ಇದು ಸೋಲಾ ಅಥವಾ ಗೆಲುವಾ?
Posted by ajadhind on ಜುಲೈ 26, 2010
ಅಜಯ್ ಗುಲ್ಬರ್ಗ. ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
ಅನುವಾದ-ಆಜಾದ್ ಹಿಂದ್.
ಹೊನ್ನಕಿರಣಗಿ, ನದಿಸಿನ್ನುರ ಮತ್ತು ಫಿರೋಜಾಬಾದ್ನಲ್ಲಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ಭೂಮಿ ವಶಪಡಿಸಿಕೊಳ್ಳಲು ಸರಕಾರ ಯಶಸ್ವಿಯಾಗಿದೆ. ತಿಂಗಳುಗಟ್ಟಲೆ ಹೋರಾಟ ಮಾಡಿದ ರೈತರು ಬುಮಿ ಕೊಡಲು ಒಪ್ಪಿದ್ದಾರೆ. ಇದೇ ಜುಲೈ ೨೩ ರಂದು ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ರೈತರಿಗೆ ಎಕರೆಗೆ ೯ ಲಕ್ಷ ರುಪಾಯಿ ನೀಡಲಾಗುತ್ತಿದೆ. ಸಾಂಕೇತಿಕವಾಗಿ ಅಂದು ಮೂವರಿಗೆ ಪರಿಹಾರ ವಿತರಿಸಲಾಯಿತು. ಅವರಲ್ಲೊಬ್ಬರಿಗೆ ೧ ಕೋಟಿ ರುಪಾಯಿಯನ್ನು ವಿತರಿಸಲಾಯಿತು.
ಪರಿಹಾರದ ಮೊತ್ತದಲ್ಲಿ ಹೆಚ್ಚಳ, ಪೌರಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಎಸ.ಕೆ.ಕಾಂತರ ಬಂಧನ, ಸರಕಾರದ ಬೆದರಿಕೆ – ಇವೆಲ್ಲಾ ಪ್ರತಿಭಟನೆ ಹಿಂತೆಗುದುಕೊಳ್ಳಲು ಕಾರಣವಾಯಿತು.
ಸಭೆಯಲ್ಲಿ ರೈತರು ತಮಗೆ ಸಿಕ್ಕುವ ಪರಿಹಾರದ ಬಗ್ಗೆ, ತಮ್ಮ ಮಕ್ಕಳಿಗೆ ಸಿಗಬಹುದಾದ ಕೆಲಸದ ಬಗ್ಗೆ ತಿಳಿಯಲು ಹೆಚ್ಚು ಉತ್ಸಾಹಿತರಾಗಿದ್ದರು. ಪರಿಸರದ ಪರಿಣಾಮಗಳ ಬಗ್ಗೆ ಚರ್ಚೆ ಹೆಚ್ಚಾಗಿ ಆಗಲಿಲ್ಲ.
ಕೊನೆಗೆ ಈ ಹೋರಾಟದಲ್ಲಿ ಗೆದ್ದಿದ್ದ್ಯಾರು, ಸೋತಿದ್ದ್ಯಾರು? ಸರಕಾರ? ರೈತರು? ಹೋರಾಟಗಾರರು? ಹಸಿದ ಜನ? ದೇಶದ ಪ್ರಗತಿಗೆ ವಿದ್ಯುತ್ ಅತ್ಯವಷ್ಯವಾಗಿ ಬೇಕು ಎಂಬ ಸಂಗತಿಯನ್ನು ಯಾರು ಅಲ್ಲಗೆಳೆಯಲಾರರು. ಆದರೆ ಕೆಲವೊಂದು ಮೂಲಭೂತ ಪ್ರಶ್ನೆಗಳು ಹಾಗೆಯೇ ಉಳಿದುಹೊಗುತ್ತವೆ
> ರಾಯಚೂರಿನ ಸುತ್ತಲು ನಡೆದಿರುವ ಅಧ್ಯಯನಗಳು ಅಲ್ಲಿರುವ ಉಷ್ಣ ವಿದ್ಯುತ್ ಸ್ಥಾವರದಿಂದ ಅಲ್ಲಿನ ತಾಪಮಾನದಲ್ಲಿ ಬದಲಾವಣೆಗಳಾಗಿವೆ ಎಂದು ಸೂಚಿಸುತ್ತದೆ. ಮೊದಲೇ ಬೇಸಿಗೆಯಲ್ಲಿ ೪೫ – ೪೭ ಡಿಗ್ರಿಯಲ್ಲಿ ಬೇಯುವ ಗುಲ್ಬರ್ಗದ ಮೇಲೆ ಈ ಸ್ಥಾವರದ ಪರಿಣಾಮಗಳು ಏನು?
