ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಹತ್ಯೆಗಳ ಬಗ್ಗೆ?

Posted by ajadhind on ಮೇ 2, 2010

ಅಧ್ಯಾಯ 3
ನನ್ನ ಸಹಚರರರಿಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದೆ. ಪಕ್ಷ ಜನರನ್ನು ಕೊಂದು ಮನೆಗಳನ್ನು ಸುಡುತ್ತದೆ ಎಂದು ಹೇಳುತ್ತಾರೆಂದು ತಿಳಿಸಿದೆ. ‘ಮಾಹಿತಿದಾರನೆಂಬ’ ಚಿಕ್ಕ ಕಾರಣಕ್ಕೂ ಹತ್ಯೆ ಮಾಡಲಾಗುತ್ತದೆ. ಒಗ್ಗಟ್ಟಿನಿಂದ ಸಹಚರರು ಪ್ರತಿಭಟಿಸಿದರು “ನಾವು ಕೊಲೆ, ಲೂಟಿ, ಅತ್ಯಾಚಾರ ಮಾಡುವುದಿಲ್ಲ” ಜನರಿಗೆ ಸಹಾಯ ಮಾಡುತ್ತೇವೆ. ಚೇತು ಹೇಳಿದ , ನಾನು ದಕ್ಷಿಣ ದಂತೆವಾಡದಿಂದ ಬಂದಿದ್ದೇನೆ. ಅಲ್ಲಿ ಸಲ್ವಾ ಜುಡುಂ ಚಿಕ್ಕ ಹುಡುಗಿಯರ ಮೇಲೂ ಅತ್ಯಾಚಾರವೆಸಗಿದ್ದಾರೆ. ಅಸಹಾಯಕ ಜನರನ್ನು ಹೊತ್ತೊಯ್ಯುತ್ತಾರೆ. ಹಳ್ಳಿಗರನ್ನು ಕೊಲ್ಲುವ ಬದಲು ನಮ್ಮೆದುರಿಗೆ ಬಂದು ನಮ್ಮೊಡನ್ಯಾಕೆ ಹೋರಾಡುವುದಿಲ್ಲ? ಸುಖಲಾಲ್ ಹೇಳಿದ, ಅವನ ತಮ್ಮನನ್ನು ಜೈಲಿಗೆ ಹಾಕಿ ‘ಗೋಲಾದಲ್ಲಿ’ ಇಟ್ಟಿದ್ದಾರೆ. ಕೈ, ಪಾದಗಳಿಗೆ ಚೈನನ್ನು ಬಿಗಿದು ತಾಸುಗಟ್ಟಲೆ ಕುಳಿತಿರುವವನ ಭಂಗಿಯಲ್ಲಿರುವ ಶಿಕ್ಷೆ. ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಟನೆಯಲ್ಲಿ ಇದ್ದನೆಂಬುದೇ ಅವನ ಮೇಲಿನ ಅಪರಾಧ. ಇದರರ್ಥ ನೀವು ಹತ್ಯೆಗೈಯುವುದೇ ಇಲ್ಲವಾ? ಇಲ್ಲ ನಾವು ಹೇಳಿದ್ದು ಅದನ್ನಲ್ಲ, ನಾವು ಹತ್ಯೆ ಮಾಡುವುದು ಜನರ ಶತ್ರುಗಳನ್ನು. ಆದರೆ ಈ ಜನರ ಶತ್ರುಗಳ್ಯಾರು? ಪಕ್ಷವನ್ನು ವಿರೋಧಿಸುವ ಪ್ರತಿಯೊಬ್ಬರೂ ಜನರ ಶತ್ರುವಾ? ‘ ಇಲ್ಲ ಅದು ಸತ್ಯವಲ್ಲ. ನಮಗೆ ನೀವು ಪಕ್ಷವನ್ನು ವಿರೋಧಿಸುತ್ತೀರಾ, ಒಪ್ಪುತ್ತೀರಾ ಅಥವಾ ಟೀಕಿಸುತ್ತೀರಾ
ಎಂಬುದು ಮುಖ್ಯವಲ್ಲ, ಆದರೆ ನೀವು ಸರಕಾರೀ ಫೌಜುಗಳ ಪರವಾಗಿ ಕೆಲಸ ಮಾಡಿದರೆ ನೀವು ಜನರ ಶತ್ರು’ ಸರಿ ಅಂತಹವರಿಗೆ ಕೊಡುವ ಶಿಕ್ಷೆ? ‘ಶತ್ರುವೆಂದು ಪರಿಗಣಿಸಲ್ಪಟ್ಟ ಪ್ರತಿಯೊಬ್ಬರನ್ನೂ ಹತ್ಯೆ ಮಾಡಲಾಗುವುದಿಲ್ಲ. ಮಾಹಿತಿದಾರರನ್ನು ಕೊಲ್ಲುವುದನ್ನು ಪಕ್ಷ ತಡೆಯುತ್ತದೆ. ಯಾರು ನಾವು ಪದೇ ಪದೇ ಎಚ್ಚರಿಕೆ ಕೊಟ್ಟ ಮೇಲೂ ತಮ್ಮ ತಪ್ಪುಗಳನ್ನು ಪುನರಾವರ್ತಿಸುತ್ತಾರೋ ಅಂತಹವರನ್ನು ಹತ್ಯೆ ಮಾಡಲಾಗುತ್ತೆ’

