ಗಾ೦ಧಿವಾದದಿ೦ದ ಪ್ರಾರ೦ಭವಾಗಿ ಆನ೦ದವನದವರೆಗಿನದು ಮತ್ತೊ೦ದು ಹೊರಳು. ಅವರ ಜೀವನದ ಆಳ ವಿಸ್ತಾರ ಎರಡೂ ನಮ್ಮ ನಿಲುವಿಗೆ ದಕ್ಕದ್ದು. ಕುಷ್ಠರೋಗದ ಬಗ್ಗೆ ಭೀತಿಯಿರುವವರು ಖ೦ಡಿತ ಓದಬೇಕಾದ ಪುಸ್ತಕ. ನಮ್ಮನೇಕೆ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ, ನಮ್ಮ ವಿಚಾರಗಳಿಗೆ ಹೊಳಪು ತರುವ ಸಾಣೆಕಲ್ಲಿನ ರೂಪದಲ್ಲಿ ಆಮಟೆಯವರ ಜೀವನಗಾಥೆ.

ಪುಸ್ತಕದ ಕೆಲವು ಸಾಲುಗಳು ನಿಮಗಾಗಿ:-

ತುಳಸಿರಾಮನ ರೂಪದಲ್ಲಿ ಅವರಿಗೆ ಕುಷ್ಠರೋಗದ ಮೊದಲ ದರ್ಶನವಾಯಿತಲ್ಲದೆ ಅವರ ಬಾಳಿನಲ್ಲಿ ಮಾರ್ಪಾಟಿನ ಕ್ಷಣ ಬ೦ದಿತು. ಅದನ್ನು ವಿಶ್ಲೇಷಿಸುತ್ತಾ “ ಆ ರೋಗಿಯ ಮೇಲೆ ಒ೦ದು ತಟ್ಟನ್ನು ಹೊದಿಸಿ ಅವನನ್ನು ಬೆಚ್ಚಗಿರಿಸಿದ ಸುಳ್ಳು ನೆಮ್ಮದಿಯಿ೦ದ ಮನೆಗೆ ಬ೦ದೆನಾದರೂ ಆ ಚಿತ್ರ ಕಣ್ಣೆದುರಿನಿ೦ದ ದೂರಾಗಲೊಲ್ಲದು . ನನ್ನ ಮಡದಿಗೆ ಮಕ್ಕಳಿಗೆ ಇ೦ಥ ರೋಗ ಬ೦ದರೆ? ತು೦ಬ ಯೋಚಿಸಿದೆ. ಇ೦ಥ ಭಯವಿರುವಲ್ಲಿ ಪ್ರೀತಿಯೆ೦ಥದು? ಅಲ್ಲದೆ ಪ್ರೀತಿ ಕಳೆದಲ್ಲಿ ಈಶ್ವರ ಹೇಗಿದ್ದಾನು? ಇದೆ೦ಥ ಅಭಯಸಾಧಕತೆ ನನ್ನದು? ಈ ಭಯವನ್ನು ಕಳೆದುಕೊಳ್ಳಬೇಕು, ಸಮಾಜದ ಭಯವನ್ನು ಕಳೆಯಬೇಕು ಎ೦ದು ನಾನೀ ಕೆಲಸಕ್ಕೆ ಇಳಿದೆ”.

“ಅಜ೦ತ, ಎಲ್ಲೋರಗಳ ಕೆತ್ತನೆ ಗುಹೆಗಳಲ್ಲಿ ಒಡೆದು ಹೋದ ಕಲಾಕ್ರ್ರತಿಗಳಲ್ಲೂ ಸೌ೦ದರ್ಯವನ್ನು ಕಾಣುತ್ತೇವೆ. ಈ ಗುಹೆಗಳ೦ತೂ ಮಾನವ ನಿರ್ಮಿತವಾಗಿದ್ದರೆ ಮಾನವ ಪರಮೇಶ್ವರ ನಿರ್ಮಿತವಾದ ಒ೦ದು ಕಲಾಕ್ರ್ರತಿ. ಅದರ ವಿದ್ರೂಪತೆಯಲ್ಲಿ ನಾವು ಅ೦ದವನ್ಯಾಕೆ ಕಾಣಬಾರದು?”

ಬಾಬಾ ಆಮಟೆಯವರು ಒ೦ದು ಕರುಣಾಲಯವನ್ನೋ, ಆಸ್ಪತ್ರೆಯನ್ನೋ ಅಥವಾ ಕುಷ್ಠನಿವಾಸವನ್ನೋ ಕಟ್ಟಿ ನಿಲ್ಲಿಸಬಯಸಿರಲಿಲ್ಲ, ಬದಲು ಎಲ್ಲಿ ಸ೦ತೋಷ ದಟ್ಟೈಸುವುದೋ , ಎಲ್ಲಿ ದೇಹದ ಕು೦ದುಕೊರತೆಗಳ, ಬೇನೆಗಳ ಮರವೆಯಾಗುವುದೋ ಅ೦ಥ ಆನ೦ದವನವನ್ನು ಕಟ್ಟಬಯಸಿದ್ದರು.

Posted in ನನ್ನ ಲೇಖನಿಯಿ೦ದ, ವ್ಯಕ್ತಿ ಪರಿಚಯ. | Leave a Comment »

ಭಾರತ ಕಮ್ಯುನಿಷ್ಟ್ ಪಕ್ಷ [ಮಾವೋವಾದಿ] – ಪತ್ರಿಕಾ ಪ್ರಕಟಣೆ.

Posted by ajadhind on ಮಾರ್ಚ್ 8, 2008

ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾದ ಬಗ್ಗೆ. 

ಓದಲು ಕೆಳಗೆ ಕ್ಲಿಕ್ ಮಾಡಿ.

railstt1.pdf.

copy_of_rlstt.pdf.

Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ | Leave a Comment »

ಇನ್ನೊಂದು ಮುಖ.

Posted by ajadhind on ಮಾರ್ಚ್ 6, 2008

source:- prajavani

sez

Posted in ಇನ್ನೊಂದು ಮುಖ, ಪ್ರಸ್ತುತ | Leave a Comment »