>ರಾಯಚೂರು ವಿದ್ಯುತ್ ಸ್ಥಾವರ ತನ್ನ ಸಂಪೂರ್ಣ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದರೆ ರಾಜ್ಯದ ಬಹುತೇಕ ವಿದ್ಯುತ್ ಸಮಸ್ಯೆ ಬಗೆಹರಿಯುತ್ತದೆ. ಆದರೆ ಅದರ ಕಡೆಗೆ ಗಮನವರಿಸದ ಸರಕಾರ ಹೊಸ ಯೋಜನೆಗೆ ಯಾಕಿಷ್ಟು ಉತ್ಸಾಹ ತೋರಿಸುತ್ತಿದೆ?
>ವಿದ್ಯುತ್ ನ ಸಾಗಾಣಿಕೆಯಲ್ಲಿ ೨೦ – ೩೦% ನಷ್ಟು ನಷ್ಟವಾಗುವುದನ್ನು ತಡೆಗಟ್ಟಿದರು ಸಮಸ್ಯೆಯ ಬಹುಭಾಗವನ್ನು ತಗ್ಗಿಸಬಹುದು ಎಂದು ಈ ಕ್ಷೇತ್ರದ ಪರಿಣಿತರು ಹೇಳಿದರು ಸರಕಾರ ಆ ನಿಟ್ಟಿನಲ್ಲಿ ಯಾಕೆ ಯೋಚಿಸುವುದಿಲ್ಲ?
>ನಗರಗಳಲ್ಲಿ ಒಮ್ಮೆ ಪ್ರದಕ್ಷಿಣೆ ಹಾಕಿದರೆ ಕೇವಲ ಜಾಹಿರಾತಿಗೆ ಎಷ್ಟು ವಿದ್ಯುತ್ ವ್ಯಯವಾಗುತ್ತಿದೆ ಎಂಬುದರ ಅರಿವಾಗುತ್ತದೆ. ನಾವು ವಿದ್ಯುತ್ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬಿಗಲಾಗುವ ತನಕ ಈ ರೀತಿಯ ಪೋಲನ್ನು ನಿಲ್ಲಿಸಬಹುದಲ್ಲವೇ?
>ಕೊನೆಯದಾಗಿ – ರೈತರಿಗೆ ಹಣ ದಕ್ಕಿತು, ಸರಕಾರಕ್ಕೆ ಜಾಗ, ಬಹುಶ ಅವರ ಅಧಿಕಾರಿಗಳಿಗೆ ಕಮಿಷನ್, ನಮಗೆ ವಿದ್ಯುತ್. ಆದರೆ ಮುಂದಿನ ಜನಾಂಗದ ಆಹಾರ ಭದ್ರತೆ? ಹೆಚ್ಚುತ್ತಿರುವ ದರಗಳಿಂದ ಖರೀದಿ ಶಕ್ತಿ ಕಳೆದುಕೊಳ್ಳುತ್ತಿರುವ ಜನರ ಬವಣೆ? ಬೇಳೆಯ ಬೆಲೆ ೧೦೦ ರು ತಲುಪುತ್ತೆ ಮತ್ತು ನಾವು ಬೇಳೆಯನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳನ್ನು ವಿದ್ಯುತ್ ಸ್ಥಾವರಕ್ಕೆ ವಶಪಡಿಸಿಕೊಳ್ಳುತ್ತೇವೆ.
“ಪ್ರಜಾಪ್ರಭುತ್ವ” ಭಾರತ ಅಮರವಾಗಲಿ!!
This entry was posted on ಜುಲೈ 26, 2010 at 11:42 ಫೂರ್ವಾಹ್ನ and is filed under ಕರ್ನಾಟಕ, ಪ್ರಸ್ತುತ. Tagged: gulbarga, raichur, thermal power plant. You can follow any responses to this entry through the RSS 2.0 feed. You can leave a response, or trackback from your own site.
ನಿಮ್ಮದೊಂದು ಉತ್ತರ