ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for ಏಪ್ರಿಲ್, 2010

Press Release.

Posted by ajadhind on ಏಪ್ರಿಲ್ 29, 2010

bjp_eviction

Advertisements

Posted in ಕರ್ನಾಟಕ, ಪತ್ರಿಕಾ ಪ್ರಕಟಣೆ | Leave a Comment »

ಅವರನ್ನು ಅರ್ಥೈಸಿಕೊಳ್ಳುತ್ತ.

Posted by ajadhind on ಏಪ್ರಿಲ್ 24, 2010

[translation of goutham navlakha’s Days and Nights In the Heartland Of Rebellion]
ಅಧ್ಯಾಯ 2 .
ಮೊದಲ ಕೆಲವು ದಿನ, ನನ್ನೊಡನೆ ಮಾತನಾಡಲು ಜನರು ಹಿಂಜರಿಯುತ್ತಿದ್ದರು. ನಾನು ಭಾರತೀಯನ ? ಹೌದಾದಲ್ಲಿ ಜಾನ್ ಮಿರ್ದಾಲ್‌ನ ಜೊತೆ ಅವನ ಭಾಷೆಯಲ್ಲಿ ಸಂಭಾಷಿಸಲು ಹೇಗೆ ಸಾಧ್ಯ? ಜೊತೆಗೆ ಅವರಿಗೆ ಹಿಂದಿ ಭಾಷೆ ಸರಾಗವಾಗಿ ಬರುತ್ತಿರಲಿಲ್ಲ, ನನಗೆ  ಚತ್ತೀಸ್ಗಡಿ ತಿಳಿಯುತ್ತಿತ್ತಾ? ಎಂಬ ಪ್ರಶ್ನೆಗಳಿದ್ದವು. ಗೋಂದಿ ಮತ್ತು ಕೊಯಮ್ ಭಾಷೆಗಳು ನನಗೆ ತಿಳಿಯುವುದಿಲ್ಲ ಎಂಬುದರ ಅರಿವಿತ್ತು ಅವರಿಗೆ. ಆದರೆ ಕೆಲವು ದಿನಗಳ ನಂತರ, ಕುತೂಹಲ ಕಡಿಮೆಯಾಗಿ ನನ್ನೊಡನೆ ಸಂವಹಿಸಲಾರಂಭಿಸಿದರು. ನಾನು ಹಿಂದಿಯಲ್ಲಿ ಬರೆಯಬಲ್ಲೆ ಮಾತನಾಡಬಲ್ಲೆ ಎಂದವರಿಗೆ ತಿಳಿಯಿತು ಮತ್ತು ನಾನು ವಿದೇಶದಲ್ಲಿ ನೆಲೆಸಿದ್ದ ಭಾರತೀಯ, ಈಗ ಮತ್ತೆ ದೆಹಲಿಯಲ್ಲಿ ವಾಸವಾಗಿದ್ದೇನೆ ಎಂದು ತಿಳಿದ ನಂತರ ನನಗೂ ಅವರ ನಡುವೆ ಒಂದು ಸ್ಥಳ ಸಿಕ್ಕಿತು. ನಮ್ಮ ನಡುವಿನ ಅಂತರ ಜೊತಜೊತೆಯಲಿ ಹಾಡಲಾರಂಭಿಸಿದ ಮೇಲೆ ಕಡಿಮೆಯಾಯಿತು. ದೆಹಲಿಯಲ್ಲಿರುವ ಜನರ ಬಗ್ಗೆ ಬಹಳಷ್ಟು ಪ್ರಶ್ನೆ ಕೇಳಿದರು. ಅಲ್ಲಿನ ಜನ ಕೆಲಸ ಮಾಡುತ್ತಾರಾ? ಎಷ್ಟು ಸಂಪಾದಿಸುತ್ತಾರೆ? ಅವರ ಜೀವನ ರೀತಿ ಹೇಗೆ? ಮಾರ್ಕ್ಶ್ ಮತ್ತು ಎಂಗೆಲ್ಸ್ ನ ವಾಸಸ್ಥಾನವಾಗಿದ್ದರೂ ಯುರೋಪಿನಲ್ಲಿ ಕ್ರಾಂತಿ ಯಾಕೆ ಯಶಸ್ವಿಯಾಗಲಿಲ್ಲಿ? ಅಲ್ಲಿ ವರ್ಗ ಸಂಘರ್ಷ ಇಲ್ಲವಾ? ತಾಲೀಬಾನಿ ಮತ್ತು ಜೆಹಾದಿಗಳ್ಯಾಕೆ ಮಸೀದಿಗಳಿಗೆ ಬಾಂಬ್ ಇಟ್ಟು ತಮ್ಮದೇ ಜನರ ಮೇಲೆ ಆಕ್ರಮಣ ಮಾಡುತ್ತಾರೆ? ಅಮೇರಿಕದ ಸೇನೆಯ ಮೇಲ್ಯಾಕೆ ಮಾಡುವುದಿಲ್ಲ? ಕಾಶ್ಮೀರದಲ್ಯಾಕೆ ವಿಮೋಚನೆಗೆ ಹೋರಾಡಲು ಒಂದೇ ಪಕ್ಷದ ನೇತ್ರತ್ವವಿಲ್ಲ? ಪ್ರತಿ ಪ್ರಶ್ನೆಯೂ ಉತ್ತರ ಬಯಸುತ್ತಿತ್ತು. ಉತ್ತರವೀಯಲು ಶ್ರಮದ ಅವಶ್ಯಕತೆಯಿತ್ತು. ಮೂವತ್ತು ವರ್ಷದ ಚಳುವಳಿ ಕಾಡಿನ ಹೊರಗಿನ ಪ್ರಪಂಚದ ಅರಿವು ಮೂಡಿಸಿದೆ ಅವರಲ್ಲಿ. ಪ್ಯಾಲೆಸ್ತೇನ್, ಇರಾಕ್, ಶ್ರೀಲಂಕಾ, ಆಪ್ಘಾನಿಸ್ತಾನ, ಕಾಶ್ಮೀರ, ನಾಗಾ ಜನ, ಮಣಿಪುರ ಮತ್ತು ಅಸ್ಸಾಮಿನಲ್ಲಿ ಜನರು ದಬ್ಬಾಳಿಕೆಯ ವಿರುದ್ದ ಹೋರಾಡುತ್ತಿರುವುದರ ಅರಿವಿದೆ. ಸುತ್ತಮುತ್ತಲಿಂದ ಆಕ್ರಮಿಸಲ್ಪಟ್ಟಿದ್ದರು ಅವರ ಮನಸ್ಸುಗಳು ಕುಗ್ಗಿಲ್ಲ. ನನಗೆ ನೆನಪಾಯಿತು, ವಿಧ್ಯಾರ್ಥಿ ಜೀವನದಲ್ಲಿ ನಾನು ಕಂಡು ಕೊಂಡಿದ್ದ ಸತ್ಯ – ಹೋರಾಟ ಮಾಡುವ ಜನ ಹೆಚ್ಚು ಭಾವಜೀವಿಗಳಾಗಿರುತ್ತಾರೆಂದು.

