ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಜೂನ್, 2008

ಮೌಲ್ಯ ಮರೆತ ಮಾಧ್ಯಮ.

Posted by ajadhind on ಜೂನ್ 28, 2008

ಶಾಲಾ ಹುಡುಗಿಯ ಕೊಲೆಯಾಗುವುದು ಯಾರಿಗೂ ಸಂತೋಷ ತರುವ ವಿಚಾರವಲ್ಲ. ಆದರೆ ದೃಶ್ಯಮಾಧ್ಯಮಗಳು ಅದರಲ್ಲೂ ತಮ್ಮನ್ನು ತಾವೇ ಭಾರತ ದೇಶದ ಮಾಧ್ಯಮಗಳೆಂದು ಕರೆದುಕೊಳ್ಳುವ ಆಂಗ್ಲ ಮಾಧ್ಯಮಗಳು ಶಾಲಾ ಹುಡುಗಿಯ ಕೊಲೆಯ ಬಗ್ಗೆ ನಡೆಸಿದ ಕಾರ್ಯಕ್ರಮಗಳು ರೇಜಿಗೆ ಹಾಗಿದ್ದವು. “ಸಂಕ್ಷಿಪ್ತ ಸುದ್ದಿಯ ” ಹೆಸರಿನಲ್ಲಿ ಬರಬೇಕಾಗಿದ್ದ ಸುದ್ದಿ ಬಹುತೇಕ ಎಲ್ಲಾ ಮಾಧ್ಯಮಗಳ ಮುಖ್ಯಾಂಶದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿತು . ಅದರ ಬೆನ್ನಿಗೇ ತಾವು ಮಾಡಿದ್ದು ಸರಿಯಾ? ಎಂಬ ಪ್ರಶ್ನೆಯನ್ನು ತಮಗೇ ಕೇಳಿಕೊಂಡು ನಾವು ಅಷ್ಟು ಆಸಕ್ತಿ ವಹಿಸದೇ ಇದ್ದ ಪಕ್ಷದಲ್ಲಿ ಅಪರಾಧಿಗಳ ಪತ್ತೆಯೇ ಕಷ್ಟವಾಗುತ್ತಿತ್ತು ಎಂದು ಹೇಳಿ ಕೈತೊಳೆದುಕೊಂಡರು .
ಅವರ ಮಾತನ್ನೇ ಒಪ್ಪುವುದಾದರೆ ಅವರಿಂದಲೇ ಈ ಕೊಲೆ ಪ್ರಕರಣ ಇತ್ಯರ್ಥವಾಯಿತು[?], ಸಂತೋಷ .ಆದರೆ ಈ ಕೊಲೆ ನಡೆದ ಸಮಯದ ಆಜುಬಾಜಿನಲ್ಲೇ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ನಡೆದು ಇನ್ನೂರಕ್ಕೂ ಅಧಿಕ ಮಂದಿ ಮೃತಪಟ್ಟರು. ಇದು ಒಂದು ರೀತಿ ಪ್ರಾಯೋಜಿತ ಕೊಲೆಯೇ . ಅಪರಾಧಿಗಳನ್ನು ಹಿಡಿಯುವಲ್ಲಿ ಸಹಾಯ ಮಾಡುವುದಿರಲಿ ಅವರಿಗೆ ಇದು ಪ್ರಮುಖ ಸುದ್ದಿಯೂ ಆಗಲಿಲ್ಲ. ಪುಂಖಾನುಪುಂಖವಾಗಿ ಸುದ್ದಿ ಪ್ರಸಾರ ಮಾಡಿ ಸರಕಾರದ ಮೇಲೆ ಒತ್ತಡ ಹೇರಲಿಲ್ಲ. ಸತ್ತ ಇನ್ನೂರು ಜನ ವೈದ್ಯರ ಮಕ್ಕಳಾಗಿರಲಿಲ್ಲ , ಅವರದು highprofile ಬದುಕಲ್ಲ ಎಂಬ ಕಾರಣವಾ? ಇನ್ನೂರು ಜನರ ಬದುಕು ಒಬ್ಬ ಶಾಲಾ ಹುಡುಗಿಯ ಬದುಕಿಗಿಂತ ಕಡೆಯಾಗಿ ಹೋಯಿತಾ? ಅವರ ಮಾತನ್ನೇ ನಂಬುವುದಾದರೆ ಕಳ್ಳಭಟ್ಟಿ ದುರಂತದ ಬಗ್ಗೆ ಅವರು ತನಿಖೆ ನಡೆಸಿದ್ದರೆ ಇನ್ನಷ್ಟು ಅಪರಾಧಿಗಳು ಸಿಕ್ಕಿಬಿಳುತ್ತಿದ್ದರೇನೋ?
ಸತ್ತವರು ಅಥವಾ ಸಾಯಿಸಿದವರು highprofile ಸಮಾಜದಿಂದ ಬಂದವರಾಗಿದ್ದಾರೆ ಮಾತ್ರ ಅವರ ವಾಹಿನಿಗಳಲ್ಲಿ ಸ್ಥಾನ. ಈ ವಿಷಯದಲ್ಲಿ ಸ್ಥಳಿಯ ಭಾಷಾ ಪತ್ರಿಕೆಗಳೇ ಮೇಲು. ಪತ್ರಿಕೆಗಳಲ್ಲಿ ಇನ್ನೂ ದೇಶದ ಸಮಸ್ಯೆಗಳೇ ಮುಖ್ಯ ಸ್ಥಾನ ಪಡೆದುಕೊಂಡಿವೆ. ಅವು ಬದಲಾಗದಿರಲೆಂದು ಆಶಿಸೋಣ.

