ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Posts Tagged ‘naxalism’

ಕರ್ನಾಟಕದ ಗೃಹ ಮಂತ್ರಿಗೊಂದು ಪತ್ರ.

Posted by ajadhind on ಜೂನ್ 23, 2010

” ಕರ್ನಾಟಕದಲ್ಲಿ ಈಗ ನಕ್ಸಲರು ಇಲ್ಲ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ್ದೇವೆ. ನಕ್ಸಲ್ ಪೀಡಿತ ಪಟ್ಟಿಯಿಂದ ಕರ್ನಾಟಕ ಹೊರಕ್ಕೆ.” – ಗೃಹ ಸಚಿವ ವಿ.ಎಸ್.ಆಚಾರ್ಯ.
ನಕ್ಸಲರೆಂದರೆ ಕಾಡಿನಲ್ಲಿದ್ದು ಬಂದೂಕು ಹಿಡಿದಿರುವವರು ಮಾತ್ರ ಎಂದು ತಿಳಿದವರಿಂದ ಮಾತ್ರ ಈ ರೀತಿಯ ಹೇಳಿಕೆ ಬರಲು ಸಾಧ್ಯ. ಹೌದು , ಬಹಳಷ್ಟು ಜನ ಪ್ರಮುಖ ನಾಯಕರ ಬಂಧನದಿಂದ ರಾಜ್ಯದಲ್ಲಿ ನಕ್ಸಲರ ಸಂಖ್ಯೆ ಕ್ಷೀಣಿಸಿದೆ. ಆದರೆ ಕರ್ನಾಟಕ ‘ನಕ್ಸಲ್ ಮುಕ್ತ’ರಾಜ್ಯವಾ?.
ಮೊದಲನೆಯದಾಗಿ ನಕ್ಸಲ್ ಚಳುವಳಿ ಭಾರತದಾದ್ಯಂತ ವ್ಯಾಪಿಸಲು ಮೂಲ ಕಾರಣ ದೇಶದ ಆಡಳಿತದಲ್ಲಿನ ಲೋಪದೋಷಗಳು, ರಾಜ್ಯಕ್ಕೂ ಅದು ಅನ್ವಯವಾಗುತ್ತೆ. ಒಂದೊಮ್ಮೆ ನಕ್ಸಲ್ ಹೋರಾಟ ಸಂಪೂರ್ಣವಾಗಿ ನಿಲ್ಲಬೇಕಾದರೆ ಸರಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆದರೆ ಅದು ಆಗುತ್ತಿದೆಯೇ? ಕರ್ನಾಟಕದ ಉದಾಹರಣೆಯನ್ನೇ , ಅದರಲ್ಲೂ ಕೇವಲ ಈಗಿನ ಸರಕಾರದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಟ್ಟಿರುವ ಆಡಳಿತ ಜನರಲ್ಲಿ ಭರವಸೆ ಮೂಡಿಸುವ ಹಾಗಿದೆಯಾ? ಗಣಿ ಮಾಫಿಯಾದವರ ಅಟ್ಟಹಾಸ , ಮಂತ್ರಿಗಳ ಭ್ರಷ್ಟಾಚಾರ, ಹಾದರ, ಕೋಮುಗಲಭೆಗಳು, ಎಲ್ಲಾ ಕೋಮಿನ ಮೂಲಭೂತವಾದಿಗಳ ಅಟ್ಟಹಾಸ, ಉತ್ತರ ಕರ್ನಾಟಕದಲ್ಲಾದ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ಪಕ್ಷದವರು ಮಾಡಿದ ಮಾಡುತ್ತಿರುವ ಮೋಸ – ಜನರು ಈ ಕಾರಣಕ್ಕಾಗಿ ‘ಪ್ರಜಾ ಪ್ರಭುತ್ವದಲ್ಲಿ’ ನಂಬಿಕೆ ಇಡಬೇಕಾ? ಅಲ್ಲಿಗೂ ಜನರು ಸರಕಾರಕ್ಕೆ ಬೆಂಬಲ ಕೊಡುವಂತೆ ಇದ್ದಾರೆ ಎಂಬುದಕ್ಕೆ ಕಾರಣ ಅವರಿಗೆ ಮತ್ಯಾವ ಪರ್ಯಾವವೂ ಕಾಣದಿರುವುದೇ ಆಗಿದೆ.