ವಿಶ್ವಮಾನ್ಯ ಭಾಷೆ ಮಾತನಾಡುವ – ತಮ್ಮ ಹೋರಾಟಗಳನ್ನು ಇತರ ಹೋರಾಟಗಳೊಂದಿಗೆ ಸಮೀಕರಿಸಿ ಮಾತನಾಡಬಲ್ಲರೂ. ಇನ್ನೊಂದೆಡೆ ಸಂಕುಚಿತ ದೃಷ್ಟಿಕೋನ ಹೊಂದಿರುವವರು ತಮ್ಮ ಮತ್ತು ಇತರರ ಹೋರಾಟದ ನಡುವೆ ಅಂತರ ಬೆಳೆಸಿಕೊಳ್ಳುವರು. ನನಗೆ ಅನ್ನಿಸಿದಂತೆ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಭಾರತದ ಬುದ್ಧಿಜೀವಿಗಳು ಆಶ್ಚರ್ಯವೆಂಬಂತೆ ಜನಾತನ ಸರಕಾರದಡಿಯಲ್ಲಿ ಭಾರತದ ಕಾಡಿನಲ್ಲಿ ವಾಸಿಸುತ್ತಿರುವ ಜನರಿಗಿಂತ ಹೆಚ್ಚು ಸಂಕುಚಿತ ಮನೋಭಾವ ಹೊಂದಿದ್ದಾರೆ. ಕಾಡಿನಲ್ಲಿರುವವರಿಗೆ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಅರಿವಿದೆ, ಅದೇ ನಗರ ಕೇಂದ್ರಿತ ಜನರಲ್ಲಿ ಮಾಹಿತಿ ಲಭ್ಯವಿದ್ದರು ಕೂಡ – ಒಂದೋ ತಿಳಿಯಲು ಆಸಕ್ತಿಯಿಲ್ಲ ಅಥವಾ ತಿಳಿದ ಮೇಲೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಬಸ್ತಾರಿನಲ್ಲಿ ಇತ್ತೀಚೆಗೆ ಶುರುವಾಗಿರುವ ಯುಧ್ಧದ ಬಗ್ಗೆ ಮೂರು ವಾದಗಳನ್ನು ಕೇಳಿದೆ, ಗೆರಿಲ್ಲಾ ವಲಯ ಮತ್ತು ಸುತ್ತಮುತ್ತಲಿನ ಆದಿವಾಸಿ ಜನಗಳ ಜೊತೆ ಮಾತನಾಡಿದಾಗ. ಮೊದಲನೆಯದಾಗಿ, ಸರಕಾರದಿಂದ ಘೋಷಿಸಲಾಗಿರುವ ಈ ಯುದ್ಧ ಆದಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳಲು ಹವಣಿಸುತ್ತಿರುವ ದೊಡ್ಡ ಕಂಪನಿಗಳ ಸಲುವಾಗಿ. ಒಂದೋ ಒಪ್ಪಿಗೆಯನಿತ್ತು ಕೊಟ್ಟಷ್ಟು ಪರಿಹಾರ ತೆಗೆದುಕೊಂಡು ಜಾಗ ಖಾಲಿ ಮಾಡಬೇಕು, ಇಲ್ಲವಾದಲ್ಲಿ ಭೂಮಿ ಕಳೆದುಕೊಳ್ಳುವುದಷ್ಟೇ  ಅಲ್ಲ ಯಾವುದೇ ಪರಿಹಾರ ದೊರಕದು ಎಂದು ಬೆದರಿಕೆಯೊಡ್ಡಲಾಗಿದೆ [ ಸಿ.ಪಿ.ಐ ಬೆಂಬಲಿತ ಆದಿವಾಸಿ ಮಹಾಸಭಾ ಹೆಚ್ಚು ಪರಿಹಾರವನ್ನೂ ಒಪ್ಪಿಕೊಳ್ಳಿ ಎಂದು ಜನರನ್ನು ಒತ್ತಾಯಿಸುತ್ತಿರುವ ವರದಿಗಳಿವೆ] ಇವರ ಈ ಹೇಳಿಕೆ ನನ್ನಲ್ಲಿ ಕುತೂಹಲವನ್ನು ಹೆಚ್ಚಿಸಿತು. ಅದರ ಬಗ್ಗೆ ಮತ್ತಷ್ಟು ವಿವರ ಕಲೆಹಾಕಲಾರಂಭಿಸಿದೆ. ಪರಿಹಾರ ಸಿಗುವುದಿಲ್ಲ ಎಂಬುದರ ಅರ್ಥವೇನು? “ಕಂಪೆನಿಯ ವಕ್ತಾರರು ನಮಗೆ ಎಚ್ಚರಿಕೆ ನೀಡಿದ್ದಾರೆ, ಅವರು ಕೊಡುವ ಪರಿಹಾರವನ್ನು  ಒಪ್ಪಿಕೊಳ್ಳದಿದ್ದಲ್ಲಿ ಆ ಹಣ ಇತರರ ಕೈಗೆ ಸೇರುತ್ತೆ ಎಂದು” ನಂತರ ವಿವರಿಸಿದರು, ನಕಲಿ ಚೆಕ್ಕುಗಳು, ಚೆಕ್ಕುಗಳು ಬೌನ್ಸ್ ಆಗಿರುವುದು, ಭೂಮಿಯ ಒಡೆಯರಿಗಲ್ಲದೇ ಇತರರಿಗೆ ಚೆಕ್ಕು ವಿತರಿಸಿರುವುದು – ಇವೆಲ್ಲಾ ಆಗಾಗ್ಯೆ ನಡೆಯುವ ಘಟನೆಗಳೆಂದು. ಎರಡನೆಯದಾಗಿ, ಅವರು ಭೂಮಿಗೆ ಬದಲಾಗಿ ಕೊಡುವ ಹಣದ ರೂಪದ ಪರಿಹಾರ ಎಷ್ಟರ ಮಟ್ಟಿಗೆ ಸಾಧು? ಅವರ ಭೂಮಿ ಇಲ್ಲಿಯವರೆಗೆ ಅವರ ಜೀವನವನ್ನಷ್ಟೇ ಅಲ್ಲ ಮುಂಬರುವ ಪೀಳಿಗೆಯ ಜೀವನಕ್ಕೂ ಭದ್ರತೆ ಒದಗಿಸುತ್ತದೆ. ಇದರೊಟ್ಟಿಗೆ ಇವರ ಜೀವನಕ್ಕೆ ಆಧಾರವಾಗಿರುವುದು ಕೇವಲ ಭೂಮಿಯಷ್ಟೇ ಅಲ್ಲ, ಮರಗಳಾದ ಸುಳ್ಫಿ, ಮಾವು, ಹುಣಿಸೆ – ಇವೆಲ್ಲ ಅವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ಸಹಾಯ ಮಾಡಿವೆ, ಹಸಿವನ್ನು ನೀಗಿಸುವುದರ ಜೊತೆಗೆ. ಮೂರನೆಯದಾಗಿ ಸರಕಾರ ಹೇಳುತ್ತಿರುವ ಅಭಿವೃಧ್ಧಿ, ವಿಕಾಸ ಕೇವಲ ಬಕ್ವಾಸ್ ಮಾತುಗಳಷ್ಟೇ, ಬೈಲಾದಿಲ್ಲಾದಲ್ಲಿ ನಡೆದಿರುವುದನ್ನು ನೋಡಿದ ನಂತರ. ಇಷ್ಟೆಲ್ಲಾ ವರುಷಗಳಲ್ಲಿ ಆದಿವಸಿಗಳು ತಮ್ಮ ಜೀವನೋಪಾಯವನ್ನು ತಾವೇ ನಡೆಸಿಕೊಂಡಿದ್ದಾರೆ, ಸರಕಾರಗಳು ಮಾಡಿದ ಸಹಾಯ ಕಿಂಚಿತ್ ಗಿಂತಲೂ  ಕಡಿಮೆ. ಆದರೀಗ ಕಂಪನಿಗಳಿಗೆ ಭೂಮಿ ಬೇಕಾದಾಗ ‘ಅಭಿವೃದ್ಧಿಯ ಮಾತನಾಡುತ್ತದೆ. ನಮ್ಮನ್ನು ನಮ್ಮ ಪಾಡಿಗೆ ಬಿಡಲಿ ಎನ್ನುತ್ತಾರವರು. ಒಬ್ಬ ಹಿರಿಯ ಆದಿವಾಸಿ ಹೇಳಿದ ” ಸರಕಾರಕ್ಕೆ ಅಭಿವೃಧ್ಧಿಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದಾರೆ ಇಷ್ಟೆಲ್ಲಾ ವರ್ಷಗಳು ವ್ಯವಸಾಯವನ್ನು ಅಭಿವೃಧ್ಧಿ ಪಡಿಸಲು ಅವರಿಗಿದ್ದ ಅಡ್ಡಿಯಾದರೂ ಏನು?”

ಕಾಡಿನೊಳಗೆ ಹಿರಿಯರ ಬಳಿ ಸಭೆ ನಡೆಸುತ್ತಿದ್ದಾಗ ಅವರಾಡಿದ ಮಾತುಗಳು ಮನ ತಟ್ಟಿತು. “ನಮಗೆ ವಯಸ್ಸಾಗಿದೆ, ಜೀವನ ಜೀವಿಸಿಯಾಯಿತು. ಆದ್ದರಿಂದ ಸರಕಾರ ಈ ಭೂಮಿ ಪರಭಾರೆ ಮಾಡಿಕೊಳ್ಳುವುದರ ವಿರುದ್ಧ ನನ್ನ ಪ್ರಾಣ ಮುಡಿಪಾಗಿಡಲೂ  ತಯಾರು. ನಾನಿದನ್ನು ಖಂಡಿತ ಮಾಡ್ತೀನಿ. ನಾವೆಲ್ಲರೂ” ತನ್ನ ತಲೆಮಾರಿನ ಇತರರೆಡೆಗೆ ಕೈ ತೋರುತ್ತಾ ಹೇಳಿದ ” ಇಲ್ಲೇ ಇರ್ತೀವಿ ಮತ್ತು ಹೋರಾಡುತ್ತಿವಿ, ನೋಡೋಣ ನಮ್ಮಲ್ಲೆಷ್ಟು ಜನರನ್ನು ಸೈನಿಕರು ಸಾಯಿಸುತ್ತಾರೆಂದು. ನಮ್ಮೆಲ್ಲರನ್ನು ಸಾಯಿಸಬಲ್ಲರಾ ಅವರು?” ” ನಮಗೆ ಹೋರಾಡುವುದು ತಿಳಿದಿದೆ” ಸಿಟ್ಟು ಕಣ್ಣಿಗೆ ಕಾಣುತ್ತಿತ್ತು. ಹೊರಗಿನ ಜನರಿಗೆ ಏನು ಹೇಳಬೇಕೆಂದು ಕೇಳಿದೆ. ” ದಯವಿಟ್ಟು ಅವರಿಗೆ ಹೇಳಿ ಅವರ ಸರಕಾರ ಸುಳ್ಳಾಡುತ್ತಿದೆಯೆಂದು. ಇವತ್ತು ನನ್ನ ಭೂಮಿ ಮತ್ತು ಕಾಡು ಕಸಿಯುತ್ತಾರೆ , ಇವರ ಈ ಕಾರ್ಯ ನಾಳೆ ನನ್ನ ಜೀವ ಕಸಿಯುತ್ತದೆ” ಇದರ ಅರ್ಥವೇನೆನ್ದು ಕೇಳಿದೆ? ” ಈ ಕಾಡು ಮತ್ತು ಭೂಮಿಯೇ ನಮ್ಮ ಜೀವ”

ಭಾರತದ ಗೃಹಮಂತ್ರಿ ಪಿ. ಚಿದಂಬರಂ ತೆಹೆಲ್ಕಾಗೆ ಹೇಳಿದ್ದನ್ನು ಓದಿ ಹೇಳಿದೆ ” ನನ್ನ ಮನಕ್ಕೆ ಸಂಪೂರ್ಣ ಮನವರಿಕೆಯಾಗಿದೆ, ಯಾವುದೇ ದೇಶ ತನ್ನಲ್ಲಿರುವ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲವನ್ನು ಉಪಯೋಗಿಸದೆ ಅಭಿವೃಧ್ಧಿ ಹೊಂದಲಾರದು. ಗನಿಗಳಲ್ಲಿನ ಆಸ್ತಿಯನ್ನು ಕೊಯ್ಲು ಮಾಡಬೇಕು ಮತ್ತು ಜನರಿಗಾಗಿ ಉಪಯೋಗಿಸಬೇಕು. ಆದಿವಾಸಿಗಳು ಬೇಟೆಗಾರರಾಗಿಯೇ ಉಳಿಯಬೇಕೆಂದು ಬಯಸುತ್ತಿರಾ? ಅವರನ್ನು anthropology ವಸ್ತು ಸಂಗ್ರಹಾಲಯದಲ್ಲಿ ಇಡಲು ಬಯಸುತ್ತಿರಾ? ಹೌದು , ಗನಿಗಳಲ್ಲಿನ ವಸ್ತುಗಳನ್ನು ಇನ್ನು ಹತ್ತು ಸಾವಿರ ವರ್ಷಗಳು ಭೂಮಿಯಲ್ಲೇ ಇರುವಂತೆ ಮಾಡಬಹುದು, ಆದರದು ಈ ಜನರಿಗೆ ಅಭಿವೃದ್ಧಿ ತರುತ್ತದಾ? ಅವರು ನಿಯಂ ಗಿರಿ ಬೆಟ್ಟವನ್ನು ಪೂಜಿಸುತ್ತಾರೆ ಎನ್ನುವ ಸಂಗತಿಯನ್ನು ಗೌರವಿಸೋಣ, ಆದರದು ಅವರ ಕಾಲಿಗೆ ಶೂ ಒದಗಿಸುತ್ತದೆಯೇ? ಅಥವಾ ಅವರ ಮಕ್ಕಳಿಗೆ ಶಾಲೆ? ಅವರು ಪೌಷ್ಟಿಕಾಮಶದಿಂದ ನರಳುತ್ತಿರುವುದನ್ನು ತಪ್ಪಿಸುತ್ತದೆಯೇ? ಆರೋಗ್ಯಡೆದೆಗಿನ ಗಮನ? ಗಣಿಗಾರಿಕೆಯ ಬಗೆಗಿನ ಚರ್ಚೆ ಶತಮಾನಗಳಿಂದ ನಡೆದಿದೆ. ಅದರಲ್ಲಿ ಹೊಸದೇನೂ ಇಲ್ಲ.”

“ನಾವಿಲ್ಲಿ ಹಸಿವಿನಿಂದ ಸಾಯುತ್ತಿಲ್ಲ” ಅವರು ಹೇಳಿದರು. ಆದರೆ ವಲಯದ ಹೊರಗಿರುವವರು? ” ಜನಾತನ ಸರಕಾರವನ್ನು ತಲುಪಲು ಅವಕಾಶವನ್ನಿತ್ತರೆ ಅವರಿಗೂ ಅನುಕೂಲವಾಗುತ್ತೆ” ನಿಮಗೆ ಅಭಿವೃದ್ಧಿ ಬೇಡವಾ? ನಾನು ಒತ್ತಾಯಿಸಿ ಕೇಳಿದೆ. ” ಇಲ್ಲ ಲೂಟಿ ಮಾಡಲು ಹೊರಗಿನಿಂದ ದೊಡ್ಡ ಬಂಡವಾಳಶಾಹಿಗಳು ಬರುವುದು ಬೇಡ. ಬೈಲಾದಿಲ್ಲಾದಲ್ಲಿ ಏನಾಯಿತೆಂದು ನಮಗೆ ತಿಳಿದಿದೆ” ಈ ವಾಕ್ಯ ಬಹುಮುಖ್ಯವಾದುದು ” ನೋಡಿ ಅವರು ಬೈಲಾದಿಲ್ಲಾದಲ್ಲಿ ಏನು ಮಾಡಿದರು”

Posted in ಅನುವಾದ | Tagged: , | Leave a Comment »

Days And Nights in the Heartland Of Rebellion.

Posted by ajadhind on ಏಪ್ರಿಲ್ 20, 2010

translation of article by gautham navlakha published in sanhati

ಅಧ್ಯಾಯ 1

ಗೆರಿಲ್ಲಾ ವಲಯದೊಳಗೆ.

ಮಾವೋವಾದಿಗಳು ಬಸ್ತಾರಿನ ಗೆರಿಲ್ಲಾ ವಲಯದೊಳಗೆ ನಡೆಸುತ್ತಿರುವ ಜನಾತನ ಸರಕಾರಕ್ಕೆ ಕಾಲಿರಿಸಿದಾಗ ಮೊದಲು ಗೋಚರಿಸುವ ಸಂಗತಿ ಅವರ ಸ್ವಾಗತದ ರೀತಿ. ಎಲ್ಲರೂ – ಹಿರಿಯರು, ಕಿರಿಯರು, ಗಂಡಸರು – ಹೆಂಗಸರು, ಹಳ್ಳಿಯವರು ಅಥವಾ ಪಕ್ಷದ ಸದಸ್ಯರು ಕೈಕುಲುಕಿ, ಮುಷ್ಠಿ ಮೇಲೆ ಮಾಡಿ “ಲಾಲ್ ಸಲಾಂ” ಎಂದು ವಂದಿಸುತ್ತಾರೆ. ಎರಡನೆಯ ಸಂಗತಿ – ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ [ ಪಿ.ಎಲ್.ಜಿ.ಏ] ಯ ಪ್ಲಟೂನ್ ಅಥವಾ ಕಂಪನಿಗಳಲ್ಲಿರುವ ಹೆಣ್ಣುಮಕ್ಕಳ ಸಂಖ್ಯೆ. ಬಹಳಷ್ಟು ಪ್ಲಟೂನ್ಗಳನ್ನೂ ಹೆಣ್ಣುಮಕ್ಕಳೇ ನಡೆಸುತ್ತಾರೆ. ನಮಗೆ ರಕ್ಷಣೆ ಕೊಡಲು ಬಂದಿದ್ದ ಪ್ಲಟೂನ್ ನ ಮುಂದಾಳು ಹೆಣ್ಣೇ ಇದ್ದಳು. ಮುಂದಾಳತ್ವ ಹೆಸರಿಗಷ್ಟೇ ಸೀಮಿತವಲ್ಲ. ಕಷ್ಟದ ಕೆಲಸಗಳಲ್ಲೂ ಗಂಡಿಗೆ ಸರಿಸಮಾನವಾಗಿ ದುಡಿಯುತ್ತಾರೆ. ಕಟ್ಟಿಗೆ, ನೀರಿನ ಸಂಗ್ರಹ, ಅಡಿಗೆ ಎಲ್ಲದರಲ್ಲೂ ಸಮಪಾಲು. ಪ್ರತಿಯೊಬ್ಬರೂ ೨೦ – ೨೫ ಕೆ.ಜಿ.ಯಷ್ಟು ತೂಕದ ಸಾಮಾನನ್ನು ಹೊರುತ್ತಾರೆ – ಶಸ್ತ್ರಾಸ್ತ್ರ, ಅಡಿಗೆ ಪಡಿತರ ಮತ್ತು ತಮ್ಮ ದೈನಂದಿನ ಉಪಯೋಗದ ಕಿಟ್. ಇಬ್ಬರಿಗೂ ಹೊಲಿಗೆಯಲ್ಲಿ ಪರಿಣಿತಿಯಿದೆ. ಕೇವಲ ರಿಪೇರಿ ಕೆಲಸಗಳಿಗೆ ಸೀಮಿತವಾಗದೆ ತಮ್ಮ ಬಟ್ಟೆ, ಪುಸ್ತಕ ಗುಂಡು ಇತ್ಯಾದಿ ವಸ್ತುಗಳನ್ನು ಹೊರುವ ಬ್ಯಾಗುಗಳನ್ನು ಸ್ವತಃ ಅವರೇ ಹೊಲೆದುಕೊಳ್ಳುತ್ತಾರೆ. ಪಟ್ಟಿ ಕಿತ್ತು ಬಂದಿದ್ದ ನನ್ನ ಬೆನ್ನ ಚೀಲವನ್ನು ಪ್ಲಟೂನ್ ನ ಒಬ್ಬ ಯುವಕ ಸರಿಪಡಿಸಿದ – ಅಚ್ಚುಕಟ್ಟಾದ ಕೆಲಸವಾಗಿತ್ತದು. ಸಮವಸ್ತ್ರಗಳು ಗೆರಿಲ್ಲಾ ವಲಯದೊಳಗೆ ಹೊಲೆದುದಾಗಿತ್ತು. ಶೂ ಮತ್ತಿತರ ದಿನಚರಿ ವಸ್ತುಗಳು ಹೊರಗಿನ ಮಾರುಕಟ್ಟೆಯವು. ಮೂರನೇ ಸಂಗತಿ ಅವರ ಸ್ವಚ್ಛತೆ. ಕುಡಿಸಿದ ನೀರನ್ನು ಉಪಯೋಗಿಸುತ್ತಿದ್ದರು. ಶೌಚಕ್ಕೆ ಕ್ಯಾಂಪ್ನಿಂದ ಒಂದಷ್ಟು ದೂರದಲ್ಲಿ ಗುಂಡಿ ತೆಗೆದಿರುತ್ತಿದ್ದರು. ನನ್ನ ಸಹಚರ ಜಾನ್ ಮಿರ್ದಾಲ್ ಅದನ್ನು ನೋಡಿ ಸ್ವಿಡನ್ನಿನ ಮಿಲಿಟರಿ ಶಿಸ್ತನ್ನು ನೆನಪಿಸಿಕೊಂಡ. ನಾಲ್ಕನೆಯದಾಗಿ, ಬಹು ಮುಖ್ಯವಾಗಿ ಹಗಲಿರಲಿ, ರಾತ್ರಿಯಿರಲಿ ಹೆಚ್ಚುಕಡಿಮೆ ಎಲ್ಲಾ ಪಿ.ಎಲ್.ಜಿ.ಏ. ಸದಸ್ಯರು ಪುಸ್ತಕ ಓದುತ್ತಲೋ ಅಥವಾ ಬರೆಯುತ್ತಲೋ ಇರುತ್ತಿದ್ದರು.. ಜನಾತನ ಸರಕಾರದ ಪ್ರತಿ ವಿಭಾಗವೂ ಗೊಂಡಿ/ ಕೊಯಮ್ ಭಾಷೆಯಲ್ಲಿ ಪತ್ರಿಕೆಗಳನ್ನು ಹೊರತರುತ್ತದೆ. ಒಟ್ಟಾರೆ ದಂಡಕಾರಣ್ಯದಲ್ಲಿ [ ಡಿ.ಕೆ] ೨೫ ಪತ್ರಿಕೆಗಳು ನಿಯಮಿತವಾಗಿ ಪ್ರಕಟಗೊಳ್ಳುತ್ತವೆ. ಎಲ್ಲವೂ ವಲಯದೊಳಗೆ ಪ್ರಕಟವಾಗಿ ವಿತರಿಸಲ್ಪಡುತ್ತದೆ. ಖುದ್ದಾಗಿ ನಾನೇ ೨೫-೨೭ ಜನವರಿಯಂದು ಘೋಷಿಸಲಾಗುತ್ತಿದ್ದ ಮೂರೂ ದಿನದ ಬಂದ್ ಗೆ ಕರಪತ್ರಗಳು ಪ್ರಕಟವಾಗುತ್ತಿದ್ದುದನ್ನು ಕಂಡೆ – ಬಂದ್ ಗೆ ಒಂದು ವಾರದ ಮೊದಲು. ವರದಿಗಾರಿಕೆಯಲ್ಲಿ ಜನರಿಗೆ ಯಾವುದೇ ತೊಂದರೆಯಾಗದಿದ್ದರೂ, ವಿಶ್ಲೇಷಣೆ ಮಾಡುವಾಗ ತೊಡಕುಗಳಿವೆ. ಈ ತೊಡಕನ್ನು ಬಗೆಹರಿಸುವ ರೀತಿ? ವಿಶ್ಲೇಷಣೆಯ ತೊಂದರೆಯನ್ನು ಗುಂಪಿನಲ್ಲಿ ಚರ್ಚಿಸುವ ಮೂಲಕ ಬಗೆಹರಿಸಲಾಗುತ್ತೆ. ಒಂದು ಲೇಖನವನ್ನು ಜೋರುದನಿಯಲ್ಲಿ ಓದಿದ ನಂತರ, ಚರ್ಚೆಯಲ್ಲಿ ಭಾಗವಹಿಸಲು ಎಲ್ಲರನ್ನೂ ಪ್ರೋತ್ಸಾಹಿಸಲಾಗುತ್ತೆ. ತಮಗೆ ಅರ್ಥವಾದಷ್ಟನ್ನು ಪ್ರತಿಯೊಬ್ಬರೂ ವಿವರಿಸಿದ ನಂತರ ಅರ್ಥಪೂರ್ಣ ಚರ್ಚೆ ನಡೆಸಿ ಲೇಖನವನ್ನು ಅರ್ಥೈಸಿಕೊ ಳ್ಳಲಾಗುತ್ತೆ. ವಿದ್ಯಾಭ್ಯಾಸಕ್ಕೆ ಪ್ರಾಧಾನ್ಯತೆ, ಪ್ರೋತ್ಸಾಹ ಎರಡೂ ಇದೆ.ಜನಾತನ ಸರಕಾರದಿಂದ ಐದನೇ ತರಗತಿಯವರೆಗೆ ನಾಲ್ಕು ಪುಸ್ತಕಗಳನ್ನು ತಯಾರಿಸಲಾಗಿದೆ [ ಗಣಿತ, ಸಮಾಜಶಾಸ್ತ್ರ, ರಾಜಕೀಯ ಮತ್ತು ಹಿಂದಿ] ಮತ್ತೂ ನಾಲ್ಕು ತಯಾರಿಯಲ್ಲಿದೆ[ಡಿ.ಕೆ ಯ ಇತಿಹಾಸ, ಸಂಸ್ಕೃತಿ, ಬಯಾಲಜಿ ಮತ್ತು ಸಾಮಾನ್ಯ ವಿಜ್ಞಾನ]