Advertisements

Posted in ನನ್ನ ಲೇಖನಿಯಿ೦ದ, ಪ್ರಸ್ತುತ | 1 Comment »

ಮಿಯಾಮಿ ಅಕ್ಕಿ ಮತ್ತು ಕ್ಯಾಪಿಟಲಿಸಂನ ಕರಾಳ ಮುಖ.

Posted by ajadhind on ಜೂನ್ 25, 2008

ಮೂವತ್ತು ವರ್ಷದ ಹಿಂದೆ ಹೈಟಿ ಎಂಬ ದೇಶದ ಜನ ಆಹಾರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರು. ಈಗ ಅದೇ ದೇಶದಲ್ಲಿ ಗಗನಕ್ಕೇರಿದ ಬೆಲೆಗಳ ನಡುವೆ ಜೀವಿಸಲಾಗದೆ ಜನ ಆಹಾರಕ್ಕಾಗಿ ದಂಗೆಯೆದ್ದಿದ್ದಾರೆ.
ಕಳೆದ ವರ್ಷ ಗೋಧಿಯ ಬೆಲೆಯಲ್ಲಿ ೭೭% , ಅಕ್ಕಿಯಲ್ಲಿ ೧೬% ಏರಿಕೆಯಾಗಿತ್ತು.ಈ ಜನವರಿಯಿಂದೀಚೆಗೆ ಅಕ್ಕಿಯ ಬೆಲೆಯಲ್ಲಿ ಶೇ ೧೪೧% ಹೆಚ್ಚಳವಾಗಿದೆ. ಹೆಚ್ಚುತ್ತಿರುವ ತೈಲ ಬೆಳೆ , ಜೈವಿಕ ಇಂಧನಕ್ಕಾಗಿ ಭೂಮಿಯ ಬಳಕೆ ಇದಕ್ಕೆ ಕಾರಣ. ಇದೆಲ್ಲಕ್ಕಿಂತ ಮುಖ್ಯ ಕಾರಣವೊಂದಿದೆ,ಅದು ಅಮೇರಿಕಾ ದೇಶದ ಕ್ಯಾಪಿಟಲಿಸಂನ ಮತ್ತೊಂದು ಮುಖ!!.
ಹೈಟಿ ಎಂಬ ಪುಟ್ಟ ದೇಶ ಅಮೆರಿಕಾದಿಂದ ಅಕ್ಕಿ ಪಡೆಯುವ ದೇಶಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. ಆಹಾರದಲ್ಲಿ ಸ್ವಾವಲಂಬಿಗಲಾಗಿದ್ದ ಹೈಟಿ ದೇಶದ ಜನರಿಗೆ ೧೯೮೬ರಲ್ಲಿ ಅಮೆರಿಕಾದಿಂದ ಅತಿ ಕಡಿಮೆ ದರದಲ್ಲಿ ಅಕ್ಕಿ ಸಿಗಲಾರಂಭಿಸಿತು. ಸಿರಿವಂತ ದೇಶವಾದ ಅಮೇರಿಕಾ ತನ್ನ ದೇಶದ ರೈತರಿಗೆ ಅತಿ ಹೆಚ್ಚಿನ ಸಬ್ಸಿಡಿ ದರ ಕೊಟ್ಟು ಅಕ್ಕಿ ಬೆಳೆಸುತ್ತಿತ್ತು. ಆ ಅಕ್ಕಿಯನ್ನು ಹೈಟಿ ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಪೂರೈಸಿತು. ಈ ಮಿಯಾಮಿ ಅಕ್ಕಿ ಹೈಟಿಯಾ ಜನರಿಗೆ ವರವಾಗಿ ಕಂಡಿತು. ಇದರ ಮೊದಲ ಹೊಡೆತ ಬಿದ್ದಿದ್ದು ಹತಿಯ ರೈತನಿಗೆ. ಮಿಯಾಮಿ ಅಕ್ಕಿಯ ದರಕ್ಕೆ ಆತ ಅಕ್ಕಿ ನೀಡಲಾರ; ಕಾರಣ ಆತನಿಗೆ ಅವನ ಸರಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ. ನಷ್ಟದ ಉದ್ಯಮ ಎಷ್ಟು ದಿನ ನಡೆದೀತು? ರೈತ ಬೆಳೆಯುವುದನ್ನು ನಿಲ್ಲಿಸಿ ನಗರಗಳ ಕಡೆಗೆ ನಡೆದ. ಅಲ್ಲಿಗೆ ಇಡೀ ಹೈತಿಯ ಅಕ್ಕಿ ಮಾರುಕಟ್ಟೆ ಅಮೆರಿಕಾದ ಪಾಲಾಯಿತು. ೨೦೦೮ ರಲ್ಲಿ ಅಮೆರಿಕಾದಿಂದ ಹೈತಿಗೆ ರಫ್ತಾದ ಅಕ್ಕಿಯ ಪ್ರಮಾಣ ೨,೪೦,೦೦೦ ಮೆಟ್ರಿಕ್ ಟನ್ ಯಾವಾಗ ರೈತ ಇನ್ನು ಅಕ್ಕಿ ಬೆಳೆಯಲಾರ ಎಂಬುದು ಖಾತ್ರಿಯಾಯಿತೋ ಮಿಯಾಮಿ ಅಕ್ಕಿಯ ಬೆಲೆ ಏರಲಾರಂಭಿಸಿತು. ೧೯೮೬ ರಿಂದ ಇಲ್ಲಿಯವರೆಗೆ ಒಂದು ತಲೆಮಾರೇ ಬದಲಾಗಿದೆ. ಈಗ ಅಕ್ಕಿ ಬೆಳೆಯಬೇಕೆಂದರೂ ಅಲ್ಲಿನ ರೈತನಿಗದು ಅಸಾಧ್ಯ.
ಹೈಟಿಯಂಥಹ ಪುಟ್ಟ ದೇಶದ ಮಾರುಕಟ್ಟೆಯನ್ನು ಕಬಳಿಸಿರುವ ಅಮೆರಿಕಾದ ಸ್ನೇಹ ಬಯಸುತ್ತಿರುವ ಭಾರತ ಸರಕಾರದಿಂದ ಭಾರತದ ಜನರ ಏಳಿಗೆ ಸಾಧ್ಯವೇ?

Posted in ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »

ಚುನಾವಣೆ ಪ್ರಹಸನ

Posted by ajadhind on ಜೂನ್ 7, 2008

election

Posted in ಪತ್ರಿಕಾ ಪ್ರಕಟಣೆ, ಪ್ರಸ್ತುತ | 2 Comments »