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಡೆ ಅನುಭವಿಸಿರಬಹುದು. ಆದರೆ ರಾಜ್ಯದ ಜನರಿಗೆ ಒಂದು ಸಂದೇಶ ಮುಟ್ಟಿದೆ. ನಮ್ಮನ್ನು ಸರಕಾರ ನಿರ್ಲ್ಯಕ್ಷಿಸುತ್ತಿದ್ದಾಗ ನಕ್ಸಲ್  ಚಳುವಳಿ ಮಾತ್ರ ನಮ್ಮ ಸಮಸ್ಯೆಗಳಿಗೆ ಉತ್ತರವಾಗಬಲ್ಲದು ಎಂದು. ಇದು ಮಲೆನಾಡಿನಲ್ಲಿ ನಕ್ಸಲರಿಗೆ ಸಿಕ್ಕ ಗೆಲುವು. ಸರಕಾರದ ಅಧಿಕಾರಿಗಳೇ ಹೇಳಿರುವಂತೆ ಕೆಲವು ಉತ್ತಮ ಅಧಿಕಾರಿಗಳ ನೆರವಿನಿಂದ ಮಲೆನಾಡಿನಲ್ಲಿ ನಕ್ಸಲ್ ಪ್ರಭಾವ ತಗ್ಗಿದೆಯಂತೆ. ಅಲ್ಲಿಗೆ ಉತ್ತಮ ಕೆಲಸ ಮಾಡುವ ಅಧಿಕಾರಿಗಳು ನಮ್ಮ ಜಾಗಕ್ಕೆ ಬರಬೇಕಾದರೆ ಮತ್ತು ಅಧಿಕಾರಿಗಳು ನಮ್ಮ ಪ್ರದೇಶದಲ್ಲಿ ಉತ್ತಮ ಕೆಲಸ ಮಾಡಬೇಕಾದರೆ ಒಂದಷ್ಟು ದಿನಗಳ ಮಟ್ಟಿಗಾದರೂ ಅಲ್ಲಿನ ಜನರು ನಕ್ಸಲ್ ಹೋರಾಟದಲ್ಲಿ ಭಾಗವಹಿಸಬೇಕೆಂದು ಸರಕಾರವೇ ಪರೋಕ್ಷವಾಗಿ ತಿಳಿಸಿದಂತಾಯಿತು.
ಉಳಿದಂತೆ ರಾಜ್ಯದ ಬಹುತೇಕ ಶಾಂತ ರೀತಿಯ ಹೋರಾಟಗಳನ್ನು ರಾಜ್ಯ ಸರಕಾರ ತನ್ನ ಕುತಂತ್ರದಿಂದ, ಅಧಿಕಾರದ ಬಲಪ್ರಯೋಗದಿಂದ ಹತ್ತಿಕ್ಕಿರುವುದನ್ನು ಜನರು ನೋಡಿದ್ದಾರೆ. ಇತ್ತೀಚಿನ ಉದಾಹರಣೆ ಗುಲ್ಬರ್ಗದ ಅಣು ವಿದ್ಯುತ್ ಸ್ಥಾವರ.
ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಎಕರೆಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ಕೊಡಲು ಹೊರಟಿದೆ ನಮ್ಮ ಸರಕಾರ. ನಕ್ಸಲ್ ಹೋರಾಟವನ್ನು ಬಿಟ್ಟು ಉಳಿದ ಯಾವುದೇ ಹೋರಾಟವನ್ನು ಅಲ್ಲಿನ ಜನ ನೆಚ್ಚಿಕೊಂಡರೆ ಗುಲ್ಬರ್ಗದ ರೈತರಿಗಾದ ಸ್ಥಿತಿಯೇ ಅವರಿಗೂ ಆಗುವ ಸಾಧ್ಯತೆಗಳು ಅಧಿಕ. ಒಂದೊಮ್ಮೆ ಸರಕಾರ ತನ್ನ ಅಧಿಕಾರದ ಬಲದಿಂದ ಜನರನ್ನು ಬೆದರಿಸಿ ಕೃಷಿಯೋಗ್ಯ ಭೂಮಿಯನ್ನು ವಶಪಡಿಸಿಕೊಂಡರೆ ನಂತರದ ದಿನಗಳಲ್ಲಿ ಆಕಾಶದ ಕಡೆ ಮುಖ ಮಾಡುವ ಆಹಾರ ಉತ್ಪನ್ನಗಳ ಬೆಲೆಯ ಬಿಸಿ ಜನರಿಗಿ ಮುಟ್ಟಿದಾಗ ಶುರುವಾಗುವ ಹೋರಾಟವನ್ನು ತಡೆಯಲು ಸರಕಾರದ ಬಳಿ ‘ ಅಪರೇಷನ್ ಗ್ರೀನ್ ಹಂಟ್’ ನಂತಹ ಯೋಜನೆಗಳನ್ನು ಬಿಟ್ಟು ಬೇರೆ ಯೋಚನೆಗಳಿವೆಯೇ?