ಪಹರೆ ಕಾಯುವುದರಿಂದ ಅಡುಗೆಯವರೆಗೆ ಪ್ರತಿಯೊಬ್ಬರೂ ಸರದಿಯಂತೆ ಕಾರ್ಯನಿರ್ವಹಿಸುತ್ತಾರೆ. ನಾವವರ ಅತಿಥಿಗಲಾದ್ದರಿಂದ ನಮಗೆ ಹೆಚ್ಚು ಶ್ರಮದ ಕೆಲಸವಿರಲಿಲ್ಲ. ಅವರು ಮೊದಲು ಮಾಡುತ್ತಿದ್ದ ಕೆಲಸ ನೀರಿನ ಕುದಿಸುವಿಕೆ. ಬೈಗಿನ ಕೆಲಸಗಳು ಮುಗಿದಾಗ ಪಿ.ಟಿ.ಯ ಸಮಯ. ಎಂಟಕ್ಕೆ ತಿಂಡಿ. ತಿಂಡಿ ‘ಪೋಹಾ’ ಕಿಚ್ರಿ’ ಇತ್ಯಾದಿ. ನಂತರ ಚಹಾ. ಮಧ್ಯಾಹ್ನ ಮತ್ತು ರಾತ್ರಿಯ ಉಟಕ್ಕೆ ಅನ್ನ, ದಾಲ್ ಮತ್ತು ಪಲ್ಯ. ಸರಳ ಆಹಾರವಾದರೂ ಪೌಷ್ಟಿಕ ಆಹಾರವಾಗಿತ್ತು. ವಾರಕ್ಕೊಮ್ಮೆ ಮಾಂಸ. ಕೆಲವು ಸಲ ಒಂದಕ್ಕಿಂತ ಹೆಚ್ಚು ಬಾರಿ ಮೀನು, ಕ್ರಾಂತಿಕಾರಿ ಜನರ ಸಂಘದಿಂದ [revolutionary people’s committe – r.p.c] ಕೊಟ್ಟಿದ್ದು. ಆರ್.ಪಿ.ಸಿ. ಎಂದರೆ ಚುನಾಯಿತಗೊಂಡ ಒಂದು ಸಂಘ – ೩ -೫ ಹಳ್ಳಿಯ ಆಡಳಿತ ಒಂದು ಆರ್. ಪಿ.ಸಿ ಯ ವ್ಯಾಪ್ತಿಗೆ. ೧೪-೧೫ ಆರ್.ಪಿ.ಸಿ ಗಳು ಸೇರಿ ಒಂದು ಏರಿಯಾ ಆರ್.ಪಿ.ಸಿ. ೩-೫ ಏರಿಯಾ ಆರ್.ಪಿ.ಸಿ – ಒಂದು ಡಿವಿಷನ್.ಕೆಲವು ಸಲ ನಾನು ಅಬುಜ್ಮಾನ್ಗೆ ಪಯಣಿಸುವಾಗ ಆದಂತೆ ಕಿಚರಿಯಷ್ಟೇ ಲಭ್ಯ. ಸರಳವಾಗಿದ್ದರೂ ರುಚಿಕರ, ಪೌಷ್ಟಿಕ. ಪ್ರತಿ ಊಟದ ಜೊತೆಗೆ ಹಸಿರು ಮೆಣಸಿನಕಾಯಿ ಇರುತ್ತಿತ್ತು, ವಿಟಮಿನ್ ಸಿ ಅದರಲ್ಲಿ ಹೆಚ್ಚಿರುತ್ತೆ ಎಂದು!! ಹಾಲಿನ ಅಭಾವದಿಂದಾಗಿ ಚಹಾಗೆ ಹಾಲಿನ ಪೌಡರ್ ನ ಬಳಕೆ. ಬಾಳೆಹಣ್ಣು ಮತ್ತು ಪರಂಗಿ ಜನಾತನ ಸರಕಾರವಿರುವ ಪ್ರದೇಶಗಳಲ್ಲಿ ಹೇರಳವಾಗಿ ಸಿಗುತ್ತದೆ….. ಮಲಗಲು ನಿರ್ದಿಷ್ಟ ಸಮಯವನ್ನು ಗೊತ್ತುಪಡಿಸಿಲ್ಲವಾದರು ರಾತ್ರಿ ಹತ್ತರಷ್ಟೊತ್ತಿಗೆ ಎಲ್ಲರೂ ವಿಶ್ರಾಂತಿ ಪಡೆಯಲು ತೆರಳುತ್ತಾರೆ.ಒಂದೇ ಜಾಗದಲ್ಲಿ ಕ್ಯಾಂಪ್ ಇರುವುದಿಲ್ಲ. ಬದಲಾಗುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಹಾಸನ್ನು ನೆಲದ ಮೇಲೆ ಹಾಸಿ ಮೈಮೇಲೆ ಕಂಬಳಿ ಹೊದ್ದು ಮಲಗುತ್ತಾರೆ. ನಮಗೆ, ಅವರ ಅತಿಥಿಗಳಿಗೆ, ಪ್ಲಾಸ್ಟಿಕ್ ಹಾಸಿನ ಮೇಲೊಂದು ಶಾಲು ಹಾಕಿದ್ದರು; ಮುಂಜಾವಿನ ಮಂಜಿನಿಂದ ನಮ್ಮನ್ನು ರಕ್ಷಿಸಲು ತಲೆಮೇಲೂ ಒಂದು ಪ್ಲಾಸ್ಟಿಕ್ ಹಾಳೆ. ಬೆಳಿಗ್ಗೆ ಏಳುತ್ತಿದ್ದಂತೆ ಚಹಾ ರೆಡಿಯಾಗಿತ್ತು.

ಆಯ್ದ ಚಿತ್ರಗಳನ್ನು ನೋಡುತ್ತಾರೆ. ನಾವಲ್ಲಿದ್ದಾಗ ಎರಡು ಚಿತ್ರಗಳನ್ನು [ ಜನರ ಒತ್ತಾಯದ ಮೇಲೆ ಎಂದು ನನಗೆ ಹೇಳಿದರು] “ರಂಗ್ ದೇ ಬಸಂತಿ ” ಮತ್ತು “ಮಂಗಲ್ ಪಾಂಡೆ” ಯನ್ನು ಪ್ರದರ್ಶಿಸಿದರು. ಇದು ಪಕ್ಷದ ಹಿರಿಯ ವ್ಯಕ್ತಿ ಭೇಟಿ ಕೊಟ್ಟಾಗ, ಅದೂ ಆ ವ್ಯಕ್ತಿಯ ಬಳಿ ಲ್ಯಾಪ್ ಟಾಪ್ ಇದ್ದಾಗ ಮಾತ್ರ. ಲ್ಯಾಪ್ ಟಾಪ್? ಅವರು ಲ್ಯಾಪ್ ಟಾಪ್ ಅನ್ನು ಚಾರ್ಜ್ ಹೇಗೆ ಮಾಡುತ್ತಾರೆ? ಪ್ಲಟೂನ್ ನಲ್ಲಿಲ್ಲದ್ದಿದ್ದರೂ ಪ್ರತಿ ಕಂಪನಿಯಲ್ಲಿ ಸೋಲಾರ್ ಪ್ಯಾನಲ್ ಗಳಿವೆ, ದೀಪ ಬೆಳಗಿಸಲು, ಕಂಪ್ಯೂಟರ್ ಉಪಯೋಗಿಸಲು. ಟಿ. ವಿ ಕಾರ್ಯಕ್ರಮ ಮತ್ತು ಚರ್ಚೆಗಳನ್ನು ಯ್ಯು ಟ್ಯೂಬ್ ನಿಂದ ಡೌನ್ಲೋಡ್ ಮಾಡಿ ವಿತರಿಸಲಾಗುತ್ತೆ. ನಾನು ಭಾಗವಹಿಸಿದ ಬಹುತೇಕ ಚರ್ಚೆಗಳನ್ನು ಅವರಾಗಲೇ ನೋಡಿದ್ದರೆಂದು ತಿಳಿದು ನನಗೆ ಅಚ್ಚರಿಯಾಯಿತು. ಪರದೆಯಲ್ಲೇ ನಾನು ಹೆಚ್ಚು ಆರೋಗ್ಯವಂತನಾಗಿ ಕಾಣಿಸುತ್ತೆನೆಂದು ಕೆಲವರ ಅಭಿಪ್ರಾಯ! ಆದರೆ ಅವರ ಅಚ್ಚುಮೆಚ್ಚಿನವಳು ಅರುಂಧತಿ ರಾಯ್. ಆಕೆ ಇಂಗ್ಲೀಷ್ ಮಾತನಾಡುತ್ತಾಳೆ; ಇವರು ಹೇಗೆ ಅರ್ಥೈಸಿಕೊಳ್ಳುತ್ತಾರೆ? ಹಿರಿಯ ಕಾಮ್ರೇಡ್ ಗಳು ಅನುವಾದಿಸುತ್ತಾರೆ, ಇತರರ ಅನುಕೂಲಕ್ಕೆ. ಆಕೆಯ ಬಗ್ಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳಿದರು. ಹೌದು, ಕಾಡಿನ ಒಳಗೂ ಆಕೆಗೆ ಅಪಾರ ಅಭಿಮಾನಿ ಬಳಗವಿದೆ! ರೇಡಿಯೋ ಕೇಳುತ್ತಾರೆ; ಪಿ.ಎಲ್.ಜಿ.ಏ ಯ ಸದಸ್ಯರಿಗೆ ಸೈನಿಕರ ಮನವಿಯ ಮೇರೆಗೆ ಪ್ರಸಾರವಾಗುವ ಹಿಂದಿ ಹಾಡುಗಳ ಕಾರ್ಯಕ್ರಮ ಕೇಳುವುದು ಪ್ರಿಯಕರ ಸಂಗತಿ. ಆದರೆ ಎಲ್ಲಾ ಸಮಯದ ಮೆಚ್ಚಿನದು ಬಿ.ಬಿ.ಸಿ. ವಾರ್ತೆ; ಎಲ್ಲರೂ ಕೇಳುತ್ತಾರೆ. ಪ್ರತಿ ಬೆಳಿಗ್ಗೆ ಮತ್ತು ಸಂಜೆ. ನಕಾರಾತ್ಮಕ ಸಂಗತಿಗಳಿಗಾಗಿ ಸ್ಥಳೀಯ ರೇಡಿಯೋ ವಾರ್ತೆಯನ್ನು ಕೇಳುತ್ತಾರೆ. ನಕಾರಾತ್ಮಕ ಸಂಗತಿಯೂ ವಾರ್ತೆಯೇ ಎಂಬ ದೃಷ್ಟಿಯಿಂದ.
ಪ್ಲಟೂನ್ ನ ಪ್ರತಿ ಮುರನೆಯವನ ಬಳಿ ರೇಡಿಯೋ ಇತ್ತು. ಪತ್ರಿಕೆಗಳು ಕೆಲವು ದಿನದ ನಂತರ ತಲುಪುತ್ತಿದ್ದವು. ಬಹಳಷ್ಟು ಪುಸ್ತಕಗಳು ಅಂತರ್ಜಾಲದಿಂದ ಡೌನ್ಲೋಡ್ ಮಾಡಿಕೊಂಡವು. ಹೌದು ಕೆಲವು ಸ್ಥಳಗಳಲ್ಲಿ ಅಂತರ್ಜಾಲದ ಸೌಲಭ್ಯವು ಇದೆ. ಸೌರಶಕ್ತಿ ಬಲ್ಬುಗಳು ರಾತ್ರಿಯ ಸಮಯದಲ್ಲಿ ಓದುವವರಿಗೆ ಅನುಕೂಲಕರ ಅಥವಾ ಬೆಂಕಿಯ ಸುತ್ತ ಕುಳಿತು ಹರಟೆ.

ಮದ್ಯಪಾನ ಮತ್ತು ಧೂಮಪಾನ? ಬಸ್ತಾರಿನ ಜನಕ್ಕೆ ತಮ್ಮದೇ ಆದ ಮದ್ಯ ತಯಾರಿಸುವ ವಿಧಾನ ತಿಳಿದಿದೆ. ಸುಲ್ಫಿ ಅತ್ತು ಮಹುಹಾ ಸಾಮಾನ್ಯವಾದವು. ಅಚ್ಚರಿಯ ವಿಷಯವೆಂದರೆ ಸಾರಾಯಿ ಅಂಗಡಿಗಳನ್ನು ತೆರೆಯಲು ಅನುಮತಿ ಕೊಡದ ಪಕ್ಷ ಸಾಂಪ್ರಾದಾಯಿಕ ಮದ್ಯವನ್ನು ತಯಾರಿಸಲು ಅಡ್ಡಿ ಮಾಡಿಲ್ಲ. ಆದರೆ ಪಕ್ಷದ ಸದಸ್ಯರು ಕುಡಿಯುವುದಿಲ್ಲ. ಪಕ್ಷದ ಸದಸ್ಯರು ಧೂಮ ಮತ್ತು ಮದ್ಯಪಾನದಿಂದ ದುರವಿರಬೇಕೆಂದು ಅಪೇಕ್ಷೆ. ಮದ್ಯಪಾನವನ್ನು ಪಕ್ಷದ ಸದಸ್ಯರ ನಡುವೆ ನಿಷೇಧಿಸಲಾಗಿದ್ದರೂ ಧೂಮಪಾನವನ್ನಲ್ಲ ; ಜೊತೆಗೆ ತೆಂಡು ಎಲೆಗಳು ಬಹಳಷ್ಟು ಲಭ್ಯವಿದೆ. ಆದರೂ ಧೂಮಪಾನವನ್ನೂ ವಿರೋಧಿಸುತ್ತಾರೆ. ಜನಾತನ ಸರಕಾರ ಇವುಗಳ ವಿರುಧ್ಧ ಪ್ರಚಾರಾನ್ದೋಲನವನ್ನೂ ಕೈಗೊಳ್ಳುತ್ತದೆ. ನಾನು ಭೇಟಿಯಿತ್ತಾಗ ಹೇಳಿದಂತೆ ಇಬ್ಬರು ಸಾರ್ವಜನಿಕವಾಗಿ ಧೂಮಪಾನವನ್ನು ತ್ಯಜಿಸುವುದಾಗಿ ಘೋಷಿಸಿ ಉಳಿದವರಿಗೂ ತಮ್ಮನ್ನು ಹಿಂಬಾಲಿಸುವಂತೆ ಪ್ರೋತ್ಸಾಹಿಸುತ್ತಾರೆ. ನನಗೆ ಕಂಡ ಆಸಕ್ತಿದಾಯಕ ವಿಚಾರವೆಂದರೆ ಕ್ಯಾಂಪಿನಲ್ಲಿದ್ದ ಒಬ್ಬ ವ್ಯಕ್ತಿಯೂ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರಲಿಲ್ಲ.

ಮುಂದುವರಿಯುವುದು…click here to read introduction

Posted in ಪ್ರಸ್ತುತ | Tagged: , , , | Leave a Comment »

ಛತ್ತೀಸ್‌ಗಢದಲ್ಲಿ ನಕ್ಸಲರಿಂದ 73 ಪೊಲೀಸರ ಮಾರಣಹೋಮ

Posted by ajadhind on ಏಪ್ರಿಲ್ 6, 2010

ಮಾವೋವಾದಿಗಳನ್ನು ಪುಕ್ಕಲರು ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಜರೆದ ಬೆನ್ನಿಗೆ ಛತ್ತೀಸ್‌ಗಢದಲ್ಲಿನ ದಂತೇವಾಡದ ಸಿಆರ್‌ಪಿಎಫ್ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ ಮೇಲೆ ಗುಂಡಿನ ಮಳೆಗರೆದಿರುವ ನಕ್ಸಲರು 73 ಮಂದಿಯ ಮಾರಣಹೋಮ ನಡೆಸಿದ್ದಾರೆ.

ದಂತೇವಾಡದ ನಕ್ಸಲ್ ಬಾಧಿತ ಮುಕ್ರಾನಾ ಅರಣ್ಯ ಪ್ರದೇಶದಲ್ಲಿನ ರಸ್ತೆ ತೆರೆಯುವ ಕರ್ತವ್ಯ ಮುಗಿಸಿ ವಾಪಸ್ ಬರುವ ಹೊತ್ತಿಗೆ ಬೆಳಿಗ್ಗೆ ಆರರಿಂದ ಏಳು ಗಂಟೆಯ ನಡುವೆ ಸಿಆರ್‌ಪಿಎಫ್ ಪಡೆಯ ಮೇಲೆ ದಾಳಿ ನಡೆಸಲಾಗಿದೆ.

ಸುಮಾರು 1000ರಷ್ಟಿದ್ದ ನಕ್ಸಲರು ಸಿಆರ್‌ಪಿಎಫ್ ತಂಡದ ಮೇಲೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 80 ಸಿಬ್ಬಂದಿಗಳು ವಾಹನದಲ್ಲಿದ್ದರು. ಅವರಲ್ಲಿ ಡೆಪ್ಯುಟಿ ಕಮಾಂಡೆಂಟ್ ಮತ್ತು ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ 72 ಸಿಆರ್‌ಪಿಎಫ್ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ವಿಭಾಗದ ಓರ್ವ ಹೆಡ್ ಕಾನ್ಸ್‌ಟೇಬಲ್ ಸಾವನ್ನಪ್ಪಿರುವುದು ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಟ್ಟಗುಡ್ಡ ಪ್ರದೇಶದಲ್ಲಿ ಮರಗಳ ಎಡೆಯಲ್ಲಿ ಅಡಗಿ ಕುಳಿತಿದ್ದ ನಕ್ಸಲರು ಮೊದಲು ಸಿಆರ್‌ಪಿಎಫ್ ಜವಾನರ ವಾಹನವನ್ನು ತಡೆಯಲು ನೆಲಬಾಂಬುಗಳನ್ನು ಸ್ಫೋಟಿಸಿದ್ದರು. ಬಳಿಕ ಇದ್ದಕ್ಕಿದ್ದಂತೆ ಗುಂಡಿನ ಮಳೆಗರೆದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಆದರೆ ಭಾರೀ ಸಂಖ್ಯೆಯಲ್ಲಿದ್ದ ನಕ್ಸಲರು ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಕೊಂದು ಹಾಕಿದರು ಎಂದು ವರದಿಗಳು ಹೇಳಿವೆ.

ತಕ್ಷಣವೇ ನಾವು ಹೆಲಿಕಾಫ್ಟರುಗಳ ಮೂಲಕ ಸ್ಥಳಕ್ಕೆ ಧಾವಿಸಿದ್ದೇವೆ. ಎಂಟು ಮಂದಿ ಸಿಆರ್‌ಪಿಎಫ್ ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆ ಎಂದು ಛತ್ತೀಸಗಢ ಪೊಲೀಸ್ ಮಹಾ ನಿರ್ದೇಶಕ ವಿಶ್ವ ರಂಜನ್ ತಿಳಿಸಿದ್ದಾರೆ.

ಸಿಆರ್‌ಪಿಎಫ್ ಸಿಬ್ಬಂದಿಗಳು ತೆರಳುತ್ತಿದ್ದ ವಾಹನವನ್ನು ನಕ್ಸಲೀಯರು ಸ್ಫೋಟಿಸಿದ್ದರಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಅಮರೇಶ್ ಮಿಶ್ರಾ ತಿಳಿಸಿದ್ದಾರೆ.

ಜಿಲ್ಲೆಯ ಚಿಂತಾಲ್ನಾರ್ – ತಾರ್ಮೆತ್ಲಾ ಗ್ರಾಮದ ನಡುವೆ ಇಂದು ಮುಂಜಾನೆ ಈ ಘಟನೆ ನಡೆದಿದೆ. ಸಿಆರ್‌ಪಿಎಫ್, ಜಿಲ್ಲಾ ಪಡೆಗಳು ಮತ್ತು ವಿಶೇಷ ಪೊಲೀಸರ ಜಂಟಿ ತಂಡದ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದಾರೆ ಎಂದು ಅವರು ವಿವರಣೆ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ತಾರ್ಮೇತ್ಲಾ ಅರಣ್ಯ ಪ್ರದೇಶದಲ್ಲಿ ಈ ಜಂಟಿ ತಂಡವು ಕೂಂಬಿಂಗ್ ಕಾರ್ಯಾಚರಣೆಗಾಗಿ ಶಿಬಿರ ನಡೆಸುತ್ತಿತ್ತು. ಇದೀಗ ಅದರ ಮೇಲೆಯೇ ನಕ್ಸಲರು ಕ್ರೂರವಾದ ದಾಳಿ ನಡೆಸಿದ್ದಾರೆ.

Posted in ಚತ್ತೀಸಗಢ, ನಕ್ಸಲಿಸ೦ | Tagged: , | Leave a Comment »

Ban On Cow slaughtering?

Posted by ajadhind on ಏಪ್ರಿಲ್ 4, 2010

recieved via mail
ಮಾನ್ಯರೇ,

ಮನೆಯ ಎದುರಿಗೋ ಪಕ್ಕಕ್ಕೋ ಯಾರಾದರೂ ದನ ಸಾಕಿದ್ದೇ ಆದಲ್ಲಿ ನಾವು, ನಾಗರವಾಸಿಗಳ ಮೊದಲ
ಪ್ರತಿಕ್ರಿಯೆ ‘ ಈ ನಗರಗಳಲ್ಲಿ ಯಾಕಾದಾರೂ ಈ ಪ್ರಾಣಿಗಳನ್ನು ಸಾಕಲು ಅನುಮತಿ
ಕೊಡ್ತಾರೋ’ ಎಂದೇ ಇರುತ್ತೆ. ಬೆಳಿಗ್ಗೆ ಎದ್ದ ಕೂಡಲೇ ನಮಗೆ ಹಾಲು ಬೇಕು, ಹೋಳಿಗೆ
ಮೇಲೆ ಸುರಿದುಕೊಳ್ಳಲು ತುಪ್ಪ, ರೊಟ್ಟಿಯ ಜೊತೆಗೆ ಬೆಣ್ಣೆ ಇದ್ದರೆ ಅದರ ರುಚಿಯೇ ಬೇರೆ
ಎನ್ನುವ ನಮಗೆ ಪಕ್ಕದಲ್ಲೇ ಸಗಣಿಯ ವಾಸನೆ ಇದ್ದರೆ ತಡೆಯಲಾಗುವುದಿಲ್ಲ. ದನಗಳ
ಸಾಕುವಿಕೆ ಅದರ ಕಷ್ಟಗಳೇನಿದ್ದರೂ ಅದು ಹಳ್ಳಿಗಳಿಗೇ ಸೀಮಿತವಾಗಿ ನಮಗೆ ಅದರಿಂದ ಬರುವ
ಉತ್ಪನ್ನಗಳ ಮೇಲಷ್ಟೇ ಕಣ್ಣು. ಅಬ್ಬಬ್ಬಾ ಎಂದರೆ ಗ್ರಹಪ್ರವೇಶದ ದಿನ ಬಲವಂತವಾಗಿ ಒಂದು
ದಾನವನ್ನು ಮನೆಯೊಳಗೆ ಹೊಡೆದುಕೊ0ನ್ಡು ಬಂದು ಅದು ಸೆಗಣಿ ಹಾಕುವವರಿಗೂ ಕಾದು ನಂತರ
ಮನೆಯಿಂದ ಓಡಿಸುವುದು, ಅಷ್ಟೇ.
ಅಷ್ಟಕ್ಕೂ ಈಗ ಹಳ್ಳಿಗಳಲ್ಲದಾರೂ ಎಷ್ಟು ಮಂದಿ ಎತ್ತು ದನ ಸಾಕುತ್ತಿದ್ದಾರೆ? ನಮ್ಮ
ಅಜ್ಜನ ಊರಲ್ಲಿ ನಾನೇ ನೋಡಿದಂತೆ ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲೇ ಆರಕ್ಕೂ
ಹೆಚ್ಚು ರಾಸುಗಳಿದ್ದವು, ಕೊನೆಗೆ ಒಂದೊಂದಾಗಿ ಎಲ್ಲವೂ ಮಾರಾಟವಾಗಿ ಎತ್ತಿನ ಗಾಡಿಯ
ಜೊತೆಯಲ್ಲಿ ಉಳಿದೆರಡು ಎತ್ತುಗಳು ಮಾರಲ್ಪಟ್ಟವು. ರಾಸುಗಳ ಮೇಲಿನ ಬೇಸರದಿಂದಲ್ಲ ಮಾರಟ
ಮಾಡಿದ್ದು, ಅದು ಅವತ್ತಿನ ದಿನಕ್ಕೆ ಅವರಿಗೆ ಸರಿಯೆನಿಸಿದ ವ್ಯವಹಾರಿಕತೆ. ಅಷ್ಟಕ್ಕೂ
ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ಗೋಮಂಸವನ್ನು ನಿಷೇದಿಸಿರುವಸರಕಾರದಕ್ರಮಎಷ್ಟರ
ಮಟ್ಟಿಗೆ ಸರಿ? ಸರಕಾರಕ್ಕೆ ಬೆದರಿಕೆ ಒಡ್ದುವ ರೀತಿಯಲ್ಲಿ ವರ್ತಿಸಿದ ಅನೇಕ ಸಂಗಟನೆಗಳ
ಅಭಿಪ್ರಾಯ ಎಷ್ಟರ ಮಟ್ಟಿಗೆ ಸಾಧು? ಪ್ರತಿಭಟನೆ ಮಾಡಿದವರಾಗಲಿ ನಿರ್ಧಾರ ತೆಗೆದುಕೊಂಡ
ಸರಕಾರಕ್ಕಾಗಲಿ ರಾಸುಗಳನ್ನು ಸಾಕಬೇಕಾದ ಅನಿವಾರ್ಯತೆಯಿಲ್ಲ. ಈಗಲೂ ಇಲಾತಿ
[ವಿಲಾಯಿತಿ] ಹಸುಗಳನ್ನು ಸಾಕುವವರು ಹುಟ್ಟಿದ ಕರು ಗಂಡಾದಲ್ಲಿ
ಬೇಸರಪಟ್ಟುಕೊಳ್ಳುವುದು ಸುಳ್ಳಲ್ಲ. ಅದು ಅವರು ನಡೆಸುವು ವ್ಯವಹಾರದಲ್ಲಿ ಒಂದು
ಹಿನ್ನಡೆಯಷ್ಟೇ. ಕರು ಒನ್ದಷ್ಟು ದೊಡ್ಡದಾದ ಮೇಲೆ ಅದನ್ನು ಮಾರಿದರಷ್ಟೇ ಅವರಿಗೆ
ವ್ಯವಹಾರದಲ್ಲಿ ಮುಂದುವರಿಯಲು ಸಾಧ್ಯ. ಪ್ರತಿ ಬಾರಿ ಗಂಡು ಕರುವೇ ಹುಟ್ಟಿ
ಅವೆಲ್ಲವನ್ನೂ ಶಾಸನದನ್ವಯ ಸಾಕಲೇಬೇಕಾದ ಅನಿವಾರ್ಯತೆ ಸೃಷ್ಟಿ ಆದರೆ ಅವರು
ಹೈನುಗಾರಿಕೆಯ ವೃತ್ತಿಯಲ್ಲಿ ಮುಂದುವರಿಯುವುದಾರು ಹೇಗೆ?
ಇನ್ನೂ ರಾಸುಗಳ ರಕ್ಷಣೆಗೋಸ್ಕರ ಬೀದಿಗಿಳಿದ ಸ್ವಾಮೀಜಿಗಳ ಬಗ್ಗೆ. ಪಾಪ ಅವರಿಗೆ
ರಾಸುಗಳ ಬಗ್ಗೆ ವಿಪರೀತ ಕಾಳಜಿ, ಅವುಗಳ ಹತ್ಯೆ[?] ಯಾದರೆ ನಮ್ಮ ಸಂಸ್ಕೃತಿಯೇ
ನಾಶವಾದಂತೆ ಎಂಬ ವಿಷಯವನ್ನು ಜನರಿಗೆ ಮನದಟ್ಟಾಗುವ0ತೆ ವಿವರಿಸುತ್ತಿದ್ದಾರೆ. ಆದರೆ
1997ರಿಂದ 2008ರವರೆಗೆ ನಮ್ಮ ದೇಶದ ಐದು ರಾಜ್ಯಗಳಲ್ಲಿ [ಕರ್ನಾಟಕ, ಮಹಾರಾಷ್ತ್ರ,
ಆಂಧ್ರಪ್ರದೇಶ, ಚತ್ತೀಸಗಢ, ಮಧ್ಯಪ್ರದೇಶ] ಸರಕಾರಿ ಲೆಕ್ಕದ ಪ್ರಕಾರವೇ ಒಂದು
ಲಕ್ಷಕ್ಕೂ ಅಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಎಲ್ಲಿ ಹೋಗಿದ್ದರು
ಈ ಸ್ವಾಮಿಗಳು ಮತ್ತವರ ಸಂಸ್ಕೃತಿ ರಕ್ಷಕರು? ರೈತನ ಜೀವದ ಬೆಲೆ ಹಸುವಿಗಿಂತ ಕಡೆಯಾಗಿ
ಹೋಯಿತಾ? ಸ್ವಾಮೀಜಿಗಳ ಪಾದದಡಿಗೇನೋ ಸರಕಾರ ಕೋಟ್ಯಾಂತರ ರೂಪಾಯಿ ಕೊಡುತ್ತೆ ಅವುಗಳ
ಅಭಿವೃದ್ಧಿಗೆ, ಆದರೆ ಇವರು ಮಾಡಿದ ಕಾನೂನಿನಿಂದ ಮುದಿ ರಾಸುಗಳನ್ನು ಸಾಕುವ
ಅನಿವಾರ್ಯತೆಗೆ ಬೀಳುವ ರೈತರಿಗೆ ಸರಕಾರದಿಂದ ಯಾವ ಸಹಕಾರ ಸಿಗುತ್ತೆ? ಇರುವ ಗೋ
ಮಾಳಗಳನ್ನೇ ಸರಕಾರದ ಬೆಂಬಲದಿಂದ ಕಬಳಿಸುತ್ತಿರುವಾಗ?
ನಾಳೆ ಇನ್ನೊಬ್ಬ ಆಡಳಿತಾಧಿಕಾರಿ ಬಂದು ಯಾವುದೇ ಪ್ರಾಣಿ ವಧೆ ಸಲ್ಲದು ಎಂದರೆ ಅದನ್ನೂ
ಒಪ್ಪಬೇಕಾ? ಇವೆಲ್ಲದರ ಮೇಲೆ ಮೊದಲೇ ಆಕಾಶ ನೋಡುತ್ತಿರುವ ಕೋಳಿ ಮತ್ತು ಮೇಕೆ ಮಾಂಸದ
ಬೆಲೆಗಳು ಗೋಮಾಂಸದ ನಿಷೇದದಿಂದ ಮತ್ತಷ್ಟು ಏರಿಕೆಯಾಗದೆಇದ್ದೀತೆ?ಮಾಂಸಾಹಾರಿಗಳ
ವಿರುದ್ಧ ನವ ಬ್ರಾಹ್ಮಣಿಕೆಯ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವ ಸಂಸ್ಕೃತಿ
ರಕ್ಷಕರು ನಡೆಸುತ್ತಿರುವ ಪಿತೂರಿಯಲ್ಲವೇ ಇದು?

Posted in ಕರ್ನಾಟಕ, ಪ್ರಸ್ತುತ | 1 Comment »