ಸಿ.ಪಿ.ಐ[ಮಾವೋವಾದಿ]ಯ ಕಾರ್ಯದರ್ಶಿ [ ಜನರಲ್ ಸೆಕ್ರೆಟರಿ – ಜಿ.ಎಸ್] ನನಗೆ ಮತ್ತು ಜಾನ್ ಮಿರ್ದಾಲ್ಗೆ ಕೊಟ್ಟ ಸಂದರ್ಶನವನ್ನು ನೆನಪಿಸಿಕೊಂಡೆ “…………ನಮ್ಮ ವಿಸ್ತಾರದ ಪ್ರದೇಶವೊಂದರಲ್ಲಿ ಒಂದು ಘಟನೆ ನಡೆದಿತ್ತು, ಐ.ಜಿ.ಪಿ.ಯೊಡನೆ ಸೇರಿ ಎರಡೂ ಹಳ್ಳಿಗೆ ಸೇರಿದ ಮೂವತ್ಮೂರು ಜನ ಶತ್ರುವಿನ ವಕ್ತಾರರಾಗಿದ್ದರು. ಇದರ ವಿಚಾರವಾಗಿ ನಮ್ಮ ಕಾಮ್ರೇಡ್ ಗಳು ಹಳ್ಳಿಗೆ ಭೇಟಿಯಿತ್ತರು. ಪೊಲೀಸರಿಗೆ ಮುಖ್ಯ ವಕ್ತಾರನಾಗಿದ್ದವನಿಗೆ ಮರಣದಂಡನೆ ವಿಧಿಸಬೇಕೆಂದು ಹಳ್ಳಿಗರು ಒತ್ತಾಯ ಮಾಡಿದರೂ ಪಕ್ಷ ಮಧ್ಯೆ ಪ್ರವೇಶಿಸಿ ಆತನಿಗೆ ತಪ್ಪು ತಿದ್ದುಕೊಳ್ಳಲು ಅವಕಾಶ ನೀಡಲಾಯಿತು” ಜನಾತನ ಸರಕಾರವಿರುವ ಡಿ.ಕೆ.ಯಲ್ಲಿ ಪಕ್ಷದ ಕಾರ್ಯವಿಧಾನ ಬೇರೆಯಿರಬಹುದೇ? ಅಥವಾ ಒಂದು ಅಪರೂಪದ ಘಟನೆಯನ್ನು ಅವರು ಎತ್ತಿ ತೋರಿಸುತ್ತಿದ್ದಾರಾ? ನನಗೆ ತಿಳಿದಿಲ್ಲ. ಆದರೆ ಹೆಚ್ಚು ಯೋಚಿಸಿದಷ್ಟೂ ನನಗನ್ನಿಸಿದ್ದೆಂದರೆ ಕೊಲ್ಲುವುದನ್ನೇ ವ್ರುತ್ತಿಯಾಗಿಸಿಕೊಂಡಿದ್ದರೆ ಡಿ.ಕೆ.ಯಲ್ಲಿ ಜನಾತನ ಸರಕಾರ ಇಷ್ಟು ಕಾಲ ಉಳಿದು ಬೆಳೆಯಲಾಗುತ್ತಿರಲಿಲ್ಲ.