Advertisements

Posted in ಕರ್ನಾಟಕ, ನಕ್ಸಲಿಸ೦, ಪತ್ರಿಕಾ ಪ್ರಕಟಣೆ, ಪ್ರಸ್ತುತ | Tagged: , , , | Leave a Comment »

ಅವರನ್ನು ಅರ್ಥೈಸಿಕೊಳ್ಳುತ್ತ.

Posted by ajadhind on ಏಪ್ರಿಲ್ 24, 2010

[translation of goutham navlakha’s Days and Nights In the Heartland Of Rebellion]
ಅಧ್ಯಾಯ 2 .
ಮೊದಲ ಕೆಲವು ದಿನ, ನನ್ನೊಡನೆ ಮಾತನಾಡಲು ಜನರು ಹಿಂಜರಿಯುತ್ತಿದ್ದರು. ನಾನು ಭಾರತೀಯನ ? ಹೌದಾದಲ್ಲಿ ಜಾನ್ ಮಿರ್ದಾಲ್‌ನ ಜೊತೆ ಅವನ ಭಾಷೆಯಲ್ಲಿ ಸಂಭಾಷಿಸಲು ಹೇಗೆ ಸಾಧ್ಯ? ಜೊತೆಗೆ ಅವರಿಗೆ ಹಿಂದಿ ಭಾಷೆ ಸರಾಗವಾಗಿ ಬರುತ್ತಿರಲಿಲ್ಲ, ನನಗೆ  ಚತ್ತೀಸ್ಗಡಿ ತಿಳಿಯುತ್ತಿತ್ತಾ? ಎಂಬ ಪ್ರಶ್ನೆಗಳಿದ್ದವು. ಗೋಂದಿ ಮತ್ತು ಕೊಯಮ್ ಭಾಷೆಗಳು ನನಗೆ ತಿಳಿಯುವುದಿಲ್ಲ ಎಂಬುದರ ಅರಿವಿತ್ತು ಅವರಿಗೆ. ಆದರೆ ಕೆಲವು ದಿನಗಳ ನಂತರ, ಕುತೂಹಲ ಕಡಿಮೆಯಾಗಿ ನನ್ನೊಡನೆ ಸಂವಹಿಸಲಾರಂಭಿಸಿದರು. ನಾನು ಹಿಂದಿಯಲ್ಲಿ ಬರೆಯಬಲ್ಲೆ ಮಾತನಾಡಬಲ್ಲೆ ಎಂದವರಿಗೆ ತಿಳಿಯಿತು ಮತ್ತು ನಾನು ವಿದೇಶದಲ್ಲಿ ನೆಲೆಸಿದ್ದ ಭಾರತೀಯ, ಈಗ ಮತ್ತೆ ದೆಹಲಿಯಲ್ಲಿ ವಾಸವಾಗಿದ್ದೇನೆ ಎಂದು ತಿಳಿದ ನಂತರ ನನಗೂ ಅವರ ನಡುವೆ ಒಂದು ಸ್ಥಳ ಸಿಕ್ಕಿತು. ನಮ್ಮ ನಡುವಿನ ಅಂತರ ಜೊತಜೊತೆಯಲಿ ಹಾಡಲಾರಂಭಿಸಿದ ಮೇಲೆ ಕಡಿಮೆಯಾಯಿತು. ದೆಹಲಿಯಲ್ಲಿರುವ ಜನರ ಬಗ್ಗೆ ಬಹಳಷ್ಟು ಪ್ರಶ್ನೆ ಕೇಳಿದರು. ಅಲ್ಲಿನ ಜನ ಕೆಲಸ ಮಾಡುತ್ತಾರಾ? ಎಷ್ಟು ಸಂಪಾದಿಸುತ್ತಾರೆ? ಅವರ ಜೀವನ ರೀತಿ ಹೇಗೆ? ಮಾರ್ಕ್ಶ್ ಮತ್ತು ಎಂಗೆಲ್ಸ್ ನ ವಾಸಸ್ಥಾನವಾಗಿದ್ದರೂ ಯುರೋಪಿನಲ್ಲಿ ಕ್ರಾಂತಿ ಯಾಕೆ ಯಶಸ್ವಿಯಾಗಲಿಲ್ಲಿ? ಅಲ್ಲಿ ವರ್ಗ ಸಂಘರ್ಷ ಇಲ್ಲವಾ? ತಾಲೀಬಾನಿ ಮತ್ತು ಜೆಹಾದಿಗಳ್ಯಾಕೆ ಮಸೀದಿಗಳಿಗೆ ಬಾಂಬ್ ಇಟ್ಟು ತಮ್ಮದೇ ಜನರ ಮೇಲೆ ಆಕ್ರಮಣ ಮಾಡುತ್ತಾರೆ? ಅಮೇರಿಕದ ಸೇನೆಯ ಮೇಲ್ಯಾಕೆ ಮಾಡುವುದಿಲ್ಲ? ಕಾಶ್ಮೀರದಲ್ಯಾಕೆ ವಿಮೋಚನೆಗೆ ಹೋರಾಡಲು ಒಂದೇ ಪಕ್ಷದ ನೇತ್ರತ್ವವಿಲ್ಲ? ಪ್ರತಿ ಪ್ರಶ್ನೆಯೂ ಉತ್ತರ ಬಯಸುತ್ತಿತ್ತು. ಉತ್ತರವೀಯಲು ಶ್ರಮದ ಅವಶ್ಯಕತೆಯಿತ್ತು. ಮೂವತ್ತು ವರ್ಷದ ಚಳುವಳಿ ಕಾಡಿನ ಹೊರಗಿನ ಪ್ರಪಂಚದ ಅರಿವು ಮೂಡಿಸಿದೆ ಅವರಲ್ಲಿ. ಪ್ಯಾಲೆಸ್ತೇನ್, ಇರಾಕ್, ಶ್ರೀಲಂಕಾ, ಆಪ್ಘಾನಿಸ್ತಾನ, ಕಾಶ್ಮೀರ, ನಾಗಾ ಜನ, ಮಣಿಪುರ ಮತ್ತು ಅಸ್ಸಾಮಿನಲ್ಲಿ ಜನರು ದಬ್ಬಾಳಿಕೆಯ ವಿರುದ್ದ ಹೋರಾಡುತ್ತಿರುವುದರ ಅರಿವಿದೆ. ಸುತ್ತಮುತ್ತಲಿಂದ ಆಕ್ರಮಿಸಲ್ಪಟ್ಟಿದ್ದರು ಅವರ ಮನಸ್ಸುಗಳು ಕುಗ್ಗಿಲ್ಲ. ನನಗೆ ನೆನಪಾಯಿತು, ವಿಧ್ಯಾರ್ಥಿ ಜೀವನದಲ್ಲಿ ನಾನು ಕಂಡು ಕೊಂಡಿದ್ದ ಸತ್ಯ – ಹೋರಾಟ ಮಾಡುವ ಜನ ಹೆಚ್ಚು ಭಾವಜೀವಿಗಳಾಗಿರುತ್ತಾರೆಂದು.

ವಿಶ್ವಮಾನ್ಯ ಭಾಷೆ ಮಾತನಾಡುವ – ತಮ್ಮ ಹೋರಾಟಗಳನ್ನು ಇತರ ಹೋರಾಟಗಳೊಂದಿಗೆ ಸಮೀಕರಿಸಿ ಮಾತನಾಡಬಲ್ಲರೂ. ಇನ್ನೊಂದೆಡೆ ಸಂಕುಚಿತ ದೃಷ್ಟಿಕೋನ ಹೊಂದಿರುವವರು ತಮ್ಮ ಮತ್ತು ಇತರರ ಹೋರಾಟದ ನಡುವೆ ಅಂತರ ಬೆಳೆಸಿಕೊಳ್ಳುವರು. ನನಗೆ ಅನ್ನಿಸಿದಂತೆ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಭಾರತದ ಬುದ್ಧಿಜೀವಿಗಳು ಆಶ್ಚರ್ಯವೆಂಬಂತೆ ಜನಾತನ ಸರಕಾರದಡಿಯಲ್ಲಿ ಭಾರತದ ಕಾಡಿನಲ್ಲಿ ವಾಸಿಸುತ್ತಿರುವ ಜನರಿಗಿಂತ ಹೆಚ್ಚು ಸಂಕುಚಿತ ಮನೋಭಾವ ಹೊಂದಿದ್ದಾರೆ. ಕಾಡಿನಲ್ಲಿರುವವರಿಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಅರಿವಿದೆ, ಅದೇ ನಗರ ಕೇಂದ್ರಿತ ಜನರಲ್ಲಿ ಮಾಹಿತಿ ಲಭ್ಯವಿದ್ದರು ಕೂಡ – ಒಂದೋ ತಿಳಿಯಲು ಆಸಕ್ತಿಯಿಲ್ಲ ಅಥವಾ ತಿಳಿದ ಮೇಲೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಬಸ್ತಾರಿನಲ್ಲಿ ಇತ್ತೀಚೆಗೆ ಶುರುವಾಗಿರುವ ಯುಧ್ಧದ ಬಗ್ಗೆ ಮೂರು ವಾದಗಳನ್ನು ಕೇಳಿದೆ, ಗೆರಿಲ್ಲಾ ವಲಯ ಮತ್ತು ಸುತ್ತಮುತ್ತಲಿನ ಆದಿವಾಸಿ ಜನಗಳ ಜೊತೆ ಮಾತನಾಡಿದಾಗ. ಮೊದಲನೆಯದಾಗಿ, ಸರಕಾರದಿಂದ ಘೋಷಿಸಲಾಗಿರುವ ಈ ಯುದ್ಧ ಆದಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ದೊಡ್ಡ ಕಂಪನಿಗಳ ಸಲುವಾಗಿ. ಒಂದೋ ಒಪ್ಪಿಗೆಯನಿತ್ತು ಕೊಟ್ಟಷ್ಟು ಪರಿಹಾರ ತೆಗೆದುಕೊಂಡು ಜಾಗ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಭೂಮಿ ಕಳೆದುಕೊಳ್ಳುವುದಷ್ಟೇ  ಅಲ್ಲ ಯಾವುದೇ ಪರಿಹಾರ ದೊರಕದು ಎಂದು ಬೆದರಿಕೆಯೊಡ್ಡಲಾಗಿದೆ [ ಸಿ.ಪಿ.ಐ ಬೆಂಬಲಿತ ಆದಿವಾಸಿ ಮಹಾಸಭಾ ಹೆಚ್ಚು ಪರಿಹಾರವನ್ನೂ ಒಪ್ಪಿಕೊಳ್ಳಿ ಎಂದು ಜನರನ್ನು ಒತ್ತಾಯಿಸುತ್ತಿರುವ ವರದಿಗಳಿವೆ] ಇವರ ಈ ಹೇಳಿಕೆ ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿತು. ಅದರ ಬಗ್ಗೆ ಮತ್ತಷ್ಟು ವಿವರ ಕಲೆಹಾಕಲಾರಂಭಿಸಿದೆ. ಪರಿಹಾರ ಸಿಗುವುದಿಲ್ಲ ಎಂಬುದರ ಅರ್ಥವೇನು? “ಕಂಪೆನಿಯ ವಕ್ತಾರರು ನಮಗೆ ಎಚ್ಚರಿಕೆ ನೀಡಿದ್ದಾರೆ, ಅವರು ಕೊಡುವ ಪರಿಹಾರವನ್ನು  ಒಪ್ಪಿಕೊಳ್ಳದಿದ್ದಲ್ಲಿ ಆ ಹಣ ಇತರರ ಕೈಗೆ ಸೇರುತ್ತೆ ಎಂದು” ನಂತರ ವಿವರಿಸಿದರು, ನಕಲಿ ಚೆಕ್ಕುಗಳು, ಚೆಕ್ಕುಗಳು ಬೌನ್ಸ್ ಆಗಿರುವುದು, ಭೂಮಿಯ ಒಡೆಯರಿಗಲ್ಲದೇ ಇತರರಿಗೆ ಚೆಕ್ಕು ವಿತರಿಸಿರುವುದು – ಇವೆಲ್ಲಾ ಆಗಾಗ್ಯೆ ನಡೆಯುವ ಘಟನೆಗಳೆಂದು. ಎರಡನೆಯದಾಗಿ, ಅವರು ಭೂಮಿಗೆ ಬದಲಾಗಿ ಕೊಡುವ ಹಣದ ರೂಪದ ಪರಿಹಾರ ಎಷ್ಟರ ಮಟ್ಟಿಗೆ ಸಾಧು? ಅವರ ಭೂಮಿ ಇಲ್ಲಿಯವರೆಗೆ ಅವರ ಜೀವನವನ್ನಷ್ಟೇ ಅಲ್ಲ ಮುಂಬರುವ ಪೀಳಿಗೆಯ ಜೀವನಕ್ಕೂ ಭದ್ರತೆ ಒದಗಿಸುತ್ತದೆ. ಇದರೊಟ್ಟಿಗೆ ಇವರ ಜೀವನಕ್ಕೆ ಆಧಾರವಾಗಿರುವುದು ಕೇವಲ ಭೂಮಿಯಷ್ಟೇ ಅಲ್ಲ, ಮರಗಳಾದ ಸುಳ್ಫಿ, ಮಾವು, ಹುಣಿಸೆ – ಇವೆಲ್ಲ ಅವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ಸಹಾಯ ಮಾಡಿವೆ, ಹಸಿವನ್ನು ನೀಗಿಸುವುದರ ಜೊತೆಗೆ. ಮೂರನೆಯದಾಗಿ ಸರಕಾರ ಹೇಳುತ್ತಿರುವ ಅಭಿವೃಧ್ಧಿ, ವಿಕಾಸ ಕೇವಲ ಬಕ್ವಾಸ್ ಮಾತುಗಳಷ್ಟೇ, ಬೈಲಾದಿಲ್ಲಾದಲ್ಲಿ ನಡೆದಿರುವುದನ್ನು ನೋಡಿದ ನಂತರ. ಇಷ್ಟೆಲ್ಲಾ ವರುಷಗಳಲ್ಲಿ ಆದಿವಸಿಗಳು ತಮ್ಮ ಜೀವನೋಪಾಯವನ್ನು ತಾವೇ ನಡೆಸಿಕೊಂಡಿದ್ದಾರೆ, ಸರಕಾರಗಳು ಮಾಡಿದ ಸಹಾಯ ಕಿಂಚಿತ್ ಗಿಂತಲೂ  ಕಡಿಮೆ. ಆದರೀಗ ಕಂಪನಿಗಳಿಗೆ ಭೂಮಿ ಬೇಕಾದಾಗ ‘ಅಭಿವೃದ್ಧಿಯ ಮಾತನಾಡುತ್ತದೆ. ನಮ್ಮನ್ನು ನಮ್ಮ ಪಾಡಿಗೆ ಬಿಡಲಿ ಎನ್ನುತ್ತಾರವರು. ಒಬ್ಬ ಹಿರಿಯ ಆದಿವಾಸಿ ಹೇಳಿದ ” ಸರಕಾರಕ್ಕೆ ಅಭಿವೃಧ್ಧಿಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದಾರೆ ಇಷ್ಟೆಲ್ಲಾ ವರ್ಷಗಳು ವ್ಯವಸಾಯವನ್ನು ಅಭಿವೃಧ್ಧಿ ಪಡಿಸಲು ಅವರಿಗಿದ್ದ ಅಡ್ಡಿಯಾದರೂ ಏನು?”

ಕಾಡಿನೊಳಗೆ ಹಿರಿಯರ ಬಳಿ ಸಭೆ ನಡೆಸುತ್ತಿದ್ದಾಗ ಅವರಾಡಿದ ಮಾತುಗಳು ಮನ ತಟ್ಟಿತು. “ನಮಗೆ ವಯಸ್ಸಾಗಿದೆ, ಜೀವನ ಜೀವಿಸಿಯಾಯಿತು. ಆದ್ದರಿಂದ ಸರಕಾರ ಈ ಭೂಮಿ ಪರಭಾರೆ ಮಾಡಿಕೊಳ್ಳುವುದರ ವಿರುದ್ಧ ನನ್ನ ಪ್ರಾಣ ಮುಡಿಪಾಗಿಡಲೂ  ತಯಾರು. ನಾನಿದನ್ನು ಖಂಡಿತ ಮಾಡ್ತೀನಿ. ನಾವೆಲ್ಲರೂ” ತನ್ನ ತಲೆಮಾರಿನ ಇತರರೆಡೆಗೆ ಕೈ ತೋರುತ್ತಾ ಹೇಳಿದ ” ಇಲ್ಲೇ ಇರ್ತೀವಿ ಮತ್ತು ಹೋರಾಡುತ್ತಿವಿ, ನೋಡೋಣ ನಮ್ಮಲ್ಲೆಷ್ಟು ಜನರನ್ನು ಸೈನಿಕರು ಸಾಯಿಸುತ್ತಾರೆಂದು. ನಮ್ಮೆಲ್ಲರನ್ನು ಸಾಯಿಸಬಲ್ಲರಾ ಅವರು?” ” ನಮಗೆ ಹೋರಾಡುವುದು ತಿಳಿದಿದೆ” ಸಿಟ್ಟು ಕಣ್ಣಿಗೆ ಕಾಣುತ್ತಿತ್ತು. ಹೊರಗಿನ ಜನರಿಗೆ ಏನು ಹೇಳಬೇಕೆಂದು ಕೇಳಿದೆ. ” ದಯವಿಟ್ಟು ಅವರಿಗೆ ಹೇಳಿ ಅವರ ಸರಕಾರ ಸುಳ್ಳಾಡುತ್ತಿದೆಯೆಂದು. ಇವತ್ತು ನನ್ನ ಭೂಮಿ ಮತ್ತು ಕಾಡು ಕಸಿಯುತ್ತಾರೆ , ಇವರ ಈ ಕಾರ್ಯ ನಾಳೆ ನನ್ನ ಜೀವ ಕಸಿಯುತ್ತದೆ” ಇದರ ಅರ್ಥವೇನೆನ್ದು ಕೇಳಿದೆ? ” ಈ ಕಾಡು ಮತ್ತು ಭೂಮಿಯೇ ನಮ್ಮ ಜೀವ”

ಭಾರತದ ಗೃಹಮಂತ್ರಿ ಪಿ. ಚಿದಂಬರಂ ತೆಹೆಲ್ಕಾಗೆ ಹೇಳಿದ್ದನ್ನು ಓದಿ ಹೇಳಿದೆ ” ನನ್ನ ಮನಕ್ಕೆ ಸಂಪೂರ್ಣ ಮನವರಿಕೆಯಾಗಿದೆ, ಯಾವುದೇ ದೇಶ ತನ್ನಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲವನ್ನು ಉಪಯೋಗಿಸದೆ ಅಭಿವೃಧ್ಧಿ ಹೊಂದಲಾರದು. ಗನಿಗಳಲ್ಲಿನ ಆಸ್ತಿಯನ್ನು ಕೊಯ್ಲು ಮಾಡಬೇಕು ಮತ್ತು ಜನರಿಗಾಗಿ ಉಪಯೋಗಿಸಬೇಕು. ಆದಿವಾಸಿಗಳು ಬೇಟೆಗಾರರಾಗಿಯೇ ಉಳಿಯಬೇಕೆಂದು ಬಯಸುತ್ತಿರಾ? ಅವರನ್ನು anthropology ವಸ್ತು ಸಂಗ್ರಹಾಲಯದಲ್ಲಿ ಇಡಲು ಬಯಸುತ್ತಿರಾ? ಹೌದು , ಗನಿಗಳಲ್ಲಿನ ವಸ್ತುಗಳನ್ನು ಇನ್ನು ಹತ್ತು ಸಾವಿರ ವರ್ಷಗಳು ಭೂಮಿಯಲ್ಲೇ ಇರುವಂತೆ ಮಾಡಬಹುದು, ಆದರದು ಈ ಜನರಿಗೆ ಅಭಿವೃದ್ಧಿ ತರುತ್ತದಾ? ಅವರು ನಿಯಂ ಗಿರಿ ಬೆಟ್ಟವನ್ನು ಪೂಜಿಸುತ್ತಾರೆ ಎನ್ನುವ ಸಂಗತಿಯನ್ನು ಗೌರವಿಸೋಣ, ಆದರದು ಅವರ ಕಾಲಿಗೆ ಶೂ ಒದಗಿಸುತ್ತದೆಯೇ? ಅಥವಾ ಅವರ ಮಕ್ಕಳಿಗೆ ಶಾಲೆ? ಅವರು ಪೌಷ್ಟಿಕಾಮಶದಿಂದ ನರಳುತ್ತಿರುವುದನ್ನು ತಪ್ಪಿಸುತ್ತದೆಯೇ? ಆರೋಗ್ಯಡೆದೆಗಿನ ಗಮನ? ಗಣಿಗಾರಿಕೆಯ ಬಗೆಗಿನ ಚರ್ಚೆ ಶತಮಾನಗಳಿಂದ ನಡೆದಿದೆ. ಅದರಲ್ಲಿ ಹೊಸದೇನೂ ಇಲ್ಲ.”

“ನಾವಿಲ್ಲಿ ಹಸಿವಿನಿಂದ ಸಾಯುತ್ತಿಲ್ಲ” ಅವರು ಹೇಳಿದರು. ಆದರೆ ವಲಯದ ಹೊರಗಿರುವವರು? ” ಜನಾತನ ಸರಕಾರವನ್ನು ತಲುಪಲು ಅವಕಾಶವನ್ನಿತ್ತರೆ ಅವರಿಗೂ ಅನುಕೂಲವಾಗುತ್ತೆ” ನಿಮಗೆ ಅಭಿವೃದ್ಧಿ ಬೇಡವಾ? ನಾನು ಒತ್ತಾಯಿಸಿ ಕೇಳಿದೆ. ” ಇಲ್ಲ ಲೂಟಿ ಮಾಡಲು ಹೊರಗಿನಿಂದ ದೊಡ್ಡ ಬಂಡವಾಳಶಾಹಿಗಳು ಬರುವುದು ಬೇಡ. ಬೈಲಾದಿಲ್ಲಾದಲ್ಲಿ ಏನಾಯಿತೆಂದು ನಮಗೆ ತಿಳಿದಿದೆ” ಈ ವಾಕ್ಯ ಬಹುಮುಖ್ಯವಾದುದು ” ನೋಡಿ ಅವರು ಬೈಲಾದಿಲ್ಲಾದಲ್ಲಿ ಏನು ಮಾಡಿದರು”

Posted in ಅನುವಾದ | Tagged: , | Leave a Comment »

ಕಾಮ್ರೇಡ್ ಚಾರು ಮಜುಂದಾರ್ ಹಾಗು ಕಾಮ್ರೇಡ್ ಕನಯ್ಯ ಚಟರ್ಜಿಯವರನ್ನು ನೆನೆಯುತ್ತ ಲಾಲಗಡದವರೆಗೆ

Posted by ajadhind on ಆಗಷ್ಟ್ 15, 2009

from charu to lalgarh

Posted in ಇತಿಹಾಸ, ನಕ್ಸಲಿಸ೦ | Tagged: , , , | Leave a Comment »