ಹೋರಾಟದ ಹಾದಿ

ಆದರ್ಶವಾದಿಗಳಿಗೆ ಕೊನೆಯಿರಬಹುದು, ಆದರ್ಶಕ್ಕಲ್ಲ.

ಪಬ್ಬು ಮತ್ತು ಮಬ್ಬು.

Posted by ajadhind on ಫೆಬ್ರವರಿ 10, 2009

ಮೊನ್ನೆ ಮೊನ್ನೆ ಕರ್ನಾಟಕದಿಂದ ಕೇರಳಕ್ಕೆ ಲಾರಿಯೊಂದು ಸಾಗುತ್ತಿತ್ತು. ಕಂಟೈನರ್ ಹೊತ್ತಿದ್ದ ಲಾರಿ. ಕಂಟೈನರ್ ಗೊತ್ತಿರಬೇಕು ನಿಮಗೆ; ಕಬ್ಬಿಣದ ದೊಡ್ಡ ಡಬ್ಬಿ, ಆರೂ ಕಡೆಯಿಂದ ಗಾಳಿಯಾಡಲು ಸ್ವಲ್ಪವೂ ಅನುಕೂಲವಿರುವುದಿಲ್ಲ. ಇಂತಿಪ್ಪ ಲಾರಿ ಕರ್ನಾಟಕ, ಕೇರಳದ ಬಿಗಿ ಭದ್ರತೆಯ ಗಡಿ ದಾಟಿ ಕೇರಳದ ಹಳ್ಳಿಯೊಂದರಲ್ಲಿ ಸಾಗುತ್ತಿತ್ತು. ಅಲ್ಲೇ ಹರಟುತ್ತಿದ್ದ ಯುವಕರಿಗೆ ಲಾರಿಯಿಂದ ಮಕ್ಕಳು ಅಳುವ ಶಬ್ದ ಕೇಳಿ ಬಂತು, ಅ ಯುವಕರು ಲಾರಿ ತಡೆದು ಕಂಟೈನರ್ ಬಾಗಿಲು ತೆಗೆಸಿದರೆ ಕಂಡಿದ್ದು ಕುರಿಮಂದೆಯ ರೀತಿ ತುಂಬಿದ್ದ ನಲವತ್ತು ಹೆಂಗಸರು ಮತ್ತು ಮಕ್ಕಳು. ಉಸಿರಾಟಕ್ಕೆ ಗಾಳಿ ಸಿಗದೇ ಮಕ್ಕಳು ಅಳುತ್ತಿದ್ದವು.
ಅಷ್ಟೂ ಜನ ಕೇರಳಕ್ಕೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಗುತ್ತಿಗೆದಾರನೊಬ್ಬ ಈ ವ್ಯವಸ್ಥೆ ಮಾಡಿದ್ದ. ಅಲ್ಲಿದ್ದವರು ಮುಸ್ಲಿಮರಾ? ಹಿಂದುಗಳಾ? ಬಡವರ ಧರ್ಮ ಯಾವುದಾದರೇನು?
‘ಹಿಂದೂ ಹೆಂಗಸರಿಗೆ ಅವಮಾನ’ ಎಂದು ಯಾರು ಬೊಬ್ಬಿಡಲಿಲ್ಲ. ಪಾಪ ಅವರಿಗೆ ಸಿರಿವಂತರು ದುಡ್ಡು ಪೋಲು ಮಾಡುವುದನ್ನು ತಪ್ಪಿಸಲೇ ಸಮಯವಿಲ್ಲ. ಒಂದಷ್ಟು ಪತ್ರಿಕೆಗಳ ಮುಖಪುಟಗಳಲ್ಲಿ, ಬಹಳಷ್ಟರ ಒಳಪುಟಗಳಲ್ಲಿ ಸುದ್ದಿಯಾಯಿತು. ಯಾವ ಟಿ.ವಿಯವನೂ ಮುಖ್ಯಮಂತ್ರಿಯ ಮುಖಕ್ಕೆ ಮೈಕ್ ಹಿಡಿದು ‘ ಇಂಥ ಘಟನೆ ನಡೆದಿದೆಯಲ್ಲಾ ನಾಚಿಕೆಯಾಗೊಲ್ವಾ ನಿಮಗೆ’ ಅಂಥ ಕೇಳಲಿಲ್ಲ. ರಾಷ್ಟ್ರೀಯ ವಾಹಿನಿಗಳಿಗೆ ಇದು ‘ ಹಾರರ್’ ವಿಷಯವಾಗಿ ಕಾಣಲಿಲ್ಲ. ಪಾಪ ಕೇಂದ್ರ ಮಂತ್ರಿಗಳಿಗೆ ‘ಪಬ್ ಭರೋ ‘ ಮಾಡಿಸುವ ಆತುರ.
ನಲವತ್ತು ಮಂದಿ ಮಕ್ಕಳು ಹೆಂಗಸರು ಅನುಭವಿಸಿದ ಸಂಕಟಕ್ಕಿಂತ ನಾಲ್ಕು ಮಂದಿ ಸಿರಿವಂತರಿಗೆ ಬಿದ್ದ ಹೊಡೆತ ಹೆಚ್ಚಿನದಾಗಿ ಹೋಯಿತಾ ನಮಗೆ!?
ಕೊನೆಗೆ ಈ ಭಾರತ ದೇಶ ಯಾರಿಗೆ ಸೇರಿದ್ದು ? ಉತ್ತರ ತಿಳಿದಿರಬೇಕಲ್ಲ…….
ಜೈ ಭಾರತಾಂಬೆ.

6 Responses to “ಪಬ್ಬು ಮತ್ತು ಮಬ್ಬು.”

  1. chetana chaitanya said

    haudu. nAchikegeDina sangati idu.
    khanDita ee bagge gottiralilla. mAhitige dhanyavAda.

  2. kallare said

    well said…

  3. I am shocked!
    ಈ ವಿಷಯ ಪತ್ರಿಕೆಯವರಿಗೂ ಮುಖ್ಯವಾದಂತೆ ತೋರುತ್ತಿಲ್ಲ.

  4. ಹೌದ್ರೀ, ಇವತ್ತಿನ ಮಾಧ್ಯಮಗಳು ಬರೀ ಬೇಜವಾಬ್ದಾರಿಗಳು..

  5. Pramod said

    huh…We have great journalism in India!!

  6. kranthikari said

    ಶ್ರೀಮoತರ ಮತು ಹದೆಹರೆ ಯವರ ಬಗೆ ಬರೆಯೋಕೆ ಜಾಗ ಸಲೋಲ ಇರವರೆಗೆ , ಇನ್ನು ಬಡವರ ಬಗೆ ಬರೆಯೋಕೆ ಜಾಗ ಎಲ್ಲಿ..!!!!

Leave a reply to Pramod ಪ್ರತ್ಯುತ್ತರವನ್ನು ರದ್ದುಮಾಡಿ