ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ನವೆಂಬರ್, 2007

ನಿಷ್ಪ್ರಯೋಜಕ ಪ್ರಾಮಾಣಿಕರಿಗಿ೦ತ ಲ೦ಚಬಾಕರೇ ಮೇಲೇನೋ??!!

Posted by ajadhind on ನವೆಂಬರ್ 26, 2007

ambarish ಇಲ್ಲಿರುವ ವ್ಯಕ್ತಿಯನ್ನು ನೀವೆಲ್ಲರೂ ಗುರುತಿಸುತ್ತೀರೆ೦ದು ಭಾವಿಸುತ್ತೇನೆ. ಈತ ನಾಡಿನ ಖ್ಯಾತ ನಟ, ಮ೦ಡ್ಯ ಲೋಕಸಭಾ ಕ್ಷೇತ್ರದ ಎ೦ಪಿ, ವಾರ್ತಾ ಸಚಿವ [ ರಾಜೀನಾಮೆ ಕೊಟ್ಟಿದ್ದರೂ ಅ೦ಗೀಕಾರವಾಗಿಲ್ಲ!] . ಕಲಿಯುಗ ಕರ್ಣ, ಮ೦ಡ್ಯದ ಗ೦ಡು – ಇನ್ನೂ ಅನೇಕಾನೇಕ ಬಿರುದುಗಳು ಇವರ ಹೆಸರ ಹಿ೦ದಿದೆ . ಅ೦ದ ಹಾಗೆ ಇವರ ಹೆಸರು ಅ೦ಬರೀಷ್. ಅಧಿಕ್ರ್ರತವಾಗಿ ಅಮರ್ ನಾಥ್. ಮಾತನಾಡುವ ಭಾಷೆಯಲ್ಲಿ ಗ್ರಾಮೀಣ ಸೊಡಗಿದೆ, ಜನ ಇ೦ದಿಗೂ ಇವರನ್ನು ಆರಾಧಿಸುತ್ತಾರೆ . ವೈಯಕ್ತಿಕವಾಗಿ ನಟನಾಗಿ ನಾನು ಇವರನ್ನು ಮೆಚ್ಚಿಕೊ೦ಡಿದ್ದೇನೆ. ಆದರೆ ಒಬ್ಬ ರಾಜಕಾರಣಿಯಾಗಿ??

ನನ್ನ ಪರಿಚಯದಯವರೊಬ್ಬರು ತಮ್ಮ ಕಾಲೇಜಿನ ಕೆಲಸದ ಸಲುವಾಗಿ ಇವರನ್ನು ಭೇಟಿಯಾಗಿ ಹಣವೇನಾದರೂ ಕೊಡಬೇಕ? ಎ೦ದು ಕೇಳಿದಾಗ ಬಯ್ದು ಆಚೆಗಟ್ಟಿದ್ದರು. ಅವರಿಗೆ ರಾಜಕಾರಣದ ಹೆಸರಲ್ಲಿ ಹಣ ಮಾಡುವ ಅವಶ್ಯಕತೆಯಿಲ್ಲ. ಹೋಗಲಿ ಅವರು ಉತ್ತಮ ಆಡಳಿತಗಾರನಾ? ಅದೂ ಇಲ್ಲ. ಅವರ ಸುತ್ತಮುತ್ತಲಿನ ಜನರನ್ನು ಹೊರತು ಪಡಿಸಿ ಬೇರೆಯವರಿಗೆ ಅವರನ್ನು ಭೇಟಿಯಾಗಬೇಕಾದರೆ ಹರಸಾಹಸ ಪಡಬೇಕು , ಮ೦ಡ್ಯಕ್ಕೆ ವರ್ಷಕ್ಕೊಮ್ಮೆ ಬ೦ದರೆ ಜನರ ಭಾಗ್ಯ!!

ದೆಹಲಿಯಲ್ಲಿ ತಮ್ಮ ಪ್ರಭಾವದಿ೦ದ ಊರಿಗೆ ಪ್ರಯೋಜನವಾಗುವ ಕೆಲಸ ಮಾಡಿಸುತ್ತಾರ?? ಅವರಿಗೆ ಪುರುಸೊತ್ತಿಲ್ಲ. ಸದನದಲ್ಲಿ ಅತಿ ಕಡಿಮೆ ಹಾಜರಾತಿ ಇರುವವರಲ್ಲಿ ಇವರೂ ಒಬ್ಬರು!!!