ಸುಖಲಾಲ್ ಕೇಳಿದ” ಆ ಹೈ ಟೆನ್ಶನ್ ವೈರ್ ಗಳನ್ನೂ ನೋಡಿದಿರಾ?”
‘ಹು’ ಎಂದೇ.
“ನಿಮಗೆ ಗೊತ್ತಾ ಈ ಪ್ರದೇಶದಲ್ಲಿ ಹೋದ ವರ್ಷ ಕೆಲವರು ಆ ಟವರ್ ಗಳನ್ನೂ ಸ್ಫೋಟಿಸಿದಾಗ ಪಕ್ಷ ಸಭೆ ಕರೆದು ಆ ಕಾರ್ಯವನ್ನು ತಪ್ಪೆಂದು ಖಂಡಿಸಿತು”
‘ಪಕ್ಷ ಏನು ಹೇಳಿತು ಮತ್ತಾ ಘಟನೆ ನಡೆದಿದ್ದಾದರೂ ಯಾಕೆ?’ ನಾ ಕೇಳಿದೆ.
“ಈ ರೀತಿಯ ಕಾರ್ಯಗಳಿಂದ ನಗರದಲ್ಲಿರುವ ಬಡಜನರಿಗೆ ಹೆಚ್ಚು ತೊಂದರೆಯಾಗುತ್ತೆ; ಸಿರಿವಂತರ ಬಳಿ ಜೆನರೇಟರ್ ಗಳಿರುತ್ತೆ”
‘ಜನರ ಸೈನ್ಯ ಏನು ಹೇಳಿತು?’
ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಾ ‘ ನಮಗೆ ಅನ್ನಿಸಿದಂತೆ ಈ ಕಾರ್ಯದಿಂದ ರಿಪೇರಿ ತನ್ಡದೊಡನೆ ಪೊಲೀಸರು ಬಂದಾಗ ಅವರ ಮೇಲೆರಗಬಹುದಿತ್ತು’ ಎಂದರು”
‘ಜನರ ಸೈನ್ಯ ಸ್ವಂತವಾಗಿ ಆ ರೀತಿಯ ಯೋಜನೆ ಹಾಕಿಕೊಳ್ಳಬಹುದಾ?’
ಇಲ್ಲ ದೊಡ್ಡ ದಾಳಿಗಳ ಬಗ್ಗೆ plga ಗೆ ಮಾಹಿತಿ ನೀಡಬೇಕು”

ಪಕ್ಷ ambush ಗಳನ್ನು ತಡೆಯುತ್ತದಾ? ಮತ್ತೆ ಪದೇ ಪದೇ ಕೇಳಿಬರುವ ಹತ್ಯಾ ಯತ್ನಗಳು, ಲ್ಯಾಂಡ್ ಮೈನ್ ಸ್ಪೋಟ? ಈ ಪ್ರಶ್ನೆಯನ್ನು plga ಕಮ್ಯಾಂಡರ್ ರಾಮುವಿಗೆ ಕೇಳಿದೆ.

ರಾಮು ಹೇಳಿದ ” ambush ಗಳನ್ನು ನಡೆಸುತ್ತೇವೆ. ಆದರದು ಎಚ್ಚರಿಕೆಯಿನ ಯೋಜಿಸಿದ ನಂತರ. ಅದು ಸಾಕಷ್ಟು ಸಮಯವನ್ನೂ ಬೇಡುತ್ತೆ, ನಾವು ಶ್ತ್ರುಗಿಂತ ದುರ್ಬಲವಾಗಿರುವುದರಿಂದ ನಮಗೆ ಬೇಕೆಂದಾಗ ಎರಗಲು ಸಾಧ್ಯವಿಲ್ಲ. ನಮ್ಮಲ್ಲಿ ಸಿಧ್ಧತೆಗಳಿಲ್ಲದಿದ್ದರೆ ಶತ್ರುವಿನ ಜೊತೆಗಿನ ಕಾಳಗವನ್ನು ತಡೆಯುತ್ತೇವೆ. ಜೊತೆಗೆ ಯಾವ ದಾಳಿಯಿಂದ ನಮಗೆ ಹೆಚ್ಚು ಶಸ್ತ್ರ ಸಿಗುತ್ತದೋ ಅಂಥವುಗಳ ಕಡೆಗೆ ಹೆಚ್ಚು ಗಮನವಿಯುತ್ತೇವೆ. ರಾಯಪುರದಲ್ಲಿ ಮಾತನಾಡುತ್ತಾ ಪಿ.ಚಿದಂಬರಂ ನಾವು ಸೈನ್ಯಕ್ಕೆ ಸೇರಿದರೆಂಬ ಕಾರಣಕ್ಕೆ ಇಬ್ಬರನ್ನು ಕೊಂಡಿದ್ದೆವೆಂದು ತಿಳಿಸಿದ. ಅದಕ್ಕೂ ನಮಗೂ ಸಂಬಂದವಿಲ್ಲ. ಅಂಥದೊಂದು ಘಟನೆ ನಡೆದಿದೆಯಾ ಎಂಬುದೇ ನಮಗೆ ಅನುಮಾನ”
ಅದರರ್ಥ?

ಮುಂದುವರೆಯುವುದು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: