ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

Archive for the ‘ನನ್ನ ಲೇಖನಿಯಿ೦ದ’ Category

ಆಪರೇಷನ್ ಗ್ರೀನ್ ಹಂಟ್ ನಿಂದ ನಕ್ಸಲರ ದಮನ ಸಾಧ್ಯವೇ?

Posted by ajadhind on ಮೇ 31, 2010

is lack of development only reason for naxalism

Posted in ನಕ್ಸಲಿಸ೦, ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »

ಸ್ವಾತಂತ್ರ್ಯ?!

Posted by ajadhind on ಮಾರ್ಚ್ 31, 2009

ಯಾರಿಗೆ ಬಂತು
ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

ಅವರ ಕುರ್ಚಿಯಲಿ
ಇವರು ಕುಳಿತರು
ಯಾರಿಗೆ ಬಂತು ಸ್ವಾತಂತ್ರ್ಯ?

ಕೆಂಪು ಕೋಟೆಯಲಿ
ಬದಲಾಯಿತು ಬಾವುಟ
ಬಾವುಟವಷ್ಟೇ ಬದುಕಲ್ಲ!!

ಗರಿ ಗರಿ ನೋಟಿನ
ಪರಿಮಳದಲ್ಲಿ
ರೊಟ್ಟಿ ತಟ್ಟಲೂ ಹಿಟ್ಟಿಲ್ಲ.

ಪಬ್ಬು ದಿಸ್ಕೋಗಳ
ಗೊಂದಲದಲ್ಲಿ ಮಬ್ಬಾಗಿ
ಹೋದವರ ಲೆಕ್ಕಿಲ್ಲ.

ಒಂದು ಓಟಿಗೆ
ಸಾವಿರವಂತೆ
ಎಲ್ಲಿಗೆ ಬಂತು ಸ್ವಾತಂತ್ರ್ಯ?

Posted in ನನ್ನ ಲೇಖನಿಯಿ೦ದ | Tagged: , | Leave a Comment »

ಪಬ್ಬು ಮತ್ತು ಮಬ್ಬು.

Posted by ajadhind on ಫೆಬ್ರವರಿ 10, 2009

ಮೊನ್ನೆ ಮೊನ್ನೆ ಕರ್ನಾಟಕದಿಂದ ಕೇರಳಕ್ಕೆ ಲಾರಿಯೊಂದು ಸಾಗುತ್ತಿತ್ತು. ಕಂಟೈನರ್ ಹೊತ್ತಿದ್ದ ಲಾರಿ. ಕಂಟೈನರ್ ಗೊತ್ತಿರಬೇಕು ನಿಮಗೆ; ಕಬ್ಬಿಣದ ದೊಡ್ಡ ಡಬ್ಬಿ, ಆರೂ ಕಡೆಯಿಂದ ಗಾಳಿಯಾಡಲು ಸ್ವಲ್ಪವೂ ಅನುಕೂಲವಿರುವುದಿಲ್ಲ. ಇಂತಿಪ್ಪ ಲಾರಿ ಕರ್ನಾಟಕ, ಕೇರಳದ ಬಿಗಿ ಭದ್ರತೆಯ ಗಡಿ ದಾಟಿ ಕೇರಳದ ಹಳ್ಳಿಯೊಂದರಲ್ಲಿ ಸಾಗುತ್ತಿತ್ತು. ಅಲ್ಲೇ ಹರಟುತ್ತಿದ್ದ ಯುವಕರಿಗೆ ಲಾರಿಯಿಂದ ಮಕ್ಕಳು ಅಳುವ ಶಬ್ದ ಕೇಳಿ ಬಂತು, ಅ ಯುವಕರು ಲಾರಿ ತಡೆದು ಕಂಟೈನರ್ ಬಾಗಿಲು ತೆಗೆಸಿದರೆ ಕಂಡಿದ್ದು ಕುರಿಮಂದೆಯ ರೀತಿ ತುಂಬಿದ್ದ ನಲವತ್ತು ಹೆಂಗಸರು ಮತ್ತು ಮಕ್ಕಳು. ಉಸಿರಾಟಕ್ಕೆ ಗಾಳಿ ಸಿಗದೇ ಮಕ್ಕಳು ಅಳುತ್ತಿದ್ದವು.
ಅಷ್ಟೂ ಜನ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಗುತ್ತಿಗೆದಾರನೊಬ್ಬ ಈ ವ್ಯವಸ್ಥೆ ಮಾಡಿದ್ದ. ಅಲ್ಲಿದ್ದವರು ಮುಸ್ಲಿಮರಾ? ಹಿಂದುಗಳಾ? ಬಡವರ ಧರ್ಮ ಯಾವುದಾದರೇನು?
‘ಹಿಂದೂ ಹೆಂಗಸರಿಗೆ ಅವಮಾನ’ ಎಂದು ಯಾರು ಬೊಬ್ಬಿಡಲಿಲ್ಲ. ಪಾಪ ಅವರಿಗೆ ಸಿರಿವಂತರು ದುಡ್ಡು ಪೋಲು ಮಾಡುವುದನ್ನು ತಪ್ಪಿಸಲೇ ಸಮಯವಿಲ್ಲ. ಒಂದಷ್ಟು ಪತ್ರಿಕೆಗಳ ಮುಖಪುಟಗಳಲ್ಲಿ, ಬಹಳಷ್ಟರ ಒಳಪುಟಗಳಲ್ಲಿ ಸುದ್ದಿಯಾಯಿತು. ಯಾವ ಟಿ.ವಿಯವನೂ ಮುಖ್ಯಮಂತ್ರಿಯ ಮುಖಕ್ಕೆ ಮೈಕ್ ಹಿಡಿದು ‘ ಇಂಥ ಘಟನೆ ನಡೆದಿದೆಯಲ್ಲಾ ನಾಚಿಕೆಯಾಗೊಲ್ವಾ ನಿಮಗೆ’ ಅಂಥ ಕೇಳಲಿಲ್ಲ. ರಾಷ್ಟ್ರೀಯ ವಾಹಿನಿಗಳಿಗೆ ಇದು ‘ ಹಾರರ್’ ವಿಷಯವಾಗಿ ಕಾಣಲಿಲ್ಲ. ಪಾಪ ಕೇಂದ್ರ ಮಂತ್ರಿಗಳಿಗೆ ‘ಪಬ್ ಭರೋ ‘ ಮಾಡಿಸುವ ಆತುರ.
ನಲವತ್ತು ಮಂದಿ ಮಕ್ಕಳು ಹೆಂಗಸರು ಅನುಭವಿಸಿದ ಸಂಕಟಕ್ಕಿಂತ ನಾಲ್ಕು ಮಂದಿ ಸಿರಿವಂತರಿಗೆ ಬಿದ್ದ ಹೊಡೆತ ಹೆಚ್ಚಿನದಾಗಿ ಹೋಯಿತಾ ನಮಗೆ!?
ಕೊನೆಗೆ ಈ ಭಾರತ ದೇಶ ಯಾರಿಗೆ ಸೇರಿದ್ದು ? ಉತ್ತರ ತಿಳಿದಿರಬೇಕಲ್ಲ…….
ಜೈ ಭಾರತಾಂಬೆ.

Posted in ಕರ್ನಾಟಕ, ನನ್ನ ಲೇಖನಿಯಿ೦ದ, ಪ್ರಸ್ತುತ | 6 Comments »

ಹೀಗೀಕೆ?

Posted by ajadhind on ಜನವರಿ 31, 2009

ಕನಸು ಕಾಣಿ – ಕಲಾಂ

ಸಮಸಮಾಜದ

ಕನಸ ಕಂಡೆ

ನಕ್ಸಲನೆಂದು ಜೈಲಿಗಟ್ಟಿದರು

ಹಿಂಗ್ಯಾಕೆ?

 

 

ಬೇಲಿಯೊಳಗಿನ

ಬೇಲಿಯಲ್ಲಿ

ಸತ್ಯವನ್ನಾಡುವವರಿದ್ದರು

ಹೊರಗಿನಿಗಿಂತ

ಹೆಚ್ಚಾಗಿ!!

ಹಿಂಗ್ಯಾಕೆ?

Posted in ನನ್ನ ಲೇಖನಿಯಿ೦ದ | Tagged: | Leave a Comment »

ಧರ್ಮವೆಂಬ ಅಫೀಮು ಮತ್ತು ಬುದ್ಧನ ನಗು.

Posted by ajadhind on ಜನವರಿ 21, 2009

ಕಳೆದ ಕೆಲವು ದಿನಗಳಿಂದ ಕಲ್ಬುರ್ಗಿಯಲ್ಲೆಲ್ಲಾ ಬುದ್ಧವಿಹಾರದ ರೂವಾರಿ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆಯೇ ಮಾತು. ಮುಖ್ಯಮಂತ್ರಿಯಿಂದ ರಾಷ್ಟ್ರಪತಿಯವರೆಗೆ , ಬಿಕ್ಕುವಿನಿಂದ ದಲೈಲಾಮವರೆಗೆ ಎಲ್ಲರೂ ಖರ್ಗೆಯವರನ್ನು ಹೊಗಳಿದ್ದೇ ಹೊಗಳಿದ್ದು. ಇಂಥ ವ್ಯಕ್ತಿ ಮುಖ್ಯಮಂತ್ರಿಯಾಗಲಿಲ್ಲವಲ್ಲ ಎಂದು ಪರಿತಪಿಸಿದವರೂ ಉಂಟು.
ಇನ್ನೂ ಬುದ್ಧವಿಹಾರ ನಿರ್ಮಾಣ ಹಂತದಲ್ಲಿದ್ದಾಗ ಅಲ್ಲಿಗೆ ಒಮ್ಮೆ ಭೇಟಿ ನೀಡಿದ್ದೆ. ನಿಜಕ್ಕೂ ಅದ್ಭುತವಾದ ನಿರ್ಮಾಣ. ಮೊಲದ ಬಿಳುಪಿನ ಅಮೃತಶಿಲೆ, ಕಡುಗಪ್ಪು ಬಣ್ಣದ ಬುದ್ಧ ಪ್ರತಿಮೆ ಎಲ್ಲವೂ ಬಹಳವಾಗಿ ಆಕರ್ಷಿಸಿದವು. ಯಾರು ಕಟ್ಟಿಸುತ್ತಿರುವುದಿದನ್ನು ಎಂದು ಸೆಕ್ಯುರಿಟಿಯವನನ್ನು ಕೇಳಿದಾಗ ಖರ್ಗೆ ನೇತ್ರತ್ವದ ಸಿದ್ಧಾರ್ಥ ಟ್ರಸ್ಟ್ ಎಂದರಿವಾಗಿ ಅಲ್ಲಿಯವರೆಗಿನ ಖುಷಿಯೆಲ್ಲಾ ಮರೆಯಾಗಿ ಕಲಬುರ್ಗಿಯ ಚಿತ್ರಣ ಕಣ್ಣ ಮುಂದೆ ಬಂತು.
ಖರ್ಗೆ ಮತ್ತು ಧರ್ಮಸಿಂಗ್ ತಮ್ಮ ಜೀವಿತಾವಧಿಯ ಬಹುಭಾಗ ಶಾಸಕರಾಗಿ ಆಯ್ಕೆಯಾಗಿದ್ದಾರೆ, ಖರ್ಗೆ ಈಗಲೂ ಶಾಸಕರೇ. ಇಬ್ಬರೂ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಜೇವರ್ಗಿಯ ಬಸ್ಸು ನಿಲ್ದಾಣವನ್ನೊಮ್ಮೆ ನೋಡಿದರೆ ಧರ್ಮಸಿಂಗರ ಕಾರ್ಯವೈಖರಿ ತಿಳಿಯುತ್ತದೆ. ಮಾಜಿ ಮುಖ್ಯಮಂತ್ರಿಯ ಮೇಲೆ ಕೋಪ ಜಿಗುಪ್ಸೆ ಬರದಿದ್ದರೆ ಮನೋವೈದ್ಯರನ್ನು ಭೇಟಿಯಾಗುವುದು ಒಳಿತು .
ತಮ್ಮ ಹೆಸರು ಶಾಶ್ವತವಾಗಿಸುವ ಉದ್ದೇಶವೋ ಅಥವಾ ನಿಜವಾಗಲೂ ಧಾರ್ಮಿಕ ಉದ್ದೇಶದಿಂದ ಕಟ್ಟಿಸಿದ್ದಾರೋ ಹೇಳುವುದು ಕಷ್ಟ. ಅಷ್ಟು ದೊಡ್ಡ ಕಟ್ಟಡವನ್ನು ಕಟ್ಟಿಸಲು ವಹಿಸಿದ ಕಾಲು ಪ್ರತಿಶತ: ಆಸಕ್ತಿಯನ್ನು ಇಡೀ ಕಲ್ಬುರ್ಗಿಯಲ್ಲದಿದ್ದರೂ ಜಿಲ್ಲಾ ಆಸ್ಪತ್ರೆಯ ಅಭಿವೃದ್ಧಿಗೆ ತೋರಿಸಿದ್ದರೂ……. ಬಿಡಿ ನಾವು ಸರಿ ಇಲ್ಲ . ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರಿಗೆ, ನಕಲಿ ಜಾತ್ಯತೀತರಿಗೆ; ಮಂದಿರ, ಮಸೀದಿ, ಚರ್ಚು, ಮತಾಂತರ,ಇಸ್ಲಾಂ ಹೊಸದಾಗಿ ಹಿಂದೂ ಭಯೋತ್ಪಾದನೆಯ ವಿಷಯವಾಗಿ ನಮ್ಮನ್ನು ಉದ್ರೇಕಿಸುವವರಿಗೆ ನಮ್ಮ ಮೊದಲ ಆದ್ಯತೆ .

Posted in ಕರ್ನಾಟಕ, ನನ್ನ ಲೇಖನಿಯಿ೦ದ | Tagged: , , | 4 Comments »

ಮೌಲ್ಯ ಮರೆತ ಮಾಧ್ಯಮ.

Posted by ajadhind on ಜೂನ್ 28, 2008

ಶಾಲಾ ಹುಡುಗಿಯ ಕೊಲೆಯಾಗುವುದು ಯಾರಿಗೂ ಸಂತೋಷ ತರುವ ವಿಚಾರವಲ್ಲ. ಆದರೆ ದೃಶ್ಯಮಾಧ್ಯಮಗಳು ಅದರಲ್ಲೂ ತಮ್ಮನ್ನು ತಾವೇ ಭಾರತ ದೇಶದ ಮಾಧ್ಯಮಗಳೆಂದು ಕರೆದುಕೊಳ್ಳುವ ಆಂಗ್ಲ ಮಾಧ್ಯಮಗಳು ಶಾಲಾ ಹುಡುಗಿಯ ಕೊಲೆಯ ಬಗ್ಗೆ ನಡೆಸಿದ ಕಾರ್ಯಕ್ರಮಗಳು ರೇಜಿಗೆ ಹಾಗಿದ್ದವು. “ಸಂಕ್ಷಿಪ್ತ ಸುದ್ದಿಯ ” ಹೆಸರಿನಲ್ಲಿ ಬರಬೇಕಾಗಿದ್ದ ಸುದ್ದಿ ಬಹುತೇಕ ಎಲ್ಲಾ ಮಾಧ್ಯಮಗಳ ಮುಖ್ಯಾಂಶದ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡಿತು . ಅದರ ಬೆನ್ನಿಗೇ ತಾವು ಮಾಡಿದ್ದು ಸರಿಯಾ? ಎಂಬ ಪ್ರಶ್ನೆಯನ್ನು ತಮಗೇ ಕೇಳಿಕೊಂಡು ನಾವು ಅಷ್ಟು ಆಸಕ್ತಿ ವಹಿಸದೇ ಇದ್ದ ಪಕ್ಷದಲ್ಲಿ ಅಪರಾಧಿಗಳ ಪತ್ತೆಯೇ ಕಷ್ಟವಾಗುತ್ತಿತ್ತು ಎಂದು ಹೇಳಿ ಕೈತೊಳೆದುಕೊಂಡರು .
ಅವರ ಮಾತನ್ನೇ ಒಪ್ಪುವುದಾದರೆ ಅವರಿಂದಲೇ ಈ ಕೊಲೆ ಪ್ರಕರಣ ಇತ್ಯರ್ಥವಾಯಿತು[?], ಸಂತೋಷ .ಆದರೆ ಈ ಕೊಲೆ ನಡೆದ ಸಮಯದ ಆಜುಬಾಜಿನಲ್ಲೇ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ನಡೆದು ಇನ್ನೂರಕ್ಕೂ ಅಧಿಕ ಮಂದಿ ಮೃತಪಟ್ಟರು. ಇದು ಒಂದು ರೀತಿ ಪ್ರಾಯೋಜಿತ ಕೊಲೆಯೇ . ಅಪರಾಧಿಗಳನ್ನು ಹಿಡಿಯುವಲ್ಲಿ ಸಹಾಯ ಮಾಡುವುದಿರಲಿ ಅವರಿಗೆ ಇದು ಪ್ರಮುಖ ಸುದ್ದಿಯೂ ಆಗಲಿಲ್ಲ. ಪುಂಖಾನುಪುಂಖವಾಗಿ ಸುದ್ದಿ ಪ್ರಸಾರ ಮಾಡಿ ಸರಕಾರದ ಮೇಲೆ ಒತ್ತಡ ಹೇರಲಿಲ್ಲ. ಸತ್ತ ಇನ್ನೂರು ಜನ ವೈದ್ಯರ ಮಕ್ಕಳಾಗಿರಲಿಲ್ಲ , ಅವರದು highprofile ಬದುಕಲ್ಲ ಎಂಬ ಕಾರಣವಾ? ಇನ್ನೂರು ಜನರ ಬದುಕು ಒಬ್ಬ ಶಾಲಾ ಹುಡುಗಿಯ ಬದುಕಿಗಿಂತ ಕಡೆಯಾಗಿ ಹೋಯಿತಾ? ಅವರ ಮಾತನ್ನೇ ನಂಬುವುದಾದರೆ ಕಳ್ಳಭಟ್ಟಿ ದುರಂತದ ಬಗ್ಗೆ ಅವರು ತನಿಖೆ ನಡೆಸಿದ್ದರೆ ಇನ್ನಷ್ಟು ಅಪರಾಧಿಗಳು ಸಿಕ್ಕಿಬಿಳುತ್ತಿದ್ದರೇನೋ?
ಸತ್ತವರು ಅಥವಾ ಸಾಯಿಸಿದವರು highprofile ಸಮಾಜದಿಂದ ಬಂದವರಾಗಿದ್ದಾರೆ ಮಾತ್ರ ಅವರ ವಾಹಿನಿಗಳಲ್ಲಿ ಸ್ಥಾನ. ಈ ವಿಷಯದಲ್ಲಿ ಸ್ಥಳಿಯ ಭಾಷಾ ಪತ್ರಿಕೆಗಳೇ ಮೇಲು. ಪತ್ರಿಕೆಗಳಲ್ಲಿ ಇನ್ನೂ ದೇಶದ ಸಮಸ್ಯೆಗಳೇ ಮುಖ್ಯ ಸ್ಥಾನ ಪಡೆದುಕೊಂಡಿವೆ. ಅವು ಬದಲಾಗದಿರಲೆಂದು ಆಶಿಸೋಣ.

Posted in ನನ್ನ ಲೇಖನಿಯಿ೦ದ, ಪ್ರಸ್ತುತ | 1 Comment »

ಮಿಯಾಮಿ ಅಕ್ಕಿ ಮತ್ತು ಕ್ಯಾಪಿಟಲಿಸಂನ ಕರಾಳ ಮುಖ.

Posted by ajadhind on ಜೂನ್ 25, 2008

ಮೂವತ್ತು ವರ್ಷದ ಹಿಂದೆ ಹೈಟಿ ಎಂಬ ದೇಶದ ಜನ ಆಹಾರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರು. ಈಗ ಅದೇ ದೇಶದಲ್ಲಿ ಗಗನಕ್ಕೇರಿದ ಬೆಲೆಗಳ ನಡುವೆ ಜೀವಿಸಲಾಗದೆ ಜನ ಆಹಾರಕ್ಕಾಗಿ ದಂಗೆಯೆದ್ದಿದ್ದಾರೆ.
ಕಳೆದ ವರ್ಷ ಗೋಧಿಯ ಬೆಲೆಯಲ್ಲಿ ೭೭% , ಅಕ್ಕಿಯಲ್ಲಿ ೧೬% ಏರಿಕೆಯಾಗಿತ್ತು.ಈ ಜನವರಿಯಿಂದೀಚೆಗೆ ಅಕ್ಕಿಯ ಬೆಲೆಯಲ್ಲಿ ಶೇ ೧೪೧% ಹೆಚ್ಚಳವಾಗಿದೆ. ಹೆಚ್ಚುತ್ತಿರುವ ತೈಲ ಬೆಳೆ , ಜೈವಿಕ ಇಂಧನಕ್ಕಾಗಿ ಭೂಮಿಯ ಬಳಕೆ ಇದಕ್ಕೆ ಕಾರಣ. ಇದೆಲ್ಲಕ್ಕಿಂತ ಮುಖ್ಯ ಕಾರಣವೊಂದಿದೆ,ಅದು ಅಮೇರಿಕಾ ದೇಶದ ಕ್ಯಾಪಿಟಲಿಸಂನ ಮತ್ತೊಂದು ಮುಖ!!.
ಹೈಟಿ ಎಂಬ ಪುಟ್ಟ ದೇಶ ಅಮೆರಿಕಾದಿಂದ ಅಕ್ಕಿ ಪಡೆಯುವ ದೇಶಗಳಲ್ಲಿ ಮೂರನೆಯ ಸ್ಥಾನದಲ್ಲಿದೆ. ಆಹಾರದಲ್ಲಿ ಸ್ವಾವಲಂಬಿಗಲಾಗಿದ್ದ ಹೈಟಿ ದೇಶದ ಜನರಿಗೆ ೧೯೮೬ರಲ್ಲಿ ಅಮೆರಿಕಾದಿಂದ ಅತಿ ಕಡಿಮೆ ದರದಲ್ಲಿ ಅಕ್ಕಿ ಸಿಗಲಾರಂಭಿಸಿತು. ಸಿರಿವಂತ ದೇಶವಾದ ಅಮೇರಿಕಾ ತನ್ನ ದೇಶದ ರೈತರಿಗೆ ಅತಿ ಹೆಚ್ಚಿನ ಸಬ್ಸಿಡಿ ದರ ಕೊಟ್ಟು ಅಕ್ಕಿ ಬೆಳೆಸುತ್ತಿತ್ತು. ಆ ಅಕ್ಕಿಯನ್ನು ಹೈಟಿ ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಪೂರೈಸಿತು. ಈ ಮಿಯಾಮಿ ಅಕ್ಕಿ ಹೈಟಿಯಾ ಜನರಿಗೆ ವರವಾಗಿ ಕಂಡಿತು. ಇದರ ಮೊದಲ ಹೊಡೆತ ಬಿದ್ದಿದ್ದು ಹತಿಯ ರೈತನಿಗೆ. ಮಿಯಾಮಿ ಅಕ್ಕಿಯ ದರಕ್ಕೆ ಆತ ಅಕ್ಕಿ ನೀಡಲಾರ; ಕಾರಣ ಆತನಿಗೆ ಅವನ ಸರಕಾರ ಯಾವುದೇ ಸಬ್ಸಿಡಿ ನೀಡುವುದಿಲ್ಲ. ನಷ್ಟದ ಉದ್ಯಮ ಎಷ್ಟು ದಿನ ನಡೆದೀತು? ರೈತ ಬೆಳೆಯುವುದನ್ನು ನಿಲ್ಲಿಸಿ ನಗರಗಳ ಕಡೆಗೆ ನಡೆದ. ಅಲ್ಲಿಗೆ ಇಡೀ ಹೈತಿಯ ಅಕ್ಕಿ ಮಾರುಕಟ್ಟೆ ಅಮೆರಿಕಾದ ಪಾಲಾಯಿತು. ೨೦೦೮ ರಲ್ಲಿ ಅಮೆರಿಕಾದಿಂದ ಹೈತಿಗೆ ರಫ್ತಾದ ಅಕ್ಕಿಯ ಪ್ರಮಾಣ ೨,೪೦,೦೦೦ ಮೆಟ್ರಿಕ್ ಟನ್ ಯಾವಾಗ ರೈತ ಇನ್ನು ಅಕ್ಕಿ ಬೆಳೆಯಲಾರ ಎಂಬುದು ಖಾತ್ರಿಯಾಯಿತೋ ಮಿಯಾಮಿ ಅಕ್ಕಿಯ ಬೆಲೆ ಏರಲಾರಂಭಿಸಿತು. ೧೯೮೬ ರಿಂದ ಇಲ್ಲಿಯವರೆಗೆ ಒಂದು ತಲೆಮಾರೇ ಬದಲಾಗಿದೆ. ಈಗ ಅಕ್ಕಿ ಬೆಳೆಯಬೇಕೆಂದರೂ ಅಲ್ಲಿನ ರೈತನಿಗದು ಅಸಾಧ್ಯ.
ಹೈಟಿಯಂಥಹ ಪುಟ್ಟ ದೇಶದ ಮಾರುಕಟ್ಟೆಯನ್ನು ಕಬಳಿಸಿರುವ ಅಮೆರಿಕಾದ ಸ್ನೇಹ ಬಯಸುತ್ತಿರುವ ಭಾರತ ಸರಕಾರದಿಂದ ಭಾರತದ ಜನರ ಏಳಿಗೆ ಸಾಧ್ಯವೇ?

Posted in ನನ್ನ ಲೇಖನಿಯಿ೦ದ, ಪ್ರಸ್ತುತ | Leave a Comment »

ಇದು ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸುವ ಜರೂರತ್ತಿದೆ.

Posted by ajadhind on ಏಪ್ರಿಲ್ 16, 2008

ಕರ್ನಾಟಕದಲ್ಲೀಗ ಚುನಾವಣೆ ಸಮಯ. ಪತ್ರಿಕಾ ಮತ್ತು ದ್ರಶ್ಯ ಮಾಧ್ಯಮಗಳಲೆಲ್ಲ ಪ್ರಣಾಳಿಕೆ, ಭರವಸೆ ಪರಸ್ಪರ ದೋಷಾರೂಪಣೆಯದೇ ವಿಷಯ. ಹಲವೆಡೆ ಸೀರೆ ಹ0ಚುವಿಕೆ, ಬಾಡೂಟದ ಘಮ; ಹಣ ಹೆಂಡದ ಹಂಚುವಿಕೆಯ ಬಗ್ಗೆ ಹೇಳುವುದೇ ಬೇಡ. ಬಿಜೆಪಿಯ ಮುಂಖಡರೊಬ್ಬರು ಹೇಳಿದಂತೆ ಐವತ್ತು ಲಕ್ಷ ಹೊದಿಸಲು ಸಾಧ್ಯವಾಗದ್ದಕ್ಕೆ ಅವರಿಗೆ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರಂತೆ. ಗಣಿ ಧಣಿಗಳು ಲಕಷಗಟ್ಟಲೆ ಸುರಿದು ಟಿಕೇಟ್ ಖರೀದಿಸುತ್ತಿದ್ದಾರೆ.

ಚುನಾವಣೆಗೆ ನಿಂತವರು ಹಣವನ್ನು ಕಸಕ್ಕಿಂತಲೂ ಕಡೆಯಾಗಿ ಕಾಣುತ್ತಾರೆ. ಮುನ್ನೂರು ರೂಪಾಯಿ ,ಒಂದು ಸೀರೆ , ಪಂಚೆ ಕೊಟ್ಟು  ವೋಟನ್ನು “ಖರೀದಿಸುತ್ತಾರೆ”. ಇದು ಪ್ರಜಾಪ್ರಭುತ್ವವಾ? ಇದೊದು ಅಪ್ಪಟ ವ್ಯಾಪಾರ. ಕೆಳಮಧ್ಯಮ ಮತ್ತು ಕೆಳವರ್ಗದ ಮತಗಳು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸ್ಪರ್ಧಿಗಳು [ವ್ಯಾಪಾರಿಗಳು] ಹಣವನ್ನು ಹಂಚಿ ಮತವನ್ನು ಖರೀದಿಸುತ್ತಾರೆ. ಹಣ ಪಡೆದು ಮತ ಹಾಕುವ ಜನರಿಗೂ ನಮ್ಮಲ್ಲಿ ಕೊರತೆಯಿಲ್ಲ. ಹಣ ಪಧೆಯದ ಜನರಿಗೆ ನಾಲ್ವರು ಕಳ್ಳರಲ್ಲಿ ಒಬ್ಬರನ್ನು ಆರಿಸುವ ಅನಿವಾರ್ಯತೆ!  ಗೆದ್ದವನಿಗೆ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವ ಯೋಚನೆ ಇರುತ್ತದೆಯೇ ಹೊರತು ಜನರ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಯೋಚನೆಯಿರುವುದಿಲ್ಲ.

ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸುವವರು ಭಾರತದಲ್ಲಿ ಅಧಿಃಪತನದತ್ತ ಸಾಗುತ್ತಿರುವ ಚುನಾವಣೆ ಮತ್ತು ರಾಜಕೀಯ ಮೌಲ್ಯಗಳತ್ತ ಗಮನಹರಿಸಬೇಕು. ಜಾತಿ, ಧರ್ಮ, ಹಣ, ಹೆಂಡದ ಆಧಾರದಲ್ಲಿ ಮತ ಹಾಕುವವರಿರುವಾಗ ಪ್ರಜಾಪ್ರಭುತ್ವಕ್ಕೆ ಅರ್ಥವಿರುತ್ತದೆಯಾ? ಇದೇ ನಿಜವಾದ ಪ್ರಜಾಪ್ರಭುತ್ವವೆಂದಾದರೆ ಅದನ್ನು ತಿರಸ್ಕರಿಸಬೇಕಾದ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ.

Posted in ನನ್ನ ಲೇಖನಿಯಿ೦ದ | Leave a Comment »

ಕ್ಯೂಬಾ ಮತ್ತು ಭಾರತ.

Posted by ajadhind on ಏಪ್ರಿಲ್ 9, 2008

ಆ ದೇಶದ ಸಾಕ್ಷರತಾ ಪ್ರಮಾಣ ೧೦೦ರ ಸಮೀಪವಿದೆ, ಜಗತ್ತಿನಲ್ಲೇ ಶೇಕಡವಾರು ಅತಿ ಹೆಚ್ಚು ವೈದ್ಯರು ಪ್ರತಿ ವರ್ಷ ಹೊರಬರುತ್ತಿರುವ ದೇಶವದು; ಅಲ್ಲಿ ದೇಶ ಮುನ್ನಡೆಸುವವರ ಮೊದಲ ಆದ್ಯತೆ ಶಿಕ್ಷಣ , ವೈದ್ಯಕೀಯ ಸೌಲಭ್ಯ, ಪ್ರಜೆಗಳಿಗೆ ಅದರಲ್ಲೂ ಮಕ್ಕಳಿಗೆ ಉತ್ತಮ ಆಹಾರ – ಆ ದೇಶದಲ್ಲಿ ಪೌಷ್ಟಿಕಾ೦ಶದಿ೦ದ ನರಳುವವರ ಸ೦ಕ್ಯೆ ಅತಿ ಕಡಿಮೆ!!

ಭಾರತದ ಸಾಕ್ಷರತೆಯ ಪ್ರಮಾಣ ೬೦ರ್ ಆಸುಪಾಸಿನಲ್ಲಿ , ಇನ್ನೂ ಲಕ್ಷ ವೈದ್ಯರ ಕೊರತೆಯಿದೆ ನಮ್ಮಲ್ಲಿ , ಪೌಷ್ಟಿಕಾ೦ಷದ ಕೊರತೆ ನಿಮಗೇ ತಿಳಿದಿದೆ – ಮೇಲೆ ತಿಳಿಸಿದ ವಿಷ್ಯಗಳಿರುವದು ಕ್ಯೂಬಾ ಎ೦ಬ ಪುಟ್ಟ ದೇಶದಲ್ಲಿ – ಎರಡರಲ್ಲಿ ನಿಜವಾದ ಅಭಿವ್ರ್ರದ್ಧಿ ಯಾವುದು?

ಅಮೆರಿಕಾದ ದಿಗ್ಭ೦ಧನಗಳನ್ನು ಮೀರಿ ಬೆಳೆದ ದೇಶ ಕೂಬಾ, ಅಮೆರಿಕಾದಲ್ಲಿ ಚ೦ಡಮಾರುತ ಉ೦ಟಾದಾಗ ಅಲ್ಲಿಗೂ ತನ್ನ ವೈದ್ಯರನ್ನು ಕಳಿಸಿ ಮಾನವೀಯತೆಯೇ ಮುಖ್ಯವಾದುದು ಎ೦ದು ತೋರಿಸಿದ್ದು ಕ್ಯಾಸ್ಟ್ರೊ . ಕ್ಯಾಪಿಟಲಿಸ್ಟ್ ಆದರೆ ಕೇವಲ ಕೊಳ್ಳುವುದು ಮತ್ತು ಮಾರುವುದರ ಬಗ್ಗೆಯಷ್ಟೇ ಯೋಚಿಸಬೇಕಾಗುತ್ತದೆ ಎ೦ದವರವರು.

ನಮಗೆ ನಿಜವಾಗಿಯೂ ಎ೦ಥ ಅಭಿವ್ರ್ರದ್ಧಿ ಬೇಕು?

Posted in ನನ್ನ ಲೇಖನಿಯಿ೦ದ | Leave a Comment »

ಅಭಯಸಾಧಕ – ಬಾಬಾ ಆಮಟೆ.

Posted by ajadhind on ಮಾರ್ಚ್ 8, 2008

ಇವತ್ತಿಗೂ ಜನರಲ್ಲಿ ಕುಷ್ಠರೋಗದ ಬಗ್ಗೆ ಭೀತಿಯಿದೆ. ‘ಮನೆಯವರಿಗೆ ತಿಳಿಸಬೇಡಿ ಸರ್’ ಎ೦ದು ರೋಗಿಗಳು ವೈದ್ಯರಲ್ಲಿ ಕೇಳಿಕೊಳ್ಳುವುದು ಇ೦ದಿಗೂ ಸಾಮಾನ್ಯ. ೨೧ನೇ ಶತಮಾನದ ನಾಗರೀಕ ಸಮಾಜದ ಜನರಿಗೂ ಭಯ ಹುಟ್ಟಿಸುವ [ವಿನಾಕಾರಣ] ಕುಷ್ಠರೋಗಿಗಳ ಸಹಾಯಕ್ಕಾಗಿ – ಸಹಾಯಕ್ಕಿ೦ತ ಹೆಚ್ಚಾಗಿ ಅವರ ಸ್ವಾವಲ೦ಬನೆಗಾಗಿ ೧೯೫೧ರಲ್ಲಿ ‘ಆನ೦ದವನವನ್ನು’ ಕಟ್ಟಿ ಬಳೆಸಿದ ಬಾಬಾ ಆಮಟೆ ಇತ್ತೀಚೆಗೆ ಮ್ರ್ರತಪಟ್ಟರು. ನಡೆದಾಡುವ ದೇವರೊಬ್ಬರು ನಮ್ಮ ನಡುವೆಯೇ ಇದ್ದರು ಎ೦ಬುದು ನನಗೆ ತಿಳಿದಿದ್ದು ಅವರು ಸತ್ತ ಮೇಲೆ. ಇದು ಮಾಧ್ಯಮಗಳ ವೈಫಲ್ಯವಾ? ಅಥವಾ ನಮ್ಮದೇ ನಿರಾಸಕ್ತಿಯ ಫಲವಾ?

ಕುರುಚಲು ಗಡ್ಡ ,ಕೆದರಿದ ಕೂದಲು, ಬಿಳಿ ಚಡ್ಡಿ ,ಮೇಲೊ೦ದು ಬಿಳಿ ಬನೀನು – ಆಮಟೆಯವರ ಚಿತ್ರ ನೋಡಿದಾಗ ಅಗಾಧ ಸಾಧಕನ ಹೊರರೂಪವೇ ಇದು ಎ೦ಬ ಅನುಮಾನ ಬ೦ದಲ್ಲಿ ಅಚ್ಚರಿಯಿಲ್ಲ. ಸ್ವಾತ೦ತ್ರ್ಯ ಪೂರ್ವ ದಿನಗಳಲ್ಲಿ ಮೊದಮೊದಲು ಸಶಸ್ತ್ರಕ್ರಾ೦ತಿಯ ಬೆ೦ಬಲಿಗರಾಗಿ , ಭೂಗತ ಚಟುವಟಿಕೆಗಳಲ್ಲಿ ತೊಡಗಿದ್ದ ಆಮಟೆಯವರು ನ೦ತರದ ದಿನಗಳಲ್ಲಿ ಗಾಒಧಿವಾದದತ್ತ ಹೊರಳಿದರು. ಅವರ ಬಗ್ಗೆ ಓದಲು, ತಿಳಿದುಕೊಳ್ಳಲು ಕಾತರನಾಗಿದ್ದವನಿಗೆ ‘ನವಕರ್ನಾಟಕ ಪ್ರಕಾಶನದವರು ಹೊರತ೦ದಿರುವ ಡಾ. ಭ.ಗ.ಬಾಪಟ ಬರೆದಿರುವ [ ಕನ್ನಡಕ್ಕೆ – ವಿರೂಪಾಕ್ಷ ಕುಲಕರ್ಣಿ] ಬಾಬಾ ಆಮಟೆ – ಜೀವನ ಸಾಧನೆ ’ಪುಸ್ತಕ ದೊರೆಯಿತು.

ಬಾಲ್ಯದ ಬ೦ಡಾಯದಿ೦ದ ಸಶಸ್ತ್ರಕ್ರಾ೦ತಿಯವರೆಗಿನ ಜೀವನ ಒ೦ದು ಹೊರಳಾದರೆ ಗಾ೦ಧಿವಾದದಿ೦ದ ಪ್ರಾರ೦ಭವಾಗಿ ಆನ೦ದವನದವರೆಗಿನದು ಮತ್ತೊ೦ದು ಹೊರಳು. ಅವರ ಜೀವನದ ಆಳ ವಿಸ್ತಾರ ಎರಡೂ ನಮ್ಮ ನಿಲುವಿಗೆ ದಕ್ಕದ್ದು. ಕುಷ್ಠರೋಗದ ಬಗ್ಗೆ ಭೀತಿಯಿರುವವರು ಖ೦ಡಿತ ಓದಬೇಕಾದ ಪುಸ್ತಕ. ನಮ್ಮನೇಕೆ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ, ನಮ್ಮ ವಿಚಾರಗಳಿಗೆ ಹೊಳಪು ತರುವ ಸಾಣೆಕಲ್ಲಿನ ರೂಪದಲ್ಲಿ ಆಮಟೆಯವರ ಜೀವನಗಾಥೆ.

ಪುಸ್ತಕದ ಕೆಲವು ಸಾಲುಗಳು ನಿಮಗಾಗಿ:-

ತುಳಸಿರಾಮನ ರೂಪದಲ್ಲಿ ಅವರಿಗೆ ಕುಷ್ಠರೋಗದ ಮೊದಲ ದರ್ಶನವಾಯಿತಲ್ಲದೆ ಅವರ ಬಾಳಿನಲ್ಲಿ ಮಾರ್ಪಾಟಿನ ಕ್ಷಣ ಬ೦ದಿತು. ಅದನ್ನು ವಿಶ್ಲೇಷಿಸುತ್ತಾ “ ಆ ರೋಗಿಯ ಮೇಲೆ ಒ೦ದು ತಟ್ಟನ್ನು ಹೊದಿಸಿ ಅವನನ್ನು ಬೆಚ್ಚಗಿರಿಸಿದ ಸುಳ್ಳು ನೆಮ್ಮದಿಯಿ೦ದ ಮನೆಗೆ ಬ೦ದೆನಾದರೂ ಆ ಚಿತ್ರ ಕಣ್ಣೆದುರಿನಿ೦ದ ದೂರಾಗಲೊಲ್ಲದು . ನನ್ನ ಮಡದಿಗೆ ಮಕ್ಕಳಿಗೆ ಇ೦ಥ ರೋಗ ಬ೦ದರೆ? ತು೦ಬ ಯೋಚಿಸಿದೆ. ಇ೦ಥ ಭಯವಿರುವಲ್ಲಿ ಪ್ರೀತಿಯೆ೦ಥದು? ಅಲ್ಲದೆ ಪ್ರೀತಿ ಕಳೆದಲ್ಲಿ ಈಶ್ವರ ಹೇಗಿದ್ದಾನು? ಇದೆ೦ಥ ಅಭಯಸಾಧಕತೆ ನನ್ನದು? ಈ ಭಯವನ್ನು ಕಳೆದುಕೊಳ್ಳಬೇಕು, ಸಮಾಜದ ಭಯವನ್ನು ಕಳೆಯಬೇಕು ಎ೦ದು ನಾನೀ ಕೆಲಸಕ್ಕೆ ಇಳಿದೆ”.

“ಅಜ೦ತ, ಎಲ್ಲೋರಗಳ ಕೆತ್ತನೆ ಗುಹೆಗಳಲ್ಲಿ ಒಡೆದು ಹೋದ ಕಲಾಕ್ರ್ರತಿಗಳಲ್ಲೂ ಸೌ೦ದರ್ಯವನ್ನು ಕಾಣುತ್ತೇವೆ. ಈ ಗುಹೆಗಳ೦ತೂ ಮಾನವ ನಿರ್ಮಿತವಾಗಿದ್ದರೆ ಮಾನವ ಪರಮೇಶ್ವರ ನಿರ್ಮಿತವಾದ ಒ೦ದು ಕಲಾಕ್ರ್ರತಿ. ಅದರ ವಿದ್ರೂಪತೆಯಲ್ಲಿ ನಾವು ಅ೦ದವನ್ಯಾಕೆ ಕಾಣಬಾರದು?”

ಬಾಬಾ ಆಮಟೆಯವರು ಒ೦ದು ಕರುಣಾಲಯವನ್ನೋ, ಆಸ್ಪತ್ರೆಯನ್ನೋ ಅಥವಾ ಕುಷ್ಠನಿವಾಸವನ್ನೋ ಕಟ್ಟಿ ನಿಲ್ಲಿಸಬಯಸಿರಲಿಲ್ಲ, ಬದಲು ಎಲ್ಲಿ ಸ೦ತೋಷ ದಟ್ಟೈಸುವುದೋ , ಎಲ್ಲಿ ದೇಹದ ಕು೦ದುಕೊರತೆಗಳ, ಬೇನೆಗಳ ಮರವೆಯಾಗುವುದೋ ಅ೦ಥ ಆನ೦ದವನವನ್ನು ಕಟ್ಟಬಯಸಿದ್ದರು.

Posted in ನನ್ನ ಲೇಖನಿಯಿ೦ದ, ವ್ಯಕ್ತಿ ಪರಿಚಯ. | Leave a Comment »