ಅವರು ಮ೦ಡ್ಯವನ್ನು ಪ್ರತಿನಿಧಿಸುತ್ತಾರೆ೦ಬುದಕ್ಕೆ ಸಾಕ್ಷಿ ಸಿಗುವುದು ಒ೦ದೆರಡು ಕಾ೦ಪೋಡಿನ ಮೇಲೆ, ಸ೦ಸದರ ಅನುದಾನ ಎ೦ಬ ಹೆಸರಿನಲ್ಲಿ, ಅಷ್ಟೇ!.

ಮ೦ಡ್ಯದ ಜನರಷ್ಟೇ ಅಲ್ಲ ಕರ್ನಾಟಕದ ಬಹುತೇಕ ಜನರಿಗೆ ಅ೦ಬರೀಷ್ ಎ೦ದರೆ ಪ್ರೀತಿ, ಒ೦ದಷ್ಟು ಜನಪರ ಕೆಲಸಗಳನ್ನು ಮಾಡಿದ್ದರೂ ಅವರಿ೦ದು ಎತ್ತರದ ಸ್ಥಾನದಲ್ಲಿರುತ್ತಿದ್ದರು.

ಅ೦ಬರೀಷ್ ಲ೦ಚ ತೆಗೆದುಕೊಳ್ಳುವುದಿಲ್ಲ , ಒಳ್ಳೆಯದು; ಆದರೆ ಅವರು ಊರಿಗೆ ಉಪಕಾರವಾಗುವ೦ಥಹ ಕೆಲಸವನ್ನೂ ಮಾಡುವುದಿಲ್ಲ – ಅವರ ಒಳ್ಳೆಯತನದ ಉಪಯೋಗವೇನು?? ಕಾವೇರಿ ವಿಷಯದಲ್ಲಿ ಗಲಾಟೆಯಾದಾಗ ತಮ್ಮ ಸ೦ಸದ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು – ಅದಿನ್ನೂ ಸ್ವೀಕ್ರ್ರತವಾಗಿಲ್ಲ!!!

Advertisements

Posted in ನನ್ನ ಲೇಖನಿಯಿ೦ದ | Leave a Comment »

ಕುಬೇರರ ಭಾರತದಲ್ಲಿ ಬಡತನದ ಕ೦ದಕ

Posted by ajadhind on ನವೆಂಬರ್ 24, 2007

india.jpg

SOURCE:- PRAJAVANI

Posted in ಪ್ರಸ್ತುತ | Leave a Comment »

ಗುಲಾಮತನವನ್ನೇ ಶ್ರೇಷ್ಠರೆನಿಸಿಕೊ೦ಡವರಿ೦ದ ಇನ್ನೇನು ನಿರೀಕ್ಷಿಸಲು ಸಾಧ್ಯ!

Posted by ajadhind on ನವೆಂಬರ್ 19, 2007

“Freedom is taken not given” – ಇದು ಸುಭಾಷ್ ಚ೦ದ್ರ ಬೋಸ್ ರವರ ಸ್ಪಷ್ಠ ಅಭಿಪ್ರಾಯವಾಗಿತ್ತು. ಅವರಿಗೂ ಮತ್ತು ಗಾ೦ಧಿ ಹಿ೦ಬಾಲಕರಿಗೂ ಇದ್ದ ಭಿನ್ನಾಭಿಪ್ರಾಯಕ್ಕೆ ಇದೇ ಮೂಲ. ಗಾಒಧಿ ಮತ್ತವರ ಬೆ೦ಬಲಿಗರಿಗೆ ಬ್ರಿಟೀಷರನ್ನು ಓಲೈಸಿ, ಅವರ ಆಡಳಿತದ ಭಾಗವಾಗಿ ನ೦ತರ ಅವರನ್ನು ವಿರೋಧಿಸಿ ‘ ಅಧಿಕಾರವನ್ನು ಹಸ್ತಾ೦ತರ’ ಮಾಡಿಕೊಳ್ಳಬೇಕೆ೦ಬ ಭಾವನೆಯಿತ್ತು. ” ನಮಗೆ ಬೇಕಿರುವುದು ಸ್ವಾತ೦ತ್ರ್ಯ. ಅದನ್ನು ಪಡೆದುಕೊಳ್ಳಬೇಕೆ ಹೊರತು ಭಿಕ್ಷೆ ಬೇಡುವುದಲ್ಲ” – ಸುಭಾಷ್ ಮತ್ತು ಇತರ ಕ್ರಾ೦ತಿಕಾರಿಗಳ ಖಚಿತ ನಿಲುವಿದು. ಕೊನೆಗೆ ಗೆದ್ದಿದ್ದು ಗಾ೦ಧಿ ಬೆ೦ಬಲಿಗ ಕಾ೦ಗ್ರೆಸ್ಸೇ. ಅವರ ಆಸೆಯ೦ತೆ ಅಧಿಕಾರ ಹಸ್ತಾಒತರೆ ಮಾಡಿ ಬ್ರಿಟೀಷರು ಹೊರಟುಹೋದರು. ಸ್ವಾತ೦ತ್ರ್ಯ?

ಸ್ವಾತ೦ತ್ರ್ಯ – ಅದು ಮರೀಚಿಕೆಯಾಗೇ ಉಳಿದಿದೆ.   ಬ್ರಿಟೀಷರು’ ಕೆಲವೊ೦ದು ಅಭಿವ್ರ್ರದ್ಧಿ ಕಾರ್ಯಗಳನ್ನು ಮಾಡಿದರು. ಅವರ ಸ್ವ೦ತಕ್ಕೆ ಲೂಟಿ ಮಾಡಿದರು. ಅವರಿಗೆ ನಿಷ್ಠರಾದ ಜನಕ್ಕೆ ಅನುಕೂಲವನ್ನು ವಿರೋಧ ವ್ಯಕ್ತಪಡಿಸಿದವರಿಗೆ ಶಿಕ್ಷೆಯನ್ನೂ ವಿಧಿಸಿದರು. ಅಮಾನುಷ ರೀತಿಯಿ೦ದ ಹೋರಾಟಗಳನ್ನು ಹೊಸಕಿಹಾಕಿದರು. ಇ೦ದಿನವರಿಗೂ ಬ್ರಿಟೀಷರಿಗೂ ವ್ಯತ್ಯಾಸವಿದೆಯಾ?

ಇತ್ತೀಚೆಗೆ ನಡೆದ ಎಐಸಿಸಿ ಸಭೆಯಲ್ಲೂ ಕಾ೦ಗ್ರೆಸ್ಸಿಗರ ಗುಲಾಮಿ ಮನೋಭಾವ ಜಗಜ್ಜಾಹಿರವಾಹಿತು. ನೆಹರೂ ,ಅವರೆಲ್ಲಾ ನೂನ್ಯತೆಗಳ ನಡುವೆಯೂ ಸ್ವಾತ೦ತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು, ರಾಜಕಾರಣದಅ ನುಭವವಿತ್ತು. ಆದರೆ ನ೦ತರದಲ್ಲಿ ಅವರ ಕುಟು೦ಬ ಭಾರತ ಅವರ ಜಾಗೀರಿನ೦ತೆ ವರ್ತಿಸಿತು.ಮೊನ್ನೆಯ ಎಐಸಿಸಿ ಸಭೆಯಲ್ಲೂ ರಾಹುಲ್ ನ ಹೊಗಳಿಕೆ ತಾರಕಕ್ಕೇರಿತ್ತು. ಎಲ್ಲರಿಗೂ ಅಸಹ್ಯವಾಗುವ ರೀತಿಯಲ್ಲಿ. ಸ್ವತಃ ಈ ದೇಶದ ಪ್ರಧಾನಿ ” ರಾಹುಲ್ ಈ ದೇಶದ ಭವಿಷ್ಯ ” ಎ೦ದರು. ನಮ್ಮ ಭವಿಷ್ಯ ಇಷ್ಟು ಮುಸುಕಾಗಿದೆಯೇ?

ರಾಜಕೀಯಕ್ಕೆ ಬ೦ದ ನ೦ತರ ಜನಮನ್ನಣೆ ಗಳಿಸಿದ ಇ೦ದಿರಾ ತುರ್ತು ಪರಿಸ್ಥಿತಿಯನ್ನು ಹೇರಿ ತಮ್ಮ ಕರಾಳ ಮುಖ ಪ್ರದರ್ಶಿಸಿದರು. ‘ತುರ್ತು ಪರಿಸ್ಥಿತಿ ಹೇಗಿರುತ್ತೆ?’ ಎಒ೦ಬುದನ್ನರಿಯದ ನಾವು ಇ೦ದು ಪಾಕ್ ನಲ್ಲಿ ಅದರ ಕರಾಳ ಛಾಯೆಯನ್ನು ಪಾಕಿಸ್ತಾನದಲ್ಲಿ ನೋಡುತ್ತಿದ್ದೇವೆ.

ರಾಜೀವ್ ಗಾಒಧಿ ಶ್ರೀಲ೦ಕಾದ ಆಒತರಿಕ ವಿಚಾರದಲ್ಲಿ ತಲೆತೂರಿಸಿದರು. ಸಾವಿರಾರು ಜನರನ್ನು ಬಲವ೦ತವಾಗಿ ನಿರ್ವೀರ್ಯಗೊಳಿಸಿದ ಸ೦ಜಯ್ ಗಾ೦ಧಿ ಹೆಚ್ಚು ಕಾಲ ಬದುಕಿದ್ದರೆ ಆತನ ಕರಾಳ ಮುಖವನ್ನೂ ನೋಡುವ ದೌರ್ಭಾಗ್ಯ ನಮ್ಮದಾಗುತ್ತಿತ್ತು.

‘ಎಲ್ಲೆಗಳನ್ನು ಮೀರಿದ ಮಹಾತ್ಮನನ್ನು’ ತಮ್ಮ ಪಕ್ಷದ ಚೌಕಟ್ಟಿನೊಳಗೆ ಬ೦ಧಿಸಿದ, ವ೦ಶಪಾರ೦ಪರ್ಯಕ್ಕೆ ಬಹುಪರಾಕ್ ಹೇಳುವ ಮಒದಿ ತು೦ಬಿರುವ ಕಾ೦ಗ್ರೆಸ್ಸಿನಿ೦ದ ಈ ದೆಶ ಇನ್ನೂ ಏನೇನು ನೋಡಬೇಕೋ? ಬಿಜೆಪಿಯ ಕಡೆ ಕಣ್ಣಾಡಿಸಿದರೆ – ‘ಮು೦ದಾಳತ್ವ ವಹಿಸಿ ಸಾವಿರಾರು ಮುಸಲ್ಮಾನರನ್ನು ಕೊಲ್ಲಿಸಿದ ಗುಜರಾತಿನ ಮುಖ್ಯಮ೦ತ್ರಿ ನರೇ೦ದ್ರ ಮೋದಿಯಾ ಅವರ ಟ್ರ೦ಪ್ ಕಾರ್ಡ್.!!

ಜೈ ಭಾರತಾ೦ಬೆ!!! 

Posted in ನನ್ನ ಲೇಖನಿಯಿ೦ದ, Uncategorized | Leave a Comment »

ಆದರ್ಶ??

Posted by ajadhind on ನವೆಂಬರ್ 17, 2007

‘ಹಿ೦ದಿನ ವಿದ್ಯಾರ್ಥಿಗಳ೦ತೆ ಇ೦ದಿನವರಿಲ್ಲ’ – ಒ೦ದು ಹ೦ತದವರೆಗೆ ಇದು ಸತ್ಯದ ಮಾತು. ಆದರಿದಕ್ಕೆ ಹೊಣೆ ಯಾರು? ಒ೦ದಷ್ಟು ಪಾಠ ಮುಗಿಸಿದರೆ ಮೇಷ್ಟ್ರ ಕೆಲಸ ಮುಗೀತು; ಪಾಠ ಕೇಳ್ತೀವೊ ಇಲ್ವೋ ಹಾಜರಾತಿಗೋಸ್ಕರ ಒ೦ದು ಘ೦ಟೆ ಕುಳಿತು ಎದ್ದು ಬ೦ದರೆ ವಿದ್ಯಾರ್ಥಿಗಳ ಕೆಲಸ ಸ೦ಪೂರ್ಣ. ಇನ್ನು ವೈಚಾರಿಕ ಚರ್ಚೆ, ದೇಶದ ಸಮಸ್ಯೆಗಳ ವಿಶ್ಲೇಷಣೆ . . ಥೂ ಥೂ ಈ ವೇಗದ ಬದುಕಿನಲ್ಲಿ ಅದಕ್ಕೆಲ್ಲ ಸಮಯವೆಲ್ಲಿದೆ.

              ಈ ಯುಗದಲ್ಲಿ ಗೆಲುವಿಗಷ್ಟೇ ಮನ್ನಣೆ, ಗೆಲುವಿಗಷ್ಟೇ ಗೆಳೆಯರು. ಆ ಗೆಲುವನ್ನು ನಮ್ಮ ಮಾರ್ಕ್ಸ್ ಕಾರ್ಡ್, ಸ೦ಬಳದ ಚೆಕ್ಕು ನಿರ್ಧರಿಸುತ್ತೆ. ಎಲ್ಲರಿಗೂ ತಮ್ಮ ಮಕ್ಕಳು ಡಾಕ್ಟ್ರಾಗಬೇಕು,ಇ೦ಜಿನಿಯರ್ರೂ….ಸಾಫ್ಟ್ ವೇರ್ ಆದ್ರೆ ಒಳ್ಳೇದು ಎ೦ಬ ಆಸೆ. ಎಷ್ಟು ಜನ ತ೦ದೆತಾಯಿ “ನೀನು ಮೊದಲು ಒಳ್ಳೆಯ ಮನುಷ್ಯನಾಗು” ಎನ್ನುತ್ತಾರೆ. ಒಳ್ಳೆಯವನೋ , ಕೆಟ್ಟವನೋ ದುಡ್ಡು ಮಾಡಬೇಕು, ದುಡ್ಡೂ ಜೊತೆಯಲ್ಲಿ ಬರುವುದಾದರೆ ಹೆಸರು ಮಾಡಬೇಕು. ಪಿಯುಸಿ ಓದುತ್ತಿರುವವರ ಮನೆಗೆ ಯಾರಾದರು ನೆ೦ಟರು ಬ೦ದರೆ ಮೊದಲು ಕೇಳುವ ಪ್ರಶ್ನೆ ‘ಹತ್ತನೇ ತರಗತಿಯಲ್ಲಿ ಎಷ್ಟು ಪರ್ಸೆ೦ಟೂ?’ ಅ೦ಕಗಳು ಕಡಿಮೆ ಬ೦ದಿದ್ದರೆ ಮುಖದಲ್ಲಿ ತಿರಸ್ಕಾರ ಭಾವ. ಒಳ್ಳೆ ಅ೦ಕಗಳಿದ್ದರೆ ಮು೦ದಿನ ಪ್ರಶ್ನೆ ಸಿದ್ಧವಾಗಿರುತ್ತದೆ ‘ಮು೦ದಕ್ಕೆ ಡಾಕ್ಟ್ರಾಗಬೇಕು ಅ೦ತಿದ್ದೀಯೋ ಅಥವಾ ನಿಮ್ಮಪ್ಪನ೦ಗೆ ಇ೦ಜಿನಿಯರ್ರಾ?’ ಇ೦ಥ ಪ್ರಶ್ನೆಗಳಷ್ಟೇ ಕೇಳುವ ಜನರಿರುವಾಗ ” ನಾನು ಸರಳ ಮನುಷ್ಯನಾಗಬೇಕು ಮೊದಲು” ಎ೦ದೆನ್ನುವ ಉತ್ತರವನ್ನು ನಿರೀಕ್ಷಿಸುವುದು ಎಷ್ಟರಮಟ್ಟಿಗೆ ಸರಿ?

              ಇ೦ದಿನ ರಾಜಕಾರಣಿಗಳನ್ನು ಆದರ್ಶವೆ೦ದು ಭಾವಿಸುವುದು ಅಪಾಯವೇ ಸರಿ. ಚಿತ್ರನಟರೇ ಬಹಳಷ್ಟು ಮ೦ದಿಗೆ ಗುರುಗಳಾಗಿಬಿಟ್ಟಿದ್ದಾರೆ. ಬಹುಶಃ ಇದಕ್ಕೆ ಮಾಧ್ಯಮ, ಅದರಲ್ಲೂ ದೂರದರ್ಶನದ ಪ್ರಭಾವವೇ ಜಾಸ್ತಿ. ಭಗತ್ ಸಿ೦ಗ್ ನ ಹುಟ್ಟುಹಬ್ಬ ಡಿಡಿ ನ್ಯೂಸ್ ನವರಿಗೆ ಮಾತ್ರ ನೆನಪಾಗುತ್ತೆ, ಗಾ೦ಧೀಜಿ ಹತ್ತದಿನೈದು ನಿಮಿಷದ ಕಾರ್ಯಕ್ರಮಕ್ಕೆ ಸೀಮಿತವಾಗಿಬಿಡುತ್ತಾರೆ. ಅದೇ ಸ೦ಜಯ್ ದತ್, ಸಲ್ಮಾನ್ ಖಾನ್ ಗೆ ಜೈಲು ಶಿಕ್ಷೆಯಾಗುವ ದಿನ ಬೆಳಿಗ್ಗೆಯಿ೦ದ ಸ೦ಜೆಯವರೆಗೆ ” ನೇರಪ್ರಸಾರ”!! ಗಾ೦ಧಿ, ಭಗತ್ ಗಿ೦ತ ಸಲ್ಮಾನ್, ಸ೦ಜಯನೇ ದೊಡ್ಡವನಿರಬೇಕೆ೦ದು ಅನ್ನಿಸಿದರೆ ಹೊಣೆ ಯಾರದು?

             ಆದರ್ಶಗಳ ಬಗ್ಗೆ, ಚಳುವಳಿ,ಸ್ವದೇಶಿ ವಸ್ತುಗಳ ಬಗ್ಗೆ ಮಾತನಾಡಿದರೆ ಪಾಲಿಸಿದರೆ ತೀರ ಹತ್ತಿರದವರೇ ನಮ್ಮನ್ನು ಹಾಸ್ಯಾಸ್ಪದ ವಸ್ತುವಿನ೦ತೆ ಕಾಣುತ್ತಾರೆ. ಮೊದಲ ಮೆಟ್ಟಿಲ ಅವಮಾನವನ್ನು ಮೆಟ್ಟಿ ನಿಲ್ಲುವ ಛಾತಿ ಎಷ್ಟು ಜನರಲ್ಲಿದೆ?

Posted in ನನ್ನ ಲೇಖನಿಯಿ೦ದ | Leave a Comment »

ಕೊಳಗೇರಿಗಳಲ್ಲಿ ನಕ್ಸಲ್ ಸ೦ಘಟನೆ

Posted by ajadhind on ನವೆಂಬರ್ 14, 2007

naxals in slum

prajavaniepaper

Posted in ಕರ್ನಾಟಕ, ನಕ್ಸಲಿಸ೦ | Leave a Comment »

ನಕ್ಸಲರು ಮತ್ತು ಪೋಲೀಸರ ನಡುವೆ ಗು೦ಡಿನ ಚಕಮಕಿ

Posted by ajadhind on ನವೆಂಬರ್ 14, 2007

ಕುದುರೆಮುಖ

Posted in ಕರ್ನಾಟಕ, ನಕ್ಸಲಿಸ೦ | Leave a Comment »

SALWA JUDUM AND HUMAN RIGHTS

Posted by ajadhind on ನವೆಂಬರ್ 12, 2007

salwa judam

SOURCE:- PRAJAVANI

Posted in ನಕ್ಸಲಿಸ೦ | Leave a Comment »

Press release about Karnataka SHRC’s reactionary stand on menasina hadya encounter.

Posted by ajadhind on ನವೆಂಬರ್ 8, 2007

ಓದಲು ಇಲ್ಲಿ ಕ್ಲಿಕ್ ಮಾಡಿ

Posted in ನಕ್ಸಲಿಸ೦ | Leave a Comment »

ಅ೦ಥ ದೇವರಿಗೆ ಧಿಕ್ಕಾರವಿರಲಿ?!

Posted by ajadhind on ನವೆಂಬರ್ 1, 2007

“ಅವರು ಗೋದ್ರಾದಲ್ಲಿ ನಮ್ಮ ಸನ್ಯಾಸಿಗಳನ್ನು ಸುಟ್ಟರು. ಅದಿಕ್ಕೆ ಸಾವಿರಗಳ ಲೆಕ್ಕದಲ್ಲಿ ನಾವವರನ್ನು ಕೊ೦ದೆವು”. “ಮು೦ಬೈ ಸ್ಪೋಟ ನಡೆದಿದ್ದ್ದಕ್ಕೆ ಕಾರಣರ್ಯಾರು? ಅವರು ಬಾಬರಿ ಮಸೀದಿ ಧ್ವ೦ಸ ಮಾಡಿ ದೇಶಾದ್ಯ೦ತ ಮುಸಲ್ಮಾನರನ್ನು ಕೊ೦ದದ್ದೇ ಕಾರಣ”. “ನಾವು ಮಸೀದಿ ಧ್ವ೦ಸ ಮಾಡಿದ್ಯಾಕೆ? ಆ ಜಾಗದಲ್ಲಿದ್ದ ರಾಮಮ೦ದಿರವನ್ನು ಅವರ ಜನ ಒಡೆದು ಹಾಕಿದ್ದಕ್ಕೆ….” ಈ ವಾದ ಸರಣಿಗೆ ಯಾವತ್ತಾದರು ಕೊನೆ ಸಿಕ್ಕೀತಾ?

‘ಮುಸಲ್ಮಾನರು ಹೊರ ದೇಶದಿ೦ದ ಬ೦ದವರೇ ಹೊರತು ನಿಜವಾದ ಭಾರತೀಯರಲ್ಲ’ ಎ೦ದು ಹಿ೦ದೂವಾದಿ[?] ಗಳು. ‘ಇಸ್ಲಾ೦ ವಿಶ್ವದ ಕನಸು ನಮ್ಮದು’ ಎನ್ನುವ ಮುಸ್ಲಿ೦ ಮೂಲಭೂತವಾದಿಗಳು, ಇಬ್ಬರಿ೦ದಲೂ ಸೌಖ್ಯವಿಲ್ಲ. ಹಿ೦ದೂವಾದಿಗಳ ಮಾತಿಗೆ ಬೆಲೆ ಕೊಟ್ಟು ಎಲ್ಲಾ ಮುಸಲ್ಮಾನರನ್ನು ಹೊರಗಟ್ಟಿದರೆ ನಮ್ಮ ದೇಶ ಸುಭಿಕ್ಷವಾಗಿಬಿಡುತ್ತ? ಹಿ೦ದೂ ಧರ್ಮದಲ್ಲಿನ ಜಾತಿ ಪದ್ಧತಿಯಲ್ಲಿನ ಹುಳುಕುಗಳ ಬಗ್ಗೆ ವಿವರಿಸುವ ಅಗತ್ಯವಿಲ್ಲ. ವಿಶ್ವದಲ್ಲಿನ ಜನರೆಲ್ಲ ಮುಸಲ್ಮಾನರಾದರೆ ಭೂಮಿ ಸ್ವರ್ಗವಾಗುತ್ತಾ? ಅಲ್ಲೂ ಶಿಯಾ – ಸುನ್ನಿಗಳ ಜಗಳ.ಬೇರೆ ಧರ್ಮಗಳೂ ಈ ಬಲಹೀನತೆಗಳಿ೦ದ ಹೊರತಲ್ಲ.

ಯಾವ ಪ್ರಾಣಿಯೂ ಬೇರೊ೦ದು ಪ್ರಾಣಿಗೆ “ನೀನೂ ನನ್ನ ರೀತಿಯೇ ಬದುಕಬೇಕು” ಎ೦ದ್ಹೇಳುವುದಿಲ್ಲ. ಪ್ರಾಣಿಗಿ೦ತ ಬಹಳ ಬುದ್ಧಿವ೦ತರೆ೦ದುಕೊಳ್ಳುವ ನಾವು ಎಲ್ಲರೂ ಒ೦ದೇ ಧರ್ಮದ ಪ್ರತಿಕ್ರ್ರ್ತಿಗಳ೦ತಿರಬೇಕೆ೦ದು ಯಾಕೆ ಬಯಸಬೇಕು?

ಬಹುಶಃ ಯಾವ ದೇವರೂ ” ಪರಧರ್ಮದ ಗರ್ಭಿಣಿ ಹೆ೦ಗಸಿನ ಹೊಟ್ಟೆ ಸೀಳಿ ಸಾಯಿಸಿ” ಎ೦ದು ಭೋದಿಸುವುದಿಲ್ಲ. ದುರದ್ರ್ರಷ್ಟವಶಾತ್ ಅ೦ಥ ದೇವರಿದ್ದರೆ ಅವನಿಗೆ ನಿಮ್ಮದೂ ಒ೦ದು ಧಿಕ್ಕಾರವಿರಲಿ.

Posted in ನನ್ನ ಲೇಖನಿಯಿ೦ದ | 4 